ಮುದಗಲ್: ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಮನವಿ

| Published : Sep 14 2024, 01:47 AM IST / Updated: Sep 14 2024, 01:48 AM IST

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೂಡಲೇ ಡಾಂಬರೀಕರಣ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು

ಮುದಗಲ್: ಪಟ್ಟಣದ ವ್ಯಾಪ್ತಿಯಲ್ಲಿ ಬರುವ ರಾಯಚೂರು ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣಗೊಳಿಸಲು ಪುರಸಭೆ ಅಧ್ಯಕ್ಷರಾದ ಮಹಾದೇವಮ್ಮ ಗುತ್ತೇದಾರ ಅವರು ಬರೆದ ಪತ್ರವನ್ನು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಪುರಸಭೆ ಉಪಾಧ್ಯಕ್ಷ ಎಸ್.ಕೆ.ಅಜಮೀರ ನೇತೃತ್ವದಲ್ಲಿ ಶುಕ್ರವಾರ ಸಲ್ಲಿಸಲಾಯಿತು.

ಪುರಸಭೆ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೂಡಲೇ ಡಾಂಬರೀಕರಣ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಇತ್ತೀಚಿಗೆ ಮಾನವಿ ತಾಲೂಕಿನಲ್ಲಿ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ಶಾಲಾ ವಾಹನ ಅಪಘಾತಕ್ಕೀಡಾಗಿ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದು ಅಧಿಕಾರಿ ವರ್ಗದವರು ಎಚ್ಚೆತ್ತು ಕಾರ್ಯನಿರ್ವಹಿಸಬೇಕು ಎಂದು ಆಗ್ರಹಸಿದರು. ಕೂಡಲೇ ಪಟ್ಟಣದ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣಗೊಳಿಸಬೇಕೆಂದು ಮುಖಂಡರಾದ ತಮ್ಮಣ್ಣ ಗುತ್ತೇಧಾರ, ಹುಸೇನ್ಲಿ, ಮಹಿಬೂಬ ಬಾರಿಗಿಡ, ಹಸನ್, ಮುಜಾಕೀರ ಹುಸೇನ್, ಸೈಯ್ಯದ್ಸಾಬ, ಶಬ್ಬೀರ ಅಹ್ಮದ, ಹನುಮಂತಪ್ಪ ನಾಯಕ, ರವಿ ಬೋವಿ ಸೇರಿದಂತೆ ಮುಂತಾದರು ಒತ್ತಾಯಿಸಿದರು.