ಮುಡಿಪು ಸರ್ಕಾರಿ ಕಾಲೇಜು: ಎನ್ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರ

| Published : Feb 24 2025, 12:37 AM IST

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ 2024 25ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ದ. ಕ. ಹಿ. ಪ್ರಾ. ಶಾಲೆ ಬೋಳ್ಯಾರು ಫೆ. 20ರಂದು ಜರುಗಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ 2024 25ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ದ. ಕ. ಹಿ. ಪ್ರಾ. ಶಾಲೆ ಬೋಳ್ಯಾರು ಫೆ. 20ರಂದು ಜರುಗಿತು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದಕ್ಷ ಪ್ರಶಾಂತ್ ಕಾಜವ ಉದ್ಘಾಟಿಸಿ ಭಾವೈಕ್ಯತೆ, ಸಹಬಾಳ್ವೆ, ಪರಿಸರ ಕಾಳಜಿ ಮುಂತಾದ ಮೌಲ್ಯಗಳೇ ರಾಷ್ಟ್ರೀಯ ಸೇವಾ ಯೋಜನೆಯ ಮೂಲಮಂತ್ರ ಎಂದರು. ಬೋಳಿಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾರಾಣಿ ಪ್ರತಿಜ್ಞಾ ವಿಧಿ ಬೋಧಿಸಿದರು. ಬೋಳಿಯಾರು ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಶಕೂರ್, ಮಂಗಳೂರು ತಾ. ಪಂ. ಮಾಜಿ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಝೋಹರ, ಸದಸ್ಯರಾದ ಸೆಪಿಯ, ಬೀಪಾತಿಮಾ ಹಾಗೂ ಬೋಳಿಯಾರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಸಿಂತ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಸಹ ಪ್ರಾಧ್ಯಾಪಕ ಪ್ರೊ. ಹೈದರಾಲಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾಧಿಕಾರಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ತನುಜಾ ಕಾರ್ಯಕ್ರಮ ಸಂಯೋಜಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಉಸ್ಮಾನ್ ಎ ಸ್ವಾಗತಿಸಿದರು. ಶಿಬಿರಾರ್ಥಿ ತೇಜಸ್ವಿ ಕಾರ್ಯಕ್ರಮ ನಿರೂಪಿಸಿದರು. ಅನನ್ಯ ವಂದಿಸಿದರು.