ಮುಡಿಪಿನ ‘ಭಾರತೀ ನೃತ್ಯಾಲಯ’ದ 11ನೇ ‘ವಾರ್ಷಿಕ ಸಂಭ್ರಮ’ ಕಾರ್ಯಕ್ರಮ ಮುಡಿಪಿನ ಮುಡಿಪು ಅಡಿಟೋರಿಯಂನಲ್ಲಿ ಇತ್ತೀಚೆಗೆ ನಡೆಯಿತು.
ಉಳ್ಳಾಲ: ವಿದುಷಿ ಉಮಾ ವಿಷ್ಣು ಮುನ್ನಡೆಸುತ್ತಿರುವ ಮುಡಿಪಿನ ‘ಭಾರತೀ ನೃತ್ಯಾಲಯ’ದ 11ನೇ ‘ವಾರ್ಷಿಕ ಸಂಭ್ರಮ’ ಕಾರ್ಯಕ್ರಮ ಮುಡಿಪಿನ ಮುಡಿಪು ಅಡಿಟೋರಿಯಂನಲ್ಲಿ ಇತ್ತೀಚೆಗೆ ನಡೆಯಿತು. ಉಮಾ ವಿಷ್ಣು ಹೆಬ್ಬಾರ್ ಇವರ ನಟುವಾಂಗ, ಶಶಿಕಲಾ ಪ್ರಭು ಕಾಡುಮಠ ಹಾಡುಗಾರಿಕೆ, ಸಾನಿಧ್ಯ ಕಾಡುಮಠ ವಯೋಲಿನ್ ಹಾಗೂ ಮನೋಹರ ರಾವ್ ಮಂಗಳೂರು ಇವರ ಮೃದಂಗದೊಂದಿಗೆ ನೃತ್ಯಾಲಯದ ಮಕ್ಕಳು ‘ನೃತ್ಯಾರ್ಪಣ’ ಪ್ರಸ್ತುತಪಡಿಸಿದರು.ನಂತರ ಮುಡಿಪು ಶ್ರೀ ಭಾರತೀ ವಿದ್ಯಾ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಇವರಿಗೆ ಗುರುವಂದನೆ ನಡೆಯಿತು. ಶ್ರೀ ಭಾರತೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ, ಮುಖ್ಯೋಪಾಧ್ಯಾಯರಾಗಿ ಇತ್ತೀಚೆಗೆ ನಿವೃತ್ತರಾದ ರಾಮಕೃಷ್ಣ ಭಟ್ ಇವರನ್ನು ಗೌರವಿಸಲಾಯಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕಣಂತೂರಿನ ಧರ್ಮ ಅರಸು ಶ್ರೀ ತೋಡಕುಕ್ಕಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯರು ಭರತನಾಟ್ಯ, ಯಕ್ಷಗಾನ, ಸಂಗೀತ ಮುಂತಾದ ಭಾರತೀಯ ಕಲೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಮಾತನಾಡಿದರು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಭರತನಾಟ್ಯದ ಮಹತ್ವದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿದರು. 2024-25 ನೇ ಸಾಲಿನಲ್ಲಿ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ವಿಶ್ವ ವಿದ್ಯಾನಿಲಯದಿಂದ ನಡೆಸಲಾದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಭಾರತೀ ನೃತ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಭಾರತೀ ನೃತ್ಯಾಲಯದ ವಿದ್ಯಾರ್ಥಿಗಳು ನೃತ್ಯ ಗುರು ಉಮಾ ವಿಷ್ಣು ಹೆಬ್ಬಾರ್ ಇವರಿಗೆ ನೃತ್ಯದ ಮೂಲಕ ಗುರುವಂದನೆ ಸಲ್ಲಿಸಿದರು.
ಉಮಾ ವಿಷ್ಣು ಹೆಬ್ಬಾರ್ ಸ್ವಾಗಸಿದಿರು. ಮಾನಸ ಭಾಸ್ಕರ್ ವಂದಿಸಿದರು ಪ್ರವೀಣ್ ಕಾಮತ್, ಮಂಜುನಾಥ ಭಟ್ ಮತ್ತು ಚಂಚಲಾ ದಿನೇಶ್ ಇನಿರ್ವಹಿಸಿದರು. ವಿದ್ಯಾರ್ಥಿಗಳು ‘ನೃತ್ಯ ಸಿಂಚನ’ ಪ್ರಸ್ತುತಪಡಿಸಿದರು.