ಭಾರತದ ಪ್ರಾಚೀನ ಪವಿತ್ರ ತೀರ್ಥ ಕಾಶಿಯ ರಾಜ ಅಶ್ವಸೇನ ವಾಮಾದೇವಿ ಪುತ್ರ ಪುತ್ರ ಪಾರ್ಶ್ವಕುಮಾರರು ಆತ್ಮ ಕಲ್ಯಾಣ ಹಾಗೂ ಲೋಕ ಕಲ್ಯಾಣರ್ಥ ದೀಕ್ಷೆ ಪಡೆದು ಶ್ರಾವಣ ಸಪ್ತಮಿ ಮೋಕ್ಷ ಪಡೆದ ದಿನ ಬುಧವಾರ ಬೆಳಗ್ಗೆ 7 ರಿಂದ ಶ್ರೀ ಮಠ ಹಾಗೂ ಗುರು ಬಸದಿಯಲ್ಲಿ ವಿಶೇಷ ಪೂಜೆ ನೆರವೇರಿತು.
ಮೂಡುಬಿದಿರೆ: ಭಾರತದ ಪ್ರಾಚೀನ ಪವಿತ್ರ ತೀರ್ಥ ಕಾಶಿಯ ರಾಜ ಅಶ್ವಸೇನ ವಾಮಾದೇವಿ ಪುತ್ರ ಪುತ್ರ ಪಾರ್ಶ್ವಕುಮಾರರು ಆತ್ಮ ಕಲ್ಯಾಣ ಹಾಗೂ ಲೋಕ ಕಲ್ಯಾಣರ್ಥ ದೀಕ್ಷೆ ಪಡೆದು ಶ್ರಾವಣ ಸಪ್ತಮಿ ಮೋಕ್ಷ ಪಡೆದ ದಿನ ಬುಧವಾರ ಬೆಳಗ್ಗೆ 7 ರಿಂದ ಶ್ರೀ ಮಠ ಹಾಗೂ ಗುರು ಬಸದಿಯಲ್ಲಿ ವಿಶೇಷ ಪೂಜೆ ನೆರವೇರಿತು. ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗುರು ಬಸದಿ ಹಾಗೂ ಕ್ಷೇತ್ರದ ಮೂಲ ಸ್ವಾಮಿ ಭಗವಾನ್ ಪಾರ್ಶ್ವನಾಥ ಸ್ವಾಮಿ ಮಸ್ತಕಾಭಿಷೇಕ ದಲ್ಲಿ ಪಾಲ್ಗೊಂಡು ಅಷ್ಟ ವಿದಾರ್ಚನೆ ಪೂಜೆ ಸಲ್ಲಿಸಿದರು. ಐತಿಹಾಸಿಕ ಮಹಾ ಪುರುಷ ಇಪ್ಪತ್ತ ಮೂರನೇ ತೀರ್ಥಂಕರರು ಝಾರ್ಖoಡ್ ರಾಜ್ಯ ಮಧು ಬನ್ ಬಳಿಯ ಶಾಶ್ವತ ತೀರ್ಥ ಸಮ್ಮೇದ ಗಿರಿ ಸುವರ್ಣ ಭದ್ರ ಕೂಟದಲ್ಲಿ ನಿರ್ವಾಣ ಪಡೆದ ಶುಭ ದಿನವಾದ ಬುಧವಾರ 2803 ನೇಯ ಮೋಕ್ಷ ಕಲ್ಯಾಣ ಮಹಾ ಅರ್ಘ್ಯ ಸಲ್ಲಿಸಿದರು. ಶಂಭ ವಕುಮಾರ್ ವೀರೇಂದ್ರ, ಸನತ್ ಕುಮಾರ್, ವೀಣಾ ರಘು ಚಂದ್ರ, ಮಂಜುಳಾ ಅಭಯ ಚಂದ್ರ, ದಿವ್ಯಾ, ಆರತಿ ಪುರೋಹಿತ ವಿರಾಜ್ ಇಂದ್ರ ಉಪಸ್ಥಿತರಿದ್ದರು.