ಮುಕ್ತಿ ಒಕ್ಕೂಟ, ಶಾಂತ ಜೀವ-ಜ್ಯೋತಿ ಎನ್ ಜಿಒ ವಿರುದ್ಧ ಕ್ರಿಮಿನಲ್ ಕೇಸ್‌ ಹಾಕಿ

| Published : Oct 17 2025, 01:00 AM IST

ಮುಕ್ತಿ ಒಕ್ಕೂಟ, ಶಾಂತ ಜೀವ-ಜ್ಯೋತಿ ಎನ್ ಜಿಒ ವಿರುದ್ಧ ಕ್ರಿಮಿನಲ್ ಕೇಸ್‌ ಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ದುರುದ್ದೇಶದಿಂದ ಇಟ್ಟಿಗೆ ಕಾರ್ಖಾನೆ ಮಾಲೀಕರ ಮೇಲೆ ಆಧಾರ ರಹಿತ ದೂರು ನೀಡಿ ದೌರ್ಜನ್ಯ ಎಸಗುತ್ತಿರುವ ಮುಕ್ತಿ ಒಕ್ಕೂಟ ಹಾಗೂ ಶಾಂತ ಜೀವ-ಜ್ಯೋತಿ ಎನ್ ಜಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಜಾಗೃತಿ ಅಭಿಯಾನ ಸಮಿತಿ ಅಧ್ಯಕ್ಷ ಸಿ.ಎಂ.ಕೃಷ್ಣ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ರಾಮನಗರ: ದುರುದ್ದೇಶದಿಂದ ಇಟ್ಟಿಗೆ ಕಾರ್ಖಾನೆ ಮಾಲೀಕರ ಮೇಲೆ ಆಧಾರ ರಹಿತ ದೂರು ನೀಡಿ ದೌರ್ಜನ್ಯ ಎಸಗುತ್ತಿರುವ ಮುಕ್ತಿ ಒಕ್ಕೂಟ ಹಾಗೂ ಶಾಂತ ಜೀವ-ಜ್ಯೋತಿ ಎನ್ ಜಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಜಾಗೃತಿ ಅಭಿಯಾನ ಸಮಿತಿ ಅಧ್ಯಕ್ಷ ಸಿ.ಎಂ.ಕೃಷ್ಣ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಚಕರಹಳ್ಳಿ ಹೊಸ ಬಡಾದಣೆ ಖಾತೆ ನಂ.24/331/1, 129/331/2 ನಲ್ಲಿರುವ ಸೈಯದಾ ಮಂಜೀರಾಬಾನು ಅವರಿಗೆ ಸೇರಿದ ಜಮೀನಿನಲ್ಲಿರುವ ಎಂಎಸ್ ಬಿ ಬ್ರಿಕ್ಸ್ ಇಂಡಸ್ಟ್ರಿ ವಿರುದ್ಧ ಎನ್ ಜಿಒ ದಾಖಲಿಸಿರುವ ದೂರಿನ ಕುರಿತು ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಾಗಿರುವುದು ಸಾಬೀತಾದರೆ ಸೂಕ್ತ ಕ್ರಮ ಜರುಗಿಸಲಿ. ಇಲ್ಲದಿದ್ದರೆ ಎನ್ ಜಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದರು.

ಕಳೆದ 30 ವರ್ಷಗಳಿಂದ ಎಂಎಸ್ ಬಿ ಇಂಡಸ್ಟ್ರಿ ಹೆಸರಿನ ಕಾರ್ಖಾನೆ ಪ್ರಾಧಿಕಾರದಿಂದ ಪರವಾನಗಿ ಪಡೆದು, ತೆರಿಗೆ ಪಾವತಿಸಿಕೊಂಡು ನಿಯಮಾನುಸಾರ ನಡೆಸುತ್ತಿದ್ದಾರೆ. ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುವವರು ಸುಮಾರು 15ರಿಂದ 20 ಕಾರ್ಮಿಕರಿದ್ದು, ಇದರಲ್ಲಿ ಒರಿಸ್ಸಾ ಮತ್ತು ಬಿಹಾರದಿಂದ ಜೀವನೋಪಾಯಕ್ಕಾಗಿ ವಲಸೆ ಬಂದವರಿದ್ದಾರೆ. ಈ ಎಲ್ಲ ಕಾರ್ಮಿಕರಿಗೆ ಆಗತ್ಯವಿರುವ ದಿನಗೂಲಿ ಹಣ, ಉಳಿದುಕೊಳ್ಳಲು ವಸತಿ ಇತರೆ ಅಗತ್ಯ ಸೌಲಭ್ಯಗಳನ್ನು ಮಾಲೀಕರು ಮಾಡಿಕೊಟ್ಟಿದ್ದು, ಕಾರ್ಮಿಕರ ಮಕ್ಕಳನ್ನು ಸ್ಥಳೀಯ ಅಂಗನವಾಡಿಯಲ್ಲಿಯೂ ದಾಖಲಿಸಿದ್ದಾರೆ.

ಆದರೆ, ಮುಕ್ತಿ ಒಕ್ಕೂಟ ಹಾಗೂ ಶಾಂತ ಜೀವ-ಜ್ಯೋತಿ ಎನ್ ಜಿಒ ಇದೆಲ್ಲವನ್ನು ಮರೆಮಾಚಿ ಕಾರ್ಖಾನೆ ಮಾಲೀಕರ ಮೇಲೆ ಕಾರ್ಮಿಕರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದರು ಮತ್ತು ಬಾಲ ಕಾರ್ಮಿಕರಿದ್ದರು ಎಂದು ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿದರು.

ಕಳೆದ ಒಂದು ವಾರದ ಹಿಂದೆ ಎನ್‌ಜಿಒ ಸಂಸ್ಥೆಯ ಮಂಜೇಶ್ ಕುಮಾರ್ ಸರಿಯಾಗಿ ಇಟ್ಟಿಗೆ ಕಾರ್ಖಾನೆ ಹೆಸರನ್ನೂ ತಿಳಿದುಕೊಳ್ಳದೆ ಬಿಆರ್‌ಸಿ ಬ್ರಿಕ್ಸ್ ಇಂಡಸ್ಟ್ರಿ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಏಕಾಏಕಿ ಜಿಲ್ಲಾ ಕಾನೂನು ಸೇವೆಯ ಅಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಹಾಗೂ ಎನ್‌ಜಿಪಿ ದೂರುದಾರರು, ಕಾರ್ಖಾನೆ ಆವರಣಕ್ಕೆ ಭೇಟಿ ನೀಡಿ ಸರಿಯಾಗಿ ಸ್ಥಳ ಪರಿಶೀಲನೆ ಮಾಡಿಯೇ ಇಲ್ಲ. ಆದರೂ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.

ದೂರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾನೂನು ಕಾಯ್ದೆಗಳ ಪ್ರಕಾರ ಮುಕ್ತ ಮತ್ತು ಪಾರದರ್ಶಕ ತನಿಖೆ ಕೈಗೊಂಡು, ಎಂಎಸ್ ಬಿ ಕಾರ್ಖಾನೆ ಮಾಲೀಕರರ ಮೇಲಿನ ದೂರಿನ ಸಾರಾಂಶವಂತೆ ಅಪರಾಧ ಸಾಬೀತಾದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ. ಇಲ್ಲವಾದಲ್ಲಿ ಕೂಲಿ ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಎನ್‌ಜಿಓ ವಿರುದ್ಧ ಜಿಲ್ಲಾಡಳಿತದ ಸಮಯ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುವುದು ಹಾಗೂ ಇನ್ನಿತರೆ ಕಾಯ್ದೆಗಳ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂಎಸ್ ಬಿ ಕಾರ್ಖಾನೆ ಮಾಲೀಕರಾದ ಮಂಜೀರಾ ಬಾನು, ಮಹಮ್ಮದ್ ಶಾದಾಬ್ , ತಬ್ರೇಜ್ ಷರೀಫ್ , ಶಿವಶಂಕರ್ , ಗುಡ್ಡೆ ವೆಂಕಟೇಶ್, ಪ್ರಕಾಶ್ ಇದ್ದರು.

16ಕೆಆರ್ ಎಂಎನ್ 9.ಜೆಪಿಜಿ

ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಸ್ವಾಭಿಮಾನ ಜಾಗೃತಿ ಅಭಿಯಾನ ಸಮಿತಿ ಅಧ್ಯಕ್ಷ ಸಿ.ಎಂ.ಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.