ಸಾರಾಂಶ
ಸಂಸದ ಶ್ರೇಯಸ್ ಪಟೇಲ್ ತಮ್ಮ ಪತ್ನಿ ಹಾಗೂ ತಾಯಿ ಅನುಪಮಾ ಅವರು ತಮ್ಮ ಎಳೆಯ ಕಂದಮ್ಮಗಳನ್ನು ಕೈಯಲ್ಲಿ ಹಿಡಿದು ದೇವಾಲಯದೊಳಗೆ ಪ್ರವೇಶಿಸಿದರು. ಪ್ರವಾಸಿ ಮಂದಿರದಿಂದ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿದ ಸಂಸದ ದಂಪತಿ ದೇವಿಯ ದರ್ಶನ ಪಡೆದರು. ಧರ್ಮದರ್ಶನ ಅತ್ಯಂತ ಸುಗಮವಾಗಿ ನಡೆಯುತ್ತಿದೆ. ಜಿಲ್ಲಾಡಳಿತ ಅತ್ಯುತ್ತಮ ವ್ಯವಸ್ಥೆ ಮಾಡಿದೆ. ಜಿಲ್ಲಾಧಿಕಾರಿಯೇ ಸ್ವತಃ ಮೈದಾನಕ್ಕಿಳಿದು ಭಕ್ತರ ದರ್ಶನ ಸುಗಮಗೊಳಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಎಲ್ಲ ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ನಡೆದಿವೆ ಎಂದರು.
ಹಾಸನ: ಹಾಸನಾಂಬೆ ದೇವಾಲಯದಲ್ಲಿ ಸಂಸದ ಶ್ರೇಯಸ್ ಪಟೇಲ್ ದಂಪತಿ ತಮ್ಮ ಅವಳಿ ಮಕ್ಕಳನ್ನು ಎತ್ತಿಕೊಂಡು ತಾಯಿ ಹಾಸನಾಂಬೆಯ ದರ್ಶನ ಮಾಡಿದರು.
ಸಂಸದ ಶ್ರೇಯಸ್ ಪಟೇಲ್ ತಮ್ಮ ಪತ್ನಿ ಹಾಗೂ ತಾಯಿ ಅನುಪಮಾ ಅವರು ತಮ್ಮ ಎಳೆಯ ಕಂದಮ್ಮಗಳನ್ನು ಕೈಯಲ್ಲಿ ಹಿಡಿದು ದೇವಾಲಯದೊಳಗೆ ಪ್ರವೇಶಿಸಿದರು. ಪ್ರವಾಸಿ ಮಂದಿರದಿಂದ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿದ ಸಂಸದ ದಂಪತಿ ದೇವಿಯ ದರ್ಶನ ಪಡೆದರು.ಈ ವೇಳೆ ಮಾತನಾಡಿದ ಶ್ರೇಯಸ್ ಪಟೇಲ್, ಕಳೆದ ಬಾರಿ ನಾವು ದಂಪತಿಯಾಗಿ ಬಂದಿದ್ದೆವು. ಈ ಬಾರಿ ಇಬ್ಬರು ಮಕ್ಕಳೊಂದಿಗೆ ನಾಲ್ವರಾಗಿ ಬಂದಿದ್ದೇವೆ ಎಂಬುದು ನನಗೆ ದೊಡ್ಡ ಖುಷಿ. ಹಾಸನಾಂಬೆ ತಾಯಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಇಬ್ಬರ ದರ್ಶನ ಕೂಡ ಮಾಡಿದ್ದೇವೆ. ನಾಡಿಗೆ ಒಳಿತಾಗಲಿ, ಸುಭೀಕ್ಷವಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು. ಧರ್ಮದರ್ಶನ ಅತ್ಯಂತ ಸುಗಮವಾಗಿ ನಡೆಯುತ್ತಿದೆ. ಜಿಲ್ಲಾಡಳಿತ ಅತ್ಯುತ್ತಮ ವ್ಯವಸ್ಥೆ ಮಾಡಿದೆ. ಜಿಲ್ಲಾಧಿಕಾರಿಯೇ ಸ್ವತಃ ಮೈದಾನಕ್ಕಿಳಿದು ಭಕ್ತರ ದರ್ಶನ ಸುಗಮಗೊಳಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಎಲ್ಲ ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ನಡೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವ ಕಾರಣದಿಂದ ಸಿದ್ದೇಶ್ವರ ದೇವರ ಗರ್ಭಗುಡಿಯ ಬಾಗಿಲು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಗಂಟೆಗಟ್ಟಲೆ ದರ್ಶನ ನಡೆಯುತ್ತಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದೆ ಜನಸಂದಣಿ ಕಡಿಮೆಯಾಗುತ್ತಿದ್ದಂತೆಯೇ ಬಾಗಿಲು ತೆರೆಯಲಾಗುವುದು ಎಂದು ತಿಳಿಸಿದರು.