ಖೋ ಖೋ ಪಂದ್ಯದಲ್ಲಿ ಮುದುಡಿ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

| Published : Sep 10 2025, 01:03 AM IST

ಖೋ ಖೋ ಪಂದ್ಯದಲ್ಲಿ ಮುದುಡಿ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಅಂಗವಾಗಿ ನಡೆದ ಬಾಲಕರ ಖೋ ಖೋ ವಿಭಾಗದಲ್ಲಿ ಗಂಡಸಿ ಹೋಬಳಿಯ ಮುದುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಶಿಕ್ಷಕರು ಮತ್ತು ಪೋಷಕರಾಗಿ ನಿಂತಿರುವ ಶಿಕ್ಷಕ ವೃಂದ ವಿದ್ಯಾರ್ಥಿಗಳ ಈ ಸಾಧನೆಗೆ ಶ್ಲಾಘಿಸಿದರು. ನಮ್ಮ ಮಕ್ಕಳು ಪಠ್ಯ ವಿಷಯಗಳಲ್ಲಿ ಮಾತ್ರವಲ್ಲ, ಕ್ರೀಡಾ ಕ್ಷೇತ್ರದಲ್ಲಿಯೂ ಮುನ್ನಡೆಸುತ್ತಿದ್ದಾರೆ. ಇದೊಂದು ಸಮಗ್ರ ಶಿಕ್ಷಣದ ಸಾಕ್ಷ್ಯ ಎಂದು ಸಹ ಶಿಕ್ಷಕಿಯೊಬ್ಬರು ಉಲ್ಲೇಖಿಸಿದರು.

ಅರಸೀಕೆರೆ: 2025–26ನೇ ಸಾಲಿನ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಅಂಗವಾಗಿ ನಡೆದ ಬಾಲಕರ ಖೋ ಖೋ ವಿಭಾಗದಲ್ಲಿ ಗಂಡಸಿ ಹೋಬಳಿಯ ಮುದುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಕ್ರೀಡಾಕೂಟವನ್ನು ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಇದು ಕೇವಲ ಜಯವಲ್ಲ, ನಮ್ಮ ಮಕ್ಕಳ ಪರಿಶ್ರಮಕ್ಕೆ ಸಿಕ್ಕ ಪುರಸ್ಕಾರ ಎಂದು ಶಾಲೆಯ ಮುಖ್ಯ ಶಿಕ್ಷಕರು ಹೇಳಿದರು. ಶ್ರದ್ಧೆ, ತಾಳ್ಮೆ ಮತ್ತು ತಂಡದ ಒಗ್ಗಟ್ಟಿನ ಮೂಲಕ ಸಾಧನೆ ಮಾಡಿದ್ದಾರೆ ಎಂದರು.ಶಿಕ್ಷಕರು ಮತ್ತು ಪೋಷಕರಾಗಿ ನಿಂತಿರುವ ಶಿಕ್ಷಕ ವೃಂದ ವಿದ್ಯಾರ್ಥಿಗಳ ಈ ಸಾಧನೆಗೆ ಶ್ಲಾಘಿಸಿದರು. ನಮ್ಮ ಮಕ್ಕಳು ಪಠ್ಯ ವಿಷಯಗಳಲ್ಲಿ ಮಾತ್ರವಲ್ಲ, ಕ್ರೀಡಾ ಕ್ಷೇತ್ರದಲ್ಲಿಯೂ ಮುನ್ನಡೆಸುತ್ತಿದ್ದಾರೆ. ಇದೊಂದು ಸಮಗ್ರ ಶಿಕ್ಷಣದ ಸಾಕ್ಷ್ಯ ಎಂದು ಸಹ ಶಿಕ್ಷಕಿಯೊಬ್ಬರು ಉಲ್ಲೇಖಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿ ಇಂತಹ ಸಣ್ಣ ಹಳ್ಳಿಗಳಲ್ಲಿಯೇ ಭವಿಷ್ಯದ ರಾಷ್ಟ್ರಮಟ್ಟದ ಆಟಗಾರರು ಅಡಗಿರುತ್ತಾರೆ. ಸರಿಯಾದ ಮಾರ್ಗದರ್ಶನ, ಶ್ರದ್ಧೆ ಮತ್ತು ಪೋಷಣೆಯೊಂದಿಗೆ ಇವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಬಹುದು ಎಂದು ತಿಳಿಸಿದರು.