ಸಾರಾಂಶ
ಮುಂಡರಗಿ: 12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಹಾದಿಯಲ್ಲಿ ಯುವಜನತೆ ನಡೆಯುವಂತಾಗಬೇಕು. ನಡೆ- ನುಡಿ- ಕಾಯಕ-ದಾಸೋಹ ಸಮಾಜದ ಮಂತ್ರ ಆಗಬೇಕು ಎಂದು ಪುರಸಭೆ ಸದಸ್ಯ ಪ್ರಲ್ಹಾದ ಹೊಸಮನಿ ತಿಳಿಸಿದರು.ಇತ್ತೀಚೆಗೆ ತಾಲೂಕು ಕಸಾಪ, ಶಸಾಪ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆ ಸೌರಭ ಇವುಗಳ ಆಶ್ರಯದಲ್ಲಿ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಶರಣ ಚಿಂತನ ಮಾಲೆ- 29 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾನಿಗಳ ಸಹಕಾರದಿಂದ ಮುಂಡರಗಿಯಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಿದೆ. ನಾನೂ ಸಹಾಯ ಮಾಡುವುದರ ಜತೆಗೆ ಪುರಸಭೆಯಿಂದಲೂ ಸಹಾಯಹಸ್ತ ನೀಡುವಂತೆ ಪ್ರಯತ್ನಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಬನ್ನಿಕೊಪ್ಪದ ಜ.ಅ. ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಎಸ್.ಎಸ್. ಮಠದ ಶರಣ ಮರುಳ ಶಂಕರ ದೇವರು ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾ.ನಿ. ಪತ್ರಕರ್ತರ ಸಂಘದ ಕಾರ್‍ಯಕಾರಿಣಿ ಸದಸ್ಯರಾಗಿ ಆಯ್ಕೆಯಾಗಿರುವ ಸಂತೋಷಕುಮಾರ ಮುರಡಿ ಹಾಗೂ ಮಾಹಾಲಿಂಗಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಗೇಶ ಹುಬ್ಬಳ್ಳಿ, ಎಸ್.ಬಿ.ಕೆ. ಗೌಡರ, ಶಂಕರ ಕುಕನೂರ, ಎ.ವೈ. ನವಲಗುಂದ, ಡಾ. ನಿಂಗು ಸೊಲಗಿ, ಸಿ.ಕೆ. ಗಣಪ್ಪನವರ, ಎನ್.ಎಸ್. ಅಲ್ಲಿಪೂರ, ಆರ್.ಕೆ. ರಾಯನಗೌಡ್ರ, ವಿ.ಎಫ್. ಗುಡದಪ್ಪನವರ, ಎಸ್.ಬಿ. ಹಿರೇಮಠ, ಕೊಟ್ರೇಶ ಜವಳಿ, ಎಂ.ಎಸ್. ಹೊಟ್ಟಿನ, ಸುರೇಶ ಭಾವಿಹಳ್ಳಿ, ಕೃಷ್ಣಾ ಸಾಹುಕಾರ ಉಪಸ್ಥಿತರಿದ್ದರು.ಎನ್.ಎನ್. ಕಲಕೇರಿ ಸ್ವಾಗತಿಸಿದರು. ಕಾಶಿನಾಥ ಬಿಳಿಮಗ್ಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ನಿರೂಪಿಸಿದರು. ವೀಣಾ ಪಾಟೀಲ ವಂದಿಸಿದರು.
;Resize=(128,128))
;Resize=(128,128))
;Resize=(128,128))