ಹಾಸ್ಟೆಲ್‌ ಪಕ್ಕದ ಮುಕ್ತಿಧಾಮ ಸ್ಥಳಾಂತರಿಸಿ

| Published : Mar 04 2025, 12:30 AM IST

ಸಾರಾಂಶ

ಮುಕ್ತಿಧಾಮ ಸ್ಥಳಾಂತರಿಸಬೇಕು ಹಾಗೂ ಇತರೇ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ತಾಲೂಕು ಕಚೇರಿ ಬಳಿ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆಯ ಮುಖಂಡರಿಂದ ಅನಿರ್ದಿಷ್ಟವಾಧಿ ಮುಷ್ಕರ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಮುಕ್ತಿಧಾಮ ಸ್ಥಳಾಂತರಿಸಬೇಕು ಹಾಗೂ ಇತರೇ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ತಾಲೂಕು ಕಚೇರಿ ಬಳಿ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆಯ ಮುಖಂಡರಿಂದ ಅನಿರ್ದಿಷ್ಟವಾಧಿ ಮುಷ್ಕರ ಕೈಗೊಳ್ಳಲಾಗಿದೆ.

ಸೋಮವಾರ ಪಟ್ಟಣದ ತಾಲೂಕು ಕಚೇರಿಮುಂದ ಹೋರಾಟ ಆರಂಭಿಸಿರುವ ಹೋರಾಟಗಾರರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಎಂಆರ್‌ಎಚ್‌ಎಸ್‌ನ ರಾಜ್ಯಾಧ್ಯಕ್ಷ ಕನ್ನಮೇಡಿ ಕೃಷ್ಠಮೂರ್ತಿ ತುಮಕೂರು ರಸ್ತೆಯಲ್ಲಿರುವ ಪ.ಜಾತಿ ಮತ್ತು ಪ.ಪಂಗಡದ ಪದವಿ ಪೂರ್ವ ಮೆಟ್ರಿಕ್ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಸಮೀಪದಲ್ಲಿರುವ ಮುಕ್ತಿಧಾಮವನ್ನು ಸ್ಥಳಾಂತರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುವು ಮಾಡಿಕೊಡಬೇಕು. ಸರ್ಕಾರಿ ಒತ್ತುವರಿ ಜಾಗದಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಲೇಔಟ್‌ ನಿರ್ಮಾಣ ಕುರಿತು ತನಿಖೆ ನಡೆಸಿ ಕ್ರಮ ಹಾಗೂ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಪ.ಜಾತಿ ಮತ್ತು ಪ.ಪಂಗಡದ ಪದವಿ ಪೂರ್ವ ಮೆಟ್ರಿಕ್ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಉದ್ಘಾಟನೆಗೆ ಸಿದ್ಧವಾಗಿದ್ದು ಇದರ ಪಕ್ಕದಲ್ಲಿಯೇ ಶವ ಸುಡುವ ಕಾರಣ ವಿದ್ಯಾರ್ಥಿನಿಲಯಕ್ಕೆ ಸೇರುವ ವಿದ್ಯಾರ್ಥಿಗಳು ಭಯಭೀತರಾಗುವ ಸಾಧ್ಯತೆಗಳಿದ್ದು ಇದರಿಂದ ಶೈಕ್ಷಣಿಕ ಪ್ರಗತಿಗೆ ತೊಂದರೆ ಆಗಲಿದೆ .ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿನ ಮುಕ್ತಿಧಾಮವನ್ನು ಕೂಡಲೇ ಸ್ಥಳಾಂತರಿಸಗೊಳಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು. ಜೊತೆಗೆ ನಮ್ಮ ಇತರೇ ಬೇಡಿಕೆಗಳು ಈಡೇರುವವರೆಗೂ ನಾವು ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸುವುದಾಗಿ ಹೇಳಿದರು.

ಈ ವೇಳೆ ಬಳಸಮುದ್ರ ಕೆ.ವೆಂಕಟೇಶ್‌. ಎಸ್‌.ಆರ್‌.ಪಾಳ್ಯದ ಕೆಂಚರಾಯಪ್ಪ, ಅಚ್ಚಮ್ಮನಹಳ್ಳಿಯ ಮಂಜುನಾಥ್‌, ಬೊಮ್ಮತನಹಳ್ಳಿಯ ತಿರುಮಲೇಶ್‌ ಇತರರಿದ್ದರು.