ಸಾರಾಂಶ
ಅವರು ಯೋಧರೊಂದಿಗೆ ಸಿಹಿ ಹಂಚಿಕೊಂಡು, ಉಭಯ ಕುಶಲೋಪರಿ ನಡೆಸುವ ಮೂಲಕ ದೀಪಾವಳಿ ಆಚರಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಕರಾವಳಿ ಭದ್ರತಾ ಪಡೆಯ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು.ಕ್ಯಾ. ಚೌಟ ಅವರು ಶುಕ್ರವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ದೀಪಾವಳಿ ಆಚರಿಸಿದ್ದು, ಸಂಜೆ ಪಣಂಬೂರಿನಲ್ಲಿರುವ ಕರಾವಳಿ ಭದ್ರತಾ ಪಡೆಯ ಮಂಗಳೂರು ಘಟಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಯೋಧರೊಂದಿಗೆ ಸಿಹಿ ಹಂಚಿಕೊಂಡು, ಉಭಯ ಕುಶಲೋಪರಿ ನಡೆಸುವ ಮೂಲಕ ದೀಪಾವಳಿ ಆಚರಿಸಿದರು.
ಈ ವೇಳೆ ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ಇದ್ದರು.