ಮುಧೋಳ ರಾಯಲ್ ಸ್ಕೂಲ್ ಅವಿಷ್ಕಾರ್ 5ನೇ ವಾರ್ಷಿಕೋತ್ಸವ ಜ.16 ಮತ್ತು 17ರಂದು ನಡೆಯಲಿರುವ ಸಮಾರಂಭಕ್ಕೆ ಜ.16ರಂದು ಬೆಂಗಳೂರಿನ ಜೂನಿಯರ್ ಟೋಸ್ ಇಂಟರನ್ಯಾಷನಲ್ ಫ್ರೀ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷೆ ಅಶ್ವಿನಿ ಪುನೀತ್ ರಾಜಕುಮಾರ 17ರಂದು ಕನ್ನಡದ ನಟ, ನಿರ್ದೇಶಕ ತರುಣ್ ಸುಧೀರ್‌ ಹಾಗೂ ಅವರ ಪತ್ನಿ ಕನ್ನಡದ ನಟಿ ಸೋನಲ್ ಮಾಂಟೆರೋ ಅವರು ಇದೇ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಲಿದ್ದಾರೆಂದು ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ಅರಳಿಕಟ್ಟಿ ಹೇಳಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಧೋಳ ರಾಯಲ್ ಸ್ಕೂಲ್ ಅವಿಷ್ಕಾರ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜ.16 ಮತ್ತು 17ರಂದು ಸಂಜೆ 5 ಗಂಟೆಗೆ ಮುಧೋಳ ರಾಯಲ್ ಸ್ಕೂಲ್ ಆವರಣದಲ್ಲಿ ನಡೆಯಲಿವೆ. ಜ.16ರಂದು ಸಂಜೆ 5 ಗಂಟೆಗೆ ಮುಧೋಳ ರಾಯಲ್ ಸ್ಕೂಲ್ ಬಾಲಕರ ವಸತಿ ನಿಲಯವನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಾರ್ಷಿಕೋತ್ಸವ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸುವರು. ಯಡಹಳ್ಳಿ-ಇಂಗಳಗಿ ಅಡವೇಶ್ವರ ಮಠದ ಚಂದ್ರಶೇಖರ ಸ್ವಾಮಿಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಡಾ.ಮುರುಗೇಶ ನಿರಾಣಿ, ಬೆಂಗಳೂರಿನ ಜೂನಿಯರ್ ಟೋಸ್ ಇಂಟರ್‌ನ್ಯಾಷನಲ್ ಫ್ರೀ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷೆ ಅಶ್ವಿನಿ ಪುನೀತ್ ರಾಜಕುಮಾರ, ಧಾರವಾಡ ಶಾಲಾ ಶಿಕ್ಷಣ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಕರ, ಡಿಡಿಪಿಐ ಅಜೀತ ಮನ್ನಿಕೇರಿ, ಬಿಇಒ ಎಸ್.ಎಂ. ಮುಲ್ಲಾ ಮುಖ್ಯ ಅತಿಥಿ ಸ್ಥಾನ ವಹಿಸುವರು. ಡಾ.ತಿಮ್ಮಣ್ಣ ಅರಳಿಕಟ್ಟಿ ಅಧ್ಯಕ್ಷತೆ ವಹಿಸುವರು, ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿ. ಅರಳಿಕಟ್ಟಿ, ಮುಧೋಳ ರಾಯಲ್ ಸ್ಕೂಲ್ ಕಾರ್ಯದರ್ಶಿ ವಿನಾಯಕ ತಿ. ಅರಳಿಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿರುವರು.

17ರಂದು ಸಂಜೆ 5 ಗಂಟೆಗೆ ಕನ್ನಡದ ನಟ, ನಿರ್ದೇಶಕ ತರುಣ್ ಸುಧೀರ ಅವರು ಅವಿಷ್ಕಾರ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅವರ ಪತ್ನಿ ಕನ್ನಡದ ನಟಿ ಸೋನಲ್ ಮಾಂಟೆರೋ ಮುಖ್ಯ ಅತಿಥಿ ಸ್ಥಾನವಹಿಸುವರು. ನಿರಾಣಿ ಸಮೂಹ ಸಂಸ್ಥೆಯ ಸಿಇಒ ಸಂಗಮೇಶ ನಿರಾಣಿ, ಕೊಣ್ಣೂರ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊಣ್ಣೂರ ಅತಿಥಿ ಸ್ಥಾನವಹಿಸುವರು. ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ಅರಳಿಕಟ್ಟಿ ಅಧ್ಯಕ್ಷತೆ ವಹಿಸುವರು, ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿ. ಅರಳಿಕಟ್ಟಿ, ಮುಧೋಳ ರಾಯಲ್ ಸ್ಕೂಲ್ ಕಾರ್ಯದರ್ಶಿ ವಿನಾಯಕ ತಿ. ಅರಳಿಕಟ್ಟಿ ಸೇರಿ ಇತರರು ಉಪಸ್ಥಿತರಿರುವರು ಎಂದು ಹೇಳಿದರು.

ಅತ್ಯಾಧುನಿಕ ಸೌಲಭ್ಯಗಳು: ಮುಧೋಳ ರಾಯಲ್ ಸ್ಕೂಲ್ ಬಾಲಕರ ಸುಸಜ್ಜಿತ ಮತ್ತು ಸುರಕ್ಷಿತ ನೂತನ ವಸತಿ ನಿಲಯ ಮೂರು ಮಹಡಿ ಹೊಂದಿದೆ, 5ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 300 ವಿದ್ಯಾರ್ಥಿ ಗಳಿಗೆ ಇಲ್ಲಿ ಅವಕಾಶವಿದೆ, ಪ್ರತ್ಯೇಕ ಮೆಸ್, ಡಿನ್ನರ್ ಡೈನಿಂಗ್ ಹಾಲ್, ಲೈಬ್ರರಿ ಆಂಡ್ ಸ್ಟಡಿ ರೂಮ್, ಲಿಫ್ಟ್‌, ಆಫೀಸ್ ಕಂ ಗೆಸ್ಟ್ ರೂಮ್ ಸೇರಿದಂತೆ ಇತರೆ ಎಲ್ಲ ಸೌಲಭ್ಯಗಳು ಈ ಹಾಸ್ಟೆಲ್ ನಲ್ಲಿವೆ ಎಂದು ಹೇಳಿದರು.