ಕನ್ನಡಪ್ರಭ ವಾರ್ತೆ ವಿಜಯಪುರ ಸಂಸದರು ತಪ್ಪು ಗ್ರಹಿಕೆಯಲ್ಲಿದ್ದಾರೆ, ಅರ್ಥ ಮಾಡಿಕೊಳ್ಳಬೇಕಿದೆ. ಯಡಿಯೂರಪ್ಪಗೆ ಪೂರ್ಣಾವಧಿ ಅಧಿಕಾರ ಮಾಡಲು ಬಿಟ್ಟಿಲ್ಲ. ಇನ್ನು ಇವರನ್ನು ಯಾರು ಕೇಳುತ್ತಾರೆ? ಎಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಂಸದ ಜಿಗಜಿಣಗಿ ಹೇಳಿಕೆಗೆ ತಿರುಗೇಟು ನೀಡಿದರು.ಬಿಜೆಪಿಯಲ್ಲೇ ದಲಿತ ಸಿಎಂ ಆಗುತ್ತಾರೆಂದು ಸಂಸದ ರಮೇಶ ಜಿಗಜಿಣಗಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಂಸದರು ತಪ್ಪು ಗ್ರಹಿಕೆಯಲ್ಲಿದ್ದಾರೆ, ಅರ್ಥ ಮಾಡಿಕೊಳ್ಳಬೇಕಿದೆ. ಯಡಿಯೂರಪ್ಪಗೆ ಪೂರ್ಣಾವಧಿ ಅಧಿಕಾರ ಮಾಡಲು ಬಿಟ್ಟಿಲ್ಲ. ಇನ್ನು ಇವರನ್ನು ಯಾರು ಕೇಳುತ್ತಾರೆ? ಎಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಂಸದ ಜಿಗಜಿಣಗಿ ಹೇಳಿಕೆಗೆ ತಿರುಗೇಟು ನೀಡಿದರು.ಬಿಜೆಪಿಯಲ್ಲೇ ದಲಿತ ಸಿಎಂ ಆಗುತ್ತಾರೆಂದು ಸಂಸದ ರಮೇಶ ಜಿಗಜಿಣಗಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಂದೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂಬದಿ ಬಾಗಿಲಿನಲ್ಲಿ, ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಕಾರಣ ರಮೇಶ ಜಿಗಜಿಣಗಿ ಅವರ ದಲಿತ ಸಿಎಂ ಕನಸು ಬಿಜೆಪಿಯಲ್ಲಿ ಈಡೇರಲ್ಲ. ಅದು ಕನಸಾಗೆ ಉಳಿಯುತ್ತದೆ ಎಂದರು. ಒಂದು ದಿನ ಎಲ್ಲದಕ್ಕೂ ಬೇಸತ್ತು ಕೋಮುವಾದಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬರುವ ಸಂದರ್ಭ ಬರುತ್ತದೆ ಎಂದರು.ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ, ನನಗೆ ಖುಷಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೂ ನಾಟಕಿಯ ಮಾತುಗಳು. ಹೆಚ್ಚಿನ ಶಾಸಕರು ಬಂದಿದ್ದರೆ ಅವರು ಹಿಂದೆ ಸಿಎಂ ಆಗುತ್ತಿದ್ದರು. ಆದರೆ, ಈಗ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರ ಕೆಳಗೆ ಹತ್ತಾರು ಸಿಎಂ ಕೆಲಸ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷ ಸ್ಥಾನ ಶ್ರೇಷ್ಠ ಸ್ಥಾನ. ಗಾಂಧೀಜಿ ಸಹ ಎಐಸಿಸಿ ಆಧ್ಯಕ್ಷರಾಗಿದ್ದರು. ಅಂತಹ ಸ್ಥಾನದಲ್ಲಿ ಖರ್ಗೆಯವರು ಇದ್ದಾರೆ. ಸಂಸದರ ಈ ನಾಟಕ ಉಪಯೋಗವಾಗಲ್ಲ ಎಂದರು.
ಕೆಪಿಸಿಸಿ ಸ್ಥಾನಕ್ಕೆ ಎಂ.ಬಿ.ಪಾಟೀಲ ಆಕಾಂಕ್ಷಿಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ನಾಲ್ಕು ಗೋಡೆಗಳ ಒಳಗೆ ಮಾತನಾಡುವೆ ಎಂದು ಹೇಳಿದರು.ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಚಿವ ಸಂಪುಟ ಪುನಾರಚನೆ ಎಲ್ಲವನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮ ಕೈಯಲ್ಲಿ ಇಲ್ಲ, ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. 20 ಶಾಸಕರ ದೆಹಲಿ ಪ್ರವಾಸ ತಪ್ಪಲ್ಲ. ನಮ್ಮ 135 ಶಾಸಕರಿಗೆ ಸಚಿವರಾಗುವ ಅರ್ಹತೆ ಅಧಿಕಾರವಿದೆ. ಅದರಲ್ಲಿ ಯಾವುದೂ ತಪ್ಪಿಲ್ಲ.- ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ
