ಸಾರಾಂಶ
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮೋಹರಂ ನಿಮಿತ್ತ ಭಕ್ತಿಭಾವದ
ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮೋಹರಂ ನಿಮಿತ್ತ ಭಕ್ತಿಭಾವದ ಮಧ್ಯ ಭಾವೈಕ್ಯದ ಆಚರಣೆ ನಡೆಯಿತು.
ತಾಲೂಕಿನ ಜವಳಿಡಿ ಶರಣನಗರದಲ್ಲಿ ವಾರ್ಷಿಕ ಮೊಹರಂ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಮತ್ತು ಭಕ್ತಿಭಾವದಿಂದ ಜರುಗಿತು.ಮೊಹರಂ ಕಮಿಟಿಯ ಅಧ್ಯಕ್ಷ ನಾಗಪ್ಪ ತಳವಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಸಾಂಪ್ರದಾಯಿಕ ಆಚರಣೆಗಳು ಮತ್ತು ವಿಧಿವಿಧಾನಗಳೊಂದಿಗೆ ಸಮುದಾಯದ ವಿವಿಧ ಸದಸ್ಯರ ಭಾಗವಹಿಸುವಿಕೆ ಮಧ್ಯ ನೆರವೇರಿತು.
ಈ ಜಾತ್ರೆಯಲ್ಲಿ ಗುಡುಸಾಬ್ ಮುಲ್ಲಾ, ಶಿವಪ್ಪ ಬೇರೆಮಡಗಿ, ಎಲ್ಲಪ್ಪ ಬೈರಾಮಡಗಿ, ಭೀಮಪ್ಪ ಬೋರ್ ಅವರು ಅಲೈಕುಣಿತದಲ್ಲಿ ದೇವರನ್ನು ಹಿಡಿದು ಪ್ರಮುಖ ಪಾತ್ರವಹಿಸಿದರು.ಜಾತ್ರೆಯ ಅತ್ಯಂತ ಅಗ್ನಿ ಹಾಯುವ ಕಾರ್ಯಕ್ರಮದಲ್ಲಿ ಮೊಹರಂ ಕಮಿಟಿಯ ಸದಸ್ಯ ಶ್ರೀಶೈಲ್ ತಳವಾರ್, ಮೈನೋದ್ದೀನ್ ದನೂರ್, ಅಮೃತ ಪೂಜಾರಿ, ಪರಮೇಶ್ವರ್ ನೆಲ್ಲೂರು, ಧರ್ಮಣ್ಣ ಜವಳಿ, ಕಲ್ಯಾಣಿ ಜವಳಿ, ಪ್ರಭು ಒಡೆಯರ್, ಶ್ರೀಮಂತ ಒಡೆಯರ್, ಮುಲ್ಲಾ, ಅಂಬರ ಅವರಾದಿ, ಸದ್ದಾಮ್ ಡಾಕ್ಟರ್, ಚಂದ್ರಶೇಬೋರ್‍ಬಟ್ಟಿ, ಗುರುಶರಣ ಪೆÇಲೀಸ್ ಪಾಟೀಲ ಮೋನಪ್ಪ, ಡಾಕ್ಟರ್ ಬಸವರಾಜ ಬಂದ್ರವಾಡ, ಅಂಬಣ್ಣ, ಮಾಂತಪ್ಪ ಬಂದರುವಾಡ, ಅಲಿಸಾ ಬಂದ್ರುವಾಡ, ಹಿರಿಯ ಜಗನ್ನಾಥ್ ಬೈರಾಮಡಗಿ ಜಾತ್ರೆಯಲ್ಲಿ ಭಾಗವಹಿಸಿದರು.