ಸಾರಾಂಶ
ರೋಟರಿ ಶಾಲೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಮಾತೃಭಾಷೆಗೆ ಪ್ರಾಮುಖ್ಯತೆ ಕೊಡಬೇಕು ಎಂದು ಪಟ್ಟಣದ ರೋಟರಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ, ದಂತ ವೈದ್ಯ ಡಾ.ಜಿ.ಸಿ.ಶರತ್ ಹೇಳಿದ್ದಾರೆ.
ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಹಿಳಾ ಘಟಕ, ನಗರ ಘಟಕ, ಯುವ ಘಟಕ ಸಂಯುಕ್ತಾಶ್ರಯದಲ್ಲಿ ರೋಟರಿ ಶಾಲೆಯಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಇದು ಬಹಳ ಅಪರೂಪದ ಕಾರ್ಯಕ್ರಮ. ಕನ್ನಡ ಭಾಷೆ ಸಮೃದ್ಧವಾಗಿದೆ ಎಂದು ಹೇಳಿದರು.ತರೀಕೆರೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಜಗದೀಶ್ ಬಾಗೋಡಿ ಕನ್ನಡ ಸಾಹಿತ್ಯ ಪರಂಪರೆ ಯಲ್ಲಿ ನಾಟಕ ರಂಗ ಪ್ರಯೋಗ ವಿಷಯ ಕುರಿತು ಮಾತನಾಡಿ ಸಾಹಿತ್ಯವನ್ನು ಸಂಭ್ರಮವನ್ನಾಗಿ ಮಾಡಿಕೊಳ್ಳಬೇಕು, ಸಾಹಿತ್ಯಕ ವಾತಾವರಣ ಮನೆಯಲ್ಲೂ ಇರುತ್ತದೆ. ಒಳಿತನ್ನು ಸಮಾಜಕ್ಕೆ ನೀಡಬೇಕು. ಈ ಭೂಮಿ ಒಂದು ರಂಗಭೂಮಿ, ಒಂದು ನಾಟಕ ರಂಗ, ನಾವು ನೀವು ನಟರು, ದೇವರು ಸೂತ್ರದಾರ ಎಂದು ಹೇಳಿದರು.
ರಂಗೇನಹಳ್ಳಿ ಸಾಹಿತಿ ಮರುಳಸಿದ್ದಯ್ಯ ಪಟೇಲ್ ಮಾತನಾಡಿ ರೋಟರಿ ಸಂಸ್ಥೆ ಸಾಮಾಜಿಕೆ ಸೇವೆ ಸಲ್ಲಿಸುತ್ತಿದೆ. ಶ್ರಾವಣ ಮಾಸ ಹಬ್ಬಗಳ ಸಾಲು ಶುರುವಾಗುತ್ತದೆ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ರೋಟರಿ ಸಂಸ್ಥೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದು ತಿಳಿಸಿದ ಅವರು ಸುಶ್ರಾವ್ಯವಾಗಿ ಗೀತೆ ಹಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮ ಮನ ಮಟ್ಟುವಂತೆ ಮೂಡಿ ಬಂದಿದೆ. ಚಿಕ್ಕವರಿಗೆ, ಹಿರಿಯರಿಗೆ ಮನೆಯಂಗಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕನ್ನಡ ಬೆಳೆಸುವ ಕಾರ್ಯ ಆಗಬೇಕು. ಶ್ರಾವಣ ಮಾಸದಲ್ಲಿ ನಿತ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸಿದರೆ ಭವಿಷ್ಯ ಉಜ್ವಲವಾಗುತ್ತದೆ. ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಹೇಳಿದರು.ಮಂಜುನಾಥ್ ಗೀತೆ ಹಾಡಿದರು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಉಮಾ ದಯಾನಂದ್, ಕಾರ್ಯದರ್ಶಿ ಸುನಿತಾ ಕಿರಣ್, ಲೇಖಕ ತ.ಮ.ದೇವಾನಂದ್, ಶಾಲೆ ಮುಖ್ಯೋಪಾಧ್ಯಾಯ ಶ್ರೀನಿವಾಸ್, ದೈಹಿಕ ಶಿಕ್ಷಕರು ಮಲ್ಲೇಶ್, ಶಿಕ್ಷಕಿ ಸಾವಿತ್ರಮ್ಮ ಶಾಲೆ ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
28ಕೆಟಿಆರ್.ಕೆ.6ಃತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಶ್ರಾವಣ ಸಾಹಿತ್ಯ ಸಂಭ್ರಮ ರೋಟರಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ, ದಂತ ವೈದ್ಯ ಡಾ.ಜಿ.ಸಿ.ಶರತ್ ಉದ್ಘಾಟಿಸಿದರು. ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡ ಶ್ರೀ ಬಿ.ಎಸ್.ಭಗವಾವ್, ರಂಗೇನಹಳ್ಳಿ ಸಾಹಿತಿ ಮರುಳುಸಿದ್ದಯ್ಯ ಪಾಟೀಲ್, ಲೇಖಕ ತ.ಮ.ದೇವಾನಂದ್ ಮತ್ತಿತರರು ಇದ್ದರು.