ಸಾರಾಂಶ
ರೋಣ: ಮಕ್ಕಳು ಭವಿಷ್ಯದಲ್ಲಿ ಯಶಸ್ಸು ಹೊಂದಲು ತಾಯಿಯ ಶ್ರಮ ಅಪಾರವಾಗಿದ್ದು, ಈ ದಿಶೆಯಲ್ಲಿ ಮಕ್ಕಳ ಉತ್ತಮ ಬೆಳವಣಿಗೆಯಿಂದ ತಾಯಿ ಸದಾ ಮಾರ್ಗದರ್ಶನ ಅತೀ ಮುಖ್ಯವಾಗಿದೆ ಎಂದು ಬೆಂಗಳೂರ ಹೃದಯ ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದರಿ ಹೇಳಿದರು.
ಅವರು ಮಂಗಳವಾರ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಮಾತೋಶ್ರೀ ಬಸಮ್ಮ ಎಸ್.ಪಾಟೀಲ ಅವರ 20ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿದರು.ಮಕ್ಕಳ ಯಶಸ್ಸು ತಾಯಿಯ ಕೀರ್ತಿ ಹೆಚ್ಚಿಸುತ್ತದೆ. ಎಲ್ಲಿ ಶುಚಿತ್ವ ಇರುತ್ತದೆ ಅಲ್ಲಿ ದೈವತ್ವವಿರುತ್ತದೆ. ಮಕ್ಕಳಲ್ಲಿ ಸದ್ವಿಚಾರ, ಸದ್ಬಾವನೆ ತುಂಬಬೇಕು. ಅಂದಾಗ ಸಮಾಜಕ್ಕೆ ಒಳಿತನ್ನು ಮಾಡಿದಂತಾಗುತ್ತದೆ. ಪ್ರತಿ ಮಗುವಿಗೂ ತಾಯಿಯೇ ಮೊದಲ ಗುರುವಾಗಿದ್ದಾಳೆ. ಗೃಹಿಣಿಯ ಜವಾಬ್ದಾರಿ ಆಧುನಿಕ ದಿನಮಾನಗಳಲ್ಲಿ ಕುಟುಂಬಕ್ಕೆ ಸೀಮಿತವಾಗದೇ ಸಮಾಜಕ್ಕೂ ಹೆಚ್ಚುತ್ತಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಲು ಮಹಿಳೆಯರು ಶಿಕ್ಷಣವಂತರಾಗುವುದು ಅತಿ ಮುಖ್ಯವಾಗಿದೆ. ಸಂಸ್ಕಾರಯುತ ತಾಯಿ ತನ್ನ ಮಗುವಿಗೆ ಉತ್ತಮ ವಿಚಾರ ಸಂಪ್ರದಾಯ ಧಾರೆ ಎರೆಯುವ ಮೂಲಕ ಆ ಮಗು ಭವಿಷ್ಯದ ಉತ್ತಮ ನಾಗರಿಕರಾಗಿ ಬೆಳೆಯುವಂತಾಗುತ್ತದೆ ಎಂದರು.
ದೇಶ ಕಂಡ ಮಹಾ ನಾಯಕರುಗಳು ಅವರ ತಾಯಿಯಿಂದ ಪಡೆದ ಉತ್ತಮ ವಿಚಾರಗಳೇ ಅವರುಗಳ ವ್ಯಕ್ತಿತ್ವ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ನಾವು ಇತಿಹಾಸ ಪುಟದಿಂದ, ಪ್ರಸ್ತುತ ಸನ್ನಿವೇಶದಲ್ಲಿ ಕಾಣುತ್ತಿದ್ದೇವೆ. ನಾಡು ಕಂಡ ಶರಣರ ತತ್ವಗಳನ್ನು ಪ್ರತಿ ಮಹಿಳೆಯರು ಪಾಲಿಸುವ ಮೂಲಕ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾರಣರಾಗಬೇಕು. ಕೆಳದಿ ಚನ್ನಮ್ಮ, ಕಿತ್ತೂರ ಚೆನ್ನಮ್ಮ, ಒಣಿಕೆ ಓಬವ್ವ, ಬೆಳವಡಿ ಮಲ್ಲಮ್ಮ, ಹೇಮರಡ್ಡಿ ಮಲ್ಲಮ್ಮನ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮವನ್ನು ಸಮಾಜ ಸೇವಕಿ ಅನ್ನಪೂರ್ಣ .ವಿ. ನಾಡಗೌಡ್ರ ನೆರವೇರಿಸಿದರು. ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಅನ್ನಪೂರ್ಣ.ಜಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ರೋಣ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಜನನಿ ಮಹಿಳಾ ಮಂಡಳ ಅಧ್ಯಕ್ಷೆ ಈರಮ್ಮ.ಐ. ಪಾಟೀಲ, ಗಿರಿಜಮ್ಮ ಪಾಟೀಲ, ಶಶಿಕಲಾ ಪಾಟೀಲ, ರೂಪ ಅಂಗಡಿ, ಶೋಭಾ ಮೇಟಿ, ಜ್ಯೋತಿ ಕುರಿ, ರಂಗಮ್ಮ ಭಜಂತ್ರಿ, ರೇಣುಕಾ ಕೊರ್ಲಹಳ್ಳಿ, ಲಕ್ಷ್ಮಿ ಗಡಗಿ, ಗೀತಾ ಕೊಪ್ಪದ, ವಿದ್ಯಾ ಬಡಿಗೇರ, ಯಮನಮ್ಮ ಜಮ್ಮನಕಟ್ಟಿ, ವಿದ್ಯಾ ದೊಡ್ಮನಿ, ನಾಜಬೇಗಂ ಎಲಿಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪ್ರಮೀಳಾ ತೋಟಗಂಟಿ ನಿರೂಪಿಸಿ ವಂದಿಸಿದರು.