ಸಾರಾಂಶ
ತಾಲೂಕಿನ ಗ್ರಾಮಗಳಲ್ಲಿ ಮೊಹರಂ ಹಬ್ವವನ್ನು ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಗ್ರಾಮಗಳಲ್ಲಿ ಮೊಹರಂ ಹಬ್ವವನ್ನು ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.ಬಡಿದರ್ಗಾದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಚಂದಾ ಹುಸೇನ ಹುಸೇನ ಮತ್ತು ಬೀಬಿ ಫಾತಿಮಾ ಅಲಾಯಿ ಪೀರ ಪ್ರತಿಪ್ಠಾಪಿಸಲಾಗುವುದು.ಮೊಹರಂ ಕೊನೆಯ ದಿನ ನಿಮಾಹೊಸಳ್ಳಿ, ಐನೋಳಿ ಗ್ರಾಮದ ಯುವಕರು ಹುಲಿ ವೇಷಧರಿಸಿ ನರ್ತಿಸುವರು. ಚಂದಾಹುಸೇನ ಮತ್ತು ಹಸೇನ ಹುಸೇನ ಪೀರಗಳಿಗೆ ಹೂವುಮಾಲೆ ಹಾಕಿ ಕೊಬ್ಬರಿ ಉಡಿ ಅಕ್ಕಿ ತುಂಬಿದ ನಂತರ ಪೀರಗಳ ಮೇಲೆ ನಾಣ್ಯ ಮತ್ತು ಹೂವು ಚೆಲ್ಲಿ, ಭಕ್ತಿ ಅರ್ಪಿಸುತ್ತಾರೆ. ತಾಯಿ ಬೀಬೀ ಫಾತಿಮಾ ಪೀರಗೆ ಮಹಿಳೆಯರು ಉಡಿತುಂಬಿ ಹಸಿರು ಬಳೆ ಹೂವಿನ ದಂಡಿ ಅರ್ಪಿಸುತ್ತಾರೆ.
ಕಲ್ಯಾಣಗಡ್ಡಿ, ಚೋಟಿದರ್ಗಾ, ಮದರಸಾಬ ದರ್ಗಾ, ಅಜಗರ ಅಲಿಪೀರ ಪ್ರಮುಖ ರಸ್ತೆಗಳಲ್ಲಿ ಭಾರಿ ಮೆರವಣಿಗೆ ನಡೆಸಿದ ನಂತರ ಬಡಿದರ್ಗಾದಲ್ಲಿ ಎಲ್ಲ ಪೀರಗಳು ಒಂದೆಡೆ ಸೇರಲಿವೆ. ದೇಗಲಮಡಿ, ಐನೋಳಿ, ಚಂದಾಪೂರ, ಪೋಲಕಪಳ್ಳಿ, ನಿಮಾಹೊಸಳ್ಳಿ, ಚಿಮ್ಮಾಇದಲಾಯಿ, ಗೌಡನಹಳ್ಳಿ, ಗಾರಂಪಳ್ಳಿ ಗ್ರಾ,ಮಗಳಿಂದ ಸಾವಿರಾರು ಜನರು ಬಡಿದರ್ಗಾಕ್ಕೆ ಬಂದು ಮೊಹರಂಹಬ್ಬಕ್ಕೆ ಆಗಮಿಸಲಿದ್ದಾರೆ.ತಾಲೂಕಿನ ಹೂವಿನಬಾವಿ ಮರನಾಳ, ಚಂದನಕೇರಾ, ನಿಡಗುಂದಾ, ಸುಲೇಪೇಟ, ಕುಂಚಾವರಂ, ಕೋಡ್ಲಿ, ಐನಾಪೂರ, ಗಡಿಕೇಶ್ವರ ಗ್ರಾಮಗಳಲ್ಲಿ ಮೊಹರಂ ಆಚರಿಸಲಾಗುವುದು.