ಉಡುಪಿ: ಇಲ್ಲಿನ ಮೂಡನಿಡಂಬೂರು ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಸಮಗ್ರ ಜೀರ್ಣೋದ್ಧಾರ ಹಾಗೂ ಪುನಃಪ್ರತಿಷ್ಠೆ ಅಂಗವಾಗಿ ಭಾನುವಾರ ಮುಷ್ಠಿ ಕಾಣಿಕೆ ಸಮರ್ಪಣೆಗೆ ಶಾಸಕ ಯಶಪಾಲ್ ಸುವರ್ಣ ಕಾಣಿಕೆ ಸಮರ್ಪಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹಿಂದೂ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜೀರ್ಣೋದ್ಧಾರಕ್ಕೆ ಸಹಕಾರ ನೀಡಲು ಮುಂದೆ ಬರಬೇಕು. ಶಾಸಕನಾಗಿ ಧಾರ್ಮಿಕ ಇಲಾಖೆಯಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಶುಭ ಹಾರೈಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಟಿ.ಜಿ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಮತ್ತು ಮೀನಾಕ್ಷಿ ಮಾಧವ, ಮಾಜಿ ಸದಸ್ಯ ಸವಿತಾ ಹರೀಶ್ ರಾಮ್, ಗರೋಡಿಯ ಆಡಳಿತ ಮೊಕ್ತೇಸರ ಪ್ರಭಾತ್ ಶೆಟ್ಟಿ, ಸಹಕಾರಿ ದುರೀಣ ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಮುಖರಾದ ಸುಪ್ರಸಾದ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಗುಂಡು ಶೆಟ್ಟಿ, ಶೇಖರ್ ಜತ್ತನ್, ಹರಿಯಪ್ಪ ಕೋಟ್ಯಾನ್, ಡಾ. ಸಂದೀಪ್ ಸನಿಲ್, ಸುರೇಶ ಶೆಟ್ಟಿ, ಉದಯ ಶೆಟ್ಟಿ, ರಾಮಕೃಷ್ಣ ವಾಗ್ಳೆ, ಗುರುರಾಜ್ ಶೆಟ್ಟಿ, ವಿಠಲ್ ಶೆಟ್ಟಿ, ಗರೋಡಿಯ ಗುರಿಕಾರರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿದರು, ಶಿಕ್ಷಕ ಸತೀಶ್ ನಿರೂಪಿಸಿದರು.ಈ ಸಂದರ್ಭ ಪ್ರಮುಖ ದಾನಿಗಳನ್ನು ಗೌರವಿಸಲಾಯಿತು. ಮೊದಲ ದಿನವೇ ನೆರೆದ ಭಕ್ತರು ಸುಮಾರು 50 ಲಕ್ಷ ರು.ಗಿಂತಲೂ ಹೆಚ್ಚಿನ ಹಣ ನೀಡಿ ಸಹಕರಿಸಿದರು.