ಸಾರಾಂಶ
ಗುರುಮಠಕಲ್: ಪ್ರತಿಭೆ ಎಲ್ಲರಲ್ಲಿ ಇರುತ್ತದೆ. ಇದನ್ನು ಗುರುತಿಸಿಕೊಂಡು ಆತ್ಮವಿಶ್ವಾಸದೊಂದಿಗೆ ಪ್ರಯತ್ನ ಮಾಡಬೇಕು ಎಂದು ಮಲ್ಹಾರ ಕಾರಡ್ಡಿ ಬಸವಂತ್ರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಹೇಳಿದರು.
ಸಮೀಪದ ಸೈದಾಪುರದ ಮಲ್ಹಾರ ಕಾರಡ್ಡಿ ಬಸವಂತ್ರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.ತಂದೆ-ತಾಯಿಗಳು ಮಕ್ಕಳ ಬದುಕಿನ ಕನಸನ್ನು ಕಂಡಿರುತ್ತಾರೆ. ಅವರಿಗೆ ಗೌರವ ತರುವ ರೀತಿಯ ವರ್ತನೆ ನಮ್ಮದಾಗಬೇಕು. ಅಂದಾಗ ನಾವು ಕಲಿತ ಶಿಕ್ಷಣಕ್ಕೆ ಮಹತ್ವ ಬರುತ್ತದೆ ಎಂದರು.
ಲಿಂಗೇರಿ ಸ್ಟೇಷನ್ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ ತಳಿಬಿಡಿ ಮಾತನಾಡಿ, ಗ್ರಾಮೀಣ ಭಾಗದ ಮೊದಲನೇ ತಲೆಮಾರಿನ ವಿದ್ಯಾರ್ಥಿಗಳಾದ ನಮ್ಮ ಕನಸು ನನಸಾಗಬೇಕಾದರೆ ಗುರುಗಳ ಮಾರ್ಗದಶನ ಅತ್ಯವಶ್ಯಕವಾಗಿದೆ. ಅವರನ್ನು ಗೌರವದಿಂದ ಕಾಣುವ ಜೊತೆಗೆ ಸತತ ಪರಿಶ್ರಮದಿಂದ ಪ್ರಯತ್ನ ಮಾಡಿದಾಗ ಮಾತ್ರ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ಹೇಳಿದರು.ಮುಖ್ಯಗುರು ಲಿಂಗಾರೆಡ್ಡಿ ನಾಯಕ ಮಾತನಾಡಿದರು. ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಆನಂಪಲ್ಲಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಉಪನ್ಯಾಸಕರಾದ ದೇವಿಂದ್ರ ಪೀರಾ, ಬಸವರಾಜ ಭರಮಶೆಟ್ಟಿ, ಶಾಂತಲ್ ಎನ್., ರಾಜಶೇಖರ ಪಾಟೀಲ್, ಅನುರಾಧ, ಇಂದಿರಾ ತೂರೆ, ಸದಾಶಿವ ಸೇರಿದಂತೆ ಇತರರಿದ್ದರು. ತಾಯಮ್ಮ ಪ್ರಾರ್ಥಾನೆ ಗೀತೆ ಹಾಡಿದರು. ಕರಬಸಯ್ಯ ದಂಡಿಗಿಮಠ ಸ್ವಾಗತಿಸಿದರು. ಉಪನ್ಯಾಶಕ ಚಂದ್ರಶೇಖರ ಡೊಣ್ಣೆಗೌಡ ನಿರೂಪಿಸಿದರು.