ಸಾರಾಂಶ
- ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜನಸಂಘ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಪುಣ್ಯ ಸ್ಮರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಶ್ಮೀರ ಭಾರತದ ಭಾಗವೆಂದ ಹಿಂದೂ ಸಮಾಜದ ಪ್ರತಿಪಾದಕ ಶ್ಯಾಮಪ್ರಸಾದ್ ಮುಖರ್ಜಿ ಒಂದು ದೇಶ, ಒಂದೇ ಸಂವಿಧಾನ ಹಾಗೂ ಒಂದೇ ಪ್ರಧಾನಿ ಎಂಬ ಘೋಷಣೆ ಮೊಳಗಿಸಿ ರಾಷ್ಟ್ರಾದ್ಯಂತ ಜನಜಾಗೃತಿ ಆಂದೋಲನ ಮಾಡಿಸಿದವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ. ಆರ್.ದೇವರಾಜ್ ಶೆಟ್ಟಿ ಹೇಳಿದರು.ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಒಬಿಸಿ ಮೋರ್ಚಾದಿಂದ ಸೋಮವಾರ ನಡೆದ ಜನಸಂಘ ಸ್ಥಾಪಕ ಶ್ಯಾಮ ಸಾದ್ ಮುಖರ್ಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಜಮ್ಮು-ಕಾಶ್ಮೀರವನ್ನು ಅಂದಿನ ಕಾಂಗ್ರೆಸ್ ನೆಹರು ಸರ್ಕಾರ ಭಾರತದಿಂದ ವಿಂಗಡಿಸಿ ವಿಶೇಷ ಸ್ಥಾನಮಾನ ನೀಡಿರುವುದರ ವಿರುದ್ಧ ಸಿಡಿದೆದ್ದ ಮುಖರ್ಜಿ, ನೆಹರು ಸಂಪುಟದಿಂದ ಹೊರಬಂದು ಸಮಸ್ತ ಹಿಂದೂಗಳ ಹಕ್ಕಿಗಾಗಿ ಜನಸಂಘ ಸ್ಥಾಪಿಸಿ ನಿರಂತರ ಹೋರಾಟ ರೂಪಿಸಿದ ಅಪ್ರತಿಮ ರಾಷ್ಟ್ರಭಕ್ತರು ಎಂದು ಹೇಳಿದರು.
ಭವ್ಯ ಭಾರತದ ಕನಸನ್ನು ಸಾಕಾರಗೊಳಿಸಲು ವೈಯಕ್ತಿಕ ಜೀವನ ಲೆಕ್ಕಿಸದೇ ಸದಾಕಾಲ ರಾಷ್ಟ್ರದ ಹಿತಕ್ಕಾಗಿ ದುಡಿದು ಬಲಿದಾನ ಗೈದ ಶ್ಯಾಮಪ್ರಸಾದ್ ಮುಖರ್ಜಿ ಆಶಯಗಳಿಗೆ ಇಂದಿನ ಕೇಂದ್ರ ಸರ್ಕಾರ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಿ ಒಂದೇ ಕಾನೂನನ್ನು ರೂಪಿಸುವ ಮೂಲಕ ತನ್ನದಾಗಿಸಿ ಕೊಂಡಿದೆ ಎಂದರು.ದೇಶದಲ್ಲಿ ಬಿಜೆಪಿ ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಸಿದ್ಧಾಂತದಡಿ ಬದುಕುತ್ತಿದೆ. ಕೆಲವು ಪಕ್ಷಗಳು ವಂಶಪಾರಂಪರ್ಯ ಅಧಿಕಾರ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆ. ಅಲ್ಲದೇ ಆರ್‌ಎಸ್‌ಎಸ್ ಸಂಘಟನೆ ದೇಶದ ಯಾವುದೇ ಮೂಲೆಗಳಲ್ಲಿ ಅವಘಡ ಸಂಭವಿಸಿದರೆ ಪ್ರತಿಫಲಾಪೇಕ್ಷೆ ಇಲ್ಲದೇ ತಾಯ್ನಾಡಿನ ಜನತೆ ಸುರಕ್ಷತೆ ಕಾಳಜಿವಹಿಸುತ್ತದೆ ಎಂದು ಹೇಳಿದರು.
ಮುಖರ್ಜಿಯವರು ರಾಷ್ಟ್ರ ಹಿತಕ್ಕಾಗಿ ನೆಹರು ಸರ್ಕಾರದ ಸಚಿವ ಸ್ಥಾನವನ್ನೇ ತ್ಯಜಿಸಿ ಹಿಂದುಗಳ ಪರವಾಗಿ ನಿಂತಿದ್ದರು. ಆದರೀಗ ತಾಯಿಯಂತೆ ಗೌರವಿಸುವ ಪಕ್ಷವನ್ನು ಕೆಲವರು ಸಚಿವ ಸ್ಥಾನ, ಅಧಿಕಾರ ಹಾಗೂ ಆಮಿಷಕ್ಕೆ ಒಳಗಾಗಿ ಮರು ದಿನವೇ ಪಕ್ಷ ತೊರೆಯುವ ಸನ್ನಿವೇಶವಿದೆ. ಹೀಗಾಗಿ ಮುಖರ್ಜಿಯವರ ಬದುಕಿನ ಶೈಲಿ ಅರ್ಥೈಸಿಕೊಂಡರೆ ನಿಜವಾದ ಸತ್ಯಾಂಶ ತಿಳಿಯುತ್ತದೆ ಎಂದರು.ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಮಾತನಾಡಿ, ಆಟಲ್‌ಜೀ, ಅಡ್ವಾಣಿ, ಪಂಡಿತ್ ದೀನ್‌ದಯಾಳ್ ಅವರ ಮಾರ್ಗದರ್ಶನ ದಿಂದ ಹಿಂದೂಗಳ ಸಂರಕ್ಷಣೆಗೆ ಭಾರತೀಯ ಜನ ಸಂಘ ಸ್ಥಾಪಿತಗೊಂಡಿತು. ತದನಂತರ ಬಿಜೆಪಿಯಡಿ ಮುಂಚೂಣಿಯ ಬಲ ಪಂಥೀಯ ರಾಜಕೀಯವಾಗಿ ಪಕ್ಷವಾಯಿತು. ಇದನ್ನು ಸಹಿಸದ ನೆಹರು ಸರ್ಕಾರ ಮುಖರ್ಜಿ ಅವರನ್ನು ಕುಗ್ಗಿಸಲು ಹಲವು ಕುತಂತ್ರಗಳು ನಡೆಸಿದ್ದರು ಎಂದರು.ಶ್ಯಾಮಪ್ರಸಾದ್ ಮುಖರ್ಜಿ ಶಿಕ್ಷಣ ತಜ್ಞ, ಉಪಕುಲಪತಿಗಳಾಗಿ ಅನೇಕ ಹುದ್ದೆಗಳನ್ನು ಅಲಂಕರಿಸಿದವರು. ನೆಹರು ಸಂಪುಟದ ಮಂತ್ರಿಮಂಡಲ ಸದಸ್ಯರಾದರೂ, ಹಿಂದು ವಿರೋಧಿ ನೀತಿ ಖಂಡಿಸಿದ್ದರು. ಕೊನೆಗೆ ಸಚಿವ ಸ್ಥಾನ ತೊರೆದು ಕಾಶ್ಮೀರ ಚಲೋ ಪ್ರಾರಂಭಿಸಿದರು. ಇದನ್ನು ಸಹಿಸದ ನೆಹರು ಸರ್ಕಾರ ಅವರನ್ನು ಬಂಧಿಸಿ ನಿಗೂಢ ಸಾವಿನಲ್ಲಿ ಅಂತ್ಯ ಕಾಣುವ ಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ನಂತರ ನೆಹರು ಸರ್ಕಾರ ಬ್ರಿಟಿಷರ ಕೈಗೊಂಬೆಯಂತೆ ವರ್ತಿಸುವುದನ್ನು ಮುಖರ್ಜಿಯವರು ತೀವ್ರ ವಿರೋಧಿಸಿದ್ದರು. ಭಾರತದ ಭೂಪ್ರದೇಶವನ್ನು ಚೀನಾಗೆ ಹಸ್ತಾಂತರ, ಕಾಶ್ಮೀರಕ್ಕೆ 370 ಕಾಯ್ದೆ ರೂಪಿಸಿ ದೇಶ ತುಂಡರಿಸುವ ಕೆಲಸಕ್ಕೆ ಕೈಹಾಕಿರುವ ವಿರುದ್ಧ ಮುಖರ್ಜಿ ಜನಸಂಘ ಸ್ಥಾಪಿಸಿ ಬೀದಿಗಿಳಿದು ಜನಾಂದೋಲನ ನಡೆಸಿದರು ಎಂದರು. ಕಾರ್ಯಕ್ರಮದಲ್ಲಿ ಒಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರಾಧ್ಯಕ್ಷ ಜಯವರ್ಧನ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ, ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಜಿಪಂ ಮಾಜಿ ಉಪಾಧ್ಯಕ್ಷ ಸೋಮಶೇಖರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಸದಸ್ಯ ಮಧು ಕುಮಾರ್‌ರಾಜ್ ಅರಸ್, ಮುಖಂಡರಾದ ಕೋಟೆ ರಂಗನಾಥ್ ಉಪಸ್ಥಿತರಿದ್ದರು.23 ಕೆಸಿಕೆಎಂ 3ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಜನಸಂಘ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಪುಣ್ಯ ಸ್ಮರಣೆ ನಡೆಯಿತು.