ಸಾರಾಂಶ
ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ರೈತ ಹೋರಾಟಗಾರರಾಗಿ, ರೈತ ಚಳುವಳಿಗೆ ಎಂದೂ ದ್ರೋಹ ಮಾಡದೆ, ಕೊನೆಯ ಉಸಿರಿನವರೆಗೂ ಹಸಿರು ಟವಲ್ ಧರಿಸಿ ಅಸುನೀಗಿದರು. ಶ್ರೀಮಂತರಾದರೂ ಸರಳ ವ್ಯಕ್ತಿತ್ವ ಹೊಂದಿದ್ದರು. ನಗರವಾಸಿಯಾದರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಎಂ.ಎಸ್. ಅಶ್ವತ್ಥನಾರಾಯಣ ರಾಜೇ ಅರಸ್ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಸರಳ ವ್ಯಕ್ತಿತ್ವ ಹೊಂದಿದ್ದರು. ನಗರವಾಸಿಯಾದರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ರೈತ ಚಳವಳಿಗೆ ಎಂದೂ ಅವರು ದ್ರೋಹ ಮಾಡಿದವರಲ್ಲ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.ರಾಜ್ಯ ರೈತ ಸಂಘವು ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತ ನಾಯಕ ಎಂ.ಎಸ್. ಅಶ್ವಥ್ ನಾರಾಯಣ್ ರಾಜೇ ಅರಸ್ ಶ್ರದ್ಧಾಂಜಲಿ ಮತ್ತು ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ರೈತ ಹೋರಾಟಗಾರರಾಗಿ, ರೈತ ಚಳುವಳಿಗೆ ಎಂದೂ ದ್ರೋಹ ಮಾಡದೆ, ಕೊನೆಯ ಉಸಿರಿನವರೆಗೂ ಹಸಿರು ಟವಲ್ ಧರಿಸಿ ಅಸುನೀಗಿದರು. ಶ್ರೀಮಂತರಾದರೂ ಸರಳ ವ್ಯಕ್ತಿತ್ವ ಹೊಂದಿದ್ದರು. ನಗರವಾಸಿಯಾದರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. 1985 ರಲ್ಲಿ ರೈತ ಚಳುವಳಿಗೆ ಪಾದಾರ್ಪಣೆ ಮಾಡಿ, ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಕಾಯಂ ಆಹ್ವಾನಿತರಾಗಿ, ವರಿಷ್ಠರಾಗಿ ಕೆಲಸ ಮಾಡಿದ್ದಾಗಿ ತಿಳಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ತಂದೆಯ ಜೊತೆಗೆ ಅನೇಕ ಹೋರಾಟದಲ್ಲಿ ಅರಸ್ ಅವರು ಭಾಗವಹಿಸಿದ್ದಾರೆ. ಅವರ ಹೋರಾಟದ ಜೀವನ ನಮಗೆ ಮಾದರಿ. ಅವರ ನಿಧನ ಸಂಘಟನೆಗೆ ತುಂಬಲಾರದ ನಷ್ಟ. ರೈತಪರವಾದ ಅವರ ಕನಸನ್ನು ನನಸಾಗಿಸಲು ಶ್ರಮಿಸೋಣ ಎಂದರು.
ಜಿಲ್ಲಾಧ್ಯಕ್ಷ ಹೂಸೂರು ಕುಮಾರ್, ಕಾರ್ಯಾಧ್ಯಕ್ಷ ಮಹೇಶ್ ಪ್ರಭು, ಖಾಯಂ ಆಹ್ವಾನಿತ ಕೆ. ಕೆಂಪೇಗೌಡ, ಮುಖಂಡರಾದ ಹೊಸಕೋಟೆ ಬಸವರಾಜು, ಬೋರಾಪುರ ಶಂಕರೇಗೌಡ, ಜ್ಯೋತಿಗೌಡನಪುರ ಸಿದ್ದರಾಜು ಇದ್ದರು. ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಹೊಸೂರು ಕುಮಾರ್ ಪುನಾರಾಯ್ಕೆಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಸಮಿತಿ ಪುನರ್ ರಚಿಸಲಾಯಿತು.ಹೊಸೂರು ಕುಮಾರ್ ಅಧ್ಯಕ್ಷರಾಗಿ, ಪಿ.ಮರಂಕಯ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಉಪಾಧ್ಯಕ್ಷರಾಗಿ ಪಿ. ಪಳನಿಸ್ವಾಮಿ, ಸಿಂಗೇಗೌಡ, ಪ್ರಕಾಶ್ ರಾಜೇ ಅರಸ್, ಎಂ.ಎಸ್. ನಟರಾಜ್, ಆಲಿಜಾನ್, ಕಾರ್ಯದರ್ಶಿಯಾಗಿ ಸೋಗಳ್ಳಿ ಪುಟ್ಟಣ್ಣಮ್ಮ, ನಾಗನಹಳ್ಳಿ ವಿಜೇಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಶೇಖರ್, ಪರಮೇಶ್, ಖಚಾಂಚಿಯಾಗಿ ಈಶ್ವರ್ ಆಯ್ಕೆಯಾದರು.
ಕಾಯಂ ಆಹ್ವಾನಿತರಾಗಿ ಅಂಕಪ್ಪ, ಮಹಾಲಿಂಗು, ಬಿ.ರಾಜು, ಮಲ್ಲೇಶ್, ಬಸವರಾಜೇ ಗೌಡ, ಚಿಕ್ಕೇಗೌಡ, ದಶರಥ, ಸೋಮಶೇಖರಯ್ಯ, ವೆಂಕಟೇಶ್, ವಿಶೇಷ ಆಹ್ವಾನಿತರಾಗಿ ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಯಿತು.