ಸಾರಾಂಶ
ಗುತ್ತಲ: ಕನ್ನಡದ ಮೇಲಿನ ಅಭಿಮಾನವನ್ನು ಆಚರಣೆಗೆ ಸೀಮಿತಗೊಳಿಸದೆ ಪ್ರತಿನಿತ್ಯದ ಜೀವನದಲ್ಲಿ ಮಾತೃಭಾಷೆ ಕನ್ನಡವನ್ನು ಹೆಚ್ಚು ಬಳಸಿ, ಬೆಳೆಸಬೇಕು ಎಂದು ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಪಟ್ಟಣದ ರುದ್ರಮುನಿ ಶಿವಯೋಗೀಶ್ವರ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಆಯೋಜಿಸಿದ 70ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕರ್ನಾಟಕ ರಾಜ್ಯವಾಗುವ ಮೊದಲು ಅನೇಕ ಸಾಮ್ರಾಜ್ಯಗಳು ರಾಜ ವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡನಾಡನ್ನು ಆಲೂರ ವೆಂಕಟರಾಯರು ಒಂದು ಮಾಡಿದ ಹೆಮ್ಮೆಯ ದಿನವಾಗಿದೆ. ಬಹು ಸಂಸ್ಕೃತಿ, ಬಹು ಮಾದರಿಯ ಜನಾಂಗ, ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ಕರುನಾಡಾಗಿದೆ. ಕನ್ನಡ ನಾಡು, ನುಡಿಯ ಬಗ್ಗೆ ಸಮಸ್ಯೆಗಳು ಎದುರಾದರೆ ಕೇವಲ ಕನ್ನಡಪರ ಸಂಘಟನೆಯವರು ಹೋರಾಟ ಮಾಡದೇ ಪ್ರತಿಯೊಬ್ಬ ಕನ್ನಡಿಗನು ಕಾಳಜಿ ವಹಿಸಬೇಕು ಎಂದರು.ಪಿಎಸ್‌ಐ ಬಸವರಾಜ ಬಿರಾದಾರ ಮಾತನಾಡಿ, ನವೆಂಬರ್ 1 ಕನ್ನಡಿಗರ ಪಾಲಿಗೆ ನಾಡ ಹಬ್ಬವಿದ್ದಂತೆ, ಕನ್ನಡ ಭಾಷೆಗೆ ಸುಮಾರು ವರ್ಷಗಳ ಇತಿಹಾಸವಿದೆ. ಕರುನಾಡ ಜನರ ಉಸಿರಿನಲ್ಲಿ ಕನ್ನಡ ಭಾಷೆ ಹಸಿರಾಗಿ ಉಳಿದಿದೆ, ಭಾರತ ದೇಶ ಅದರಲ್ಲು ಕರ್ನಾಟಕ ರಾಜ್ಯದಲ್ಲಿ ಜನಿಸಿದ ನಾವು ಪುಣ್ಯವಂತರು. ಪಟ್ಟಣದ ಯುವಕರು ಕನ್ನಡ ನಾಡಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಕನ್ನಡ ನಾಡಿನ ಮೇಲಿರುವ ಮಹತ್ವವನ್ನು ತಿಳಿಸುತ್ತದೆ ಎಂದರು.ಕರವೇ ತಾಲೂಕು ಅಧ್ಯಕ್ಷ ಹಾಲೇಶ ಹಾಲಣ್ಣನವರ ಮಾತನಾಡಿ, ಕನ್ನಡ ಭಾಷೆಯ ಮೇಲಿನ ಅಭಿಮಾನ ಹೆಚ್ಚಾಗಬೇಕು. ಕರ್ನಾಟಕದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಸಮಸ್ಯೆ ಎದುರಾದಾಗ ಕೇವಲ ಸಂಘಟನೆಗಳಿಗೆ ಸೀಮಿತವಾಗಿದ್ದು ಎಂದು ತಿಳಿಯದೆ ಎಲ್ಲರೂ ಹೋರಾಟಕ್ಕೆ ಸಜ್ಜಾಗಬೇಕು. ರಾಜಕಾರಣಿಗಳು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಕನ್ನಡ ನಾಡು, ನುಡಿಯ ಬಗ್ಗೆ ಮಾತನಾಡುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಪಿಎಸ್‌ಐ ಎ.ಆರ್. ಮುಂದಿನಮನಿ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಮಾಜಿ ಉಪಾಧ್ಯಕ್ಷ ನಾಗರಾಜ ಎರಿಮನಿ, ಪಿಕೆಪಿಎಸ್ ಸೊಸೈಟಿ ಅಧ್ಯಕ್ಷ ಚನ್ನಪ್ಪ ಬನ್ನಿಮಟ್ಟಿ, ಕಸಾಪ ಹೋಬಳಿ ಘಟಕದ ಗೌರವಾಧ್ಯಕ್ಷ ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಕಾರ್ಯದರ್ಶಿ ನೀಲಕಂಠಯ್ಯ ಓದಿಸೋಮಠ, ಕೋಶಾಧ್ಯಕ್ಷ ಪ್ರಕಾಶ ಸೊಪ್ಪಿನ, ಶಂಕ್ರಪ್ಪ ಚಂದಾಪುರ, ಪಿ.ಕೆ. ನಿಂಗಪ್ಪ, ರಾಜಶೇಖರಯ್ಯ ಸಾಲಿಮಠ, ಜಗದೇವಯ್ಯ ಕೂಡಲಮಠ, ಮೃತ್ಯುಂಜಯ ಬುಕ್ಕಶೆಟ್ಟರ, ಚಂದ್ರಶೇಖರಯ್ಯ ಕೋವಳ್ಳಿಮಠ, ಹಿಂಜಾವೇ ಸದಸ್ಯರಾದ ರಾಜು ಕೂಡಲಮಠ, ಕುಮಾರ ಚಿಗರಿ, ಮಂಜುನಾಥ ಯರವಿನತಲಿ, ಮೃತ್ಯುಂಜಯ ರಿತ್ತಿಮಠ, ಡಾ. ಪ್ರಶಾಂತಕುಮಾರ ಬೆನ್ನೂರ, ಪ್ರಕಾಶ ಹೊನ್ನಮ್ಮನವರ, ಫಕೃದ್ದೀನ ಅಂಗಡಿಕಾರ, ದಾದಾಪೀರ ಕಲಾರಿ, ಕುಮಾರ ರಾಮಾಪುರಮಠ ಹಾಗೂ ಹಿಂದು ಜಾಗರಣ ವೇದಿಕೆ ಸದಸ್ಯರು, ಕಸಾಪ ಹೋಬಳಿ ಘಟಕದ ಪದಾಧಿಕಾರಿಗಳು, ಕರವೇ ಸದಸ್ಯರು, ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಅನೇಕರಿದ್ದರು.
;Resize=(128,128))
;Resize=(128,128))