ದೇಶದ ಯುವಜನತೆಯಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ನಾಯಕತ್ವದ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಸಂಸದ ಕ್ರೀಡಾ ಮಹೋತ್ಸವ-2025-26 ಆರಂಭಿಸಿದೆ.
ನವಲಗುಂದ:
ಕ್ರೀಡೆಯು ಸದೃಢತೆ ಮತ್ತು ಶಿಸ್ತು ಕಲಿಸುವ ಜತೆಗೆ ಆರೋಗ್ಯಕರ ಸ್ಪರ್ಧೆಯ ಮನೋಭಾವ ಬೆಳೆಸುತ್ತದೆ. ಜತೆಗೆ ತಳಮಟ್ಟದ ಪ್ರತಿಭೆ ಗುರುತಿಸಿ ಪೋಷಿಸುವಲ್ಲಿ ಕ್ರೀಡಾ ಮಹೋತ್ಸವವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.ಗುರುವಾರ ಪಟ್ಟಣದ ಮಾಡಲ್ ಹೈಸ್ಕೂಲ್ ಮೈದಾನದಲ್ಲಿ ಧಾರವಾಡ ಸಂಸದ ಕ್ರೀಡಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೋಲು-ಗೆಲುವು ಮುಖ್ಯವಲ್ಲ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ. ದೇಶದ ಯುವಜನತೆಯಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ನಾಯಕತ್ವದ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಸಂಸದ ಕ್ರೀಡಾ ಮಹೋತ್ಸವ-2025-26 ಆರಂಭಿಸಿದೆ ಎಂದರು.ಮಾಜಿ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಕೆ.ಎನ್. ಗಡ್ಡಿ, ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣವ್ವರ ಮಾತನಾಡಿ, ಸಂಸದರ ಈ ಕ್ರೀಡಾಮಹೋತ್ಸವವು ಯುವ ಪ್ರತಿಭೆಗಳಿಗೆ ವೇದಿಕೆ ನೀಡುವ ಜತೆಗೆ ಆರೋಗ್ಯಕರ ಸ್ಪರ್ಧೆ ಮತ್ತು ನಾಯಕತ್ವ ಗುಣ ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಧಾರವಾಡ ಜಿಲ್ಲಾ ಕ್ರೀಡಾ ಪ್ರತಿಭೆಗಳನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು. ತಹಸೀಲ್ದಾರ್ ಸುಧೀರ್ ಸಾಹುಕಾರ, ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ಮಂಜುನಾಥ ಗಣಿ, ದೇವರಾಜ ದಾಡಿಬಾಯಿ, ನಿಂಗಪ್ಪ ಬಾರಕೇರ, ಸಿದ್ದನಗೌಡ ಪಾಟೀಲ್, ಸುರೇಶ ಗಾಣಗೇರ, ಅಶೋಕ ಮಜ್ಜಿಗುಡ್ಡ, ಶ್ರೀಶೈಲ ಮೂಲಿಮನಿ, ಪ್ರಭು ಇಬ್ರಾಹಿಂಪುರ, ಬಿ.ಬಿ. ಗಂಗಾಧರಮಠ, ಚೈತ್ರಾ ಶಿರೂರ, ಶಾಂತಾಬಾಯಿ ನಿಡವಣಿ, ಸಂತೋಷ ಜೀವನಗೌಡ್ರ, ಶಂಕರಗೌಡ ರಾಯನಗೌಡ್ರ, ಸುರೇಶ ಬಣವಿ, ಸಾಯಿಬಾಬಾ ಆನೇಗುಂದಿ, ರಾಯನಗೌಡ ಪಾಟೀಲ, ಅಡಿವೆಪ್ಪ ಮನಮಿ, ಎ.ಬಿ. ಹಿರೇಮಠ, ಮಾಂತೇಶ ಕಲಾಲ, ಪವನ ಪಾಟೀಲ, ಫಕೀರಗೌಡ ದೊಡಮನಿ ಸೇರಿದಂತೆ ಹಲವರಿದ್ದರು.