ಸಾರಾಂಶ
ಮೂಲ್ಕಿಯ ಶಾಫಿ ಜುಮ್ಮಾ ಮಸ್ಜಿದ್ ಜಮಾತ್ ವತಿಯಿಂದ ಮಸೀದಿ ಆವರಣದಲ್ಲಿ ಆಯೋಜಿಸಲಾದ ಈದ್ ಮಿಲಾದ್ ಸಮಾರೋಪ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಯುವ ಜನಾಂಗ ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆದು ಸರ್ವ ಜನಾಂಗದವರ ಜೊತೆ ಉತ್ತಮ ಬಾಂಧವ್ಯದಿಂದ ಬಾಳಿದರೆ ಸಾಧಕರಾಗಲು ಸಾಧ್ಯ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಲ್ ಹಾಜಿ ಖಾಝಿ ಬಂಬ್ರಾಣ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಹೇಳಿದರು.ಮೂಲ್ಕಿಯ ಶಾಫಿ ಜುಮ್ಮಾ ಮಸ್ಜಿದ್ ಜಮಾತ್ ವತಿಯಿಂದ ಮಸೀದಿ ಆವರಣದಲ್ಲಿ ಆಯೋಜಿಸಲಾದ ಈದ್ ಮಿಲಾದ್ ಸಮಾರೋಪ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಸೀದಿಯ ಖತೀಬರಾದ ಉಸ್ಮಾನುಲ್ ಫೈಝೀ ತೊಡಾರ್ ದುವಾ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಶಾಫಿ ಜುಮ್ಮಾ ಮಸ್ಜಿದ್ ಜಮಾತ್ ಅಧ್ಯಕ್ಷ ಸುಹೈಲ್ ಹೈದರ್ ಎಂ.ಕೆ. ವಹಿಸಿದ್ದರು.ಈ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ಹಾಜಿ ಖಾಝಿ ಬಂಬ್ರಾಣ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್, ಮೂಲ್ಕಿ ನ.ಪಂ. ಸದಸ್ಯ ಪುತ್ತುಬಾವ, ಖತೀಬರಾದ ಉಸ್ಮಾನುಲ್ ಫೈಝೀ ತೊಡಾರ್ ಅವರನ್ನು ಗೌರವಿಸಲಾಯಿತು. ಮಿಲಾದ್ ಫೆಸ್ಟ್ ವಿಜೇತ ದರ್ಸ್ ಮತ್ತು ಮದರಸ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಮೂಲ್ಕಿ ನ.ಪಂ. ಸದಸ್ಯ ಪುತ್ತುಭಾವ, ಉದ್ಯಮಿ ರಿಜ್ವಾನ್ ಬಪ್ಪನಾಡು, ಕಾರ್ನಾಡ್ ಮಸೀದಿಯ ಖತೀಬರಾದ ಇಸ್ಮಾಯಿಲ್ ದಾರೀಮಿ, ಮೂಲ್ಕಿ ಮಸೀದಿ ಜಮಾತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಫಾರೂಕ್, ಕೋಶಾಧಿಕಾರಿ ಇಕ್ಬಾಲ್ ಅಹಮ್ಮದ್, ಕಾರ್ಯದರ್ಶಿ ರಜಾಕ್, ಮಾಜಿ ಅಧ್ಯಕ್ಷ ಲಿಯಾಕತ್ ಅಲಿ, ನುಸ್ರತುಲ್ ಮಸಾಕೀನ್ ಅಧ್ಯಕ್ಷ ಅಮಾನುಲ್ಲಾ, ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲ್ ಫಾಝ್ ಮತ್ತಿತರರು ಉಪಸ್ಥಿತರಿದ್ದರು.ಶಾಸಕ ಉಮಾನಾಥ ಕೋಟ್ಯಾನ್, ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಇಕ್ಬಾಲ್ ಅಹಮ್ಮದ್ ಸ್ವಾಗತಿಸಿದರು. ಇಸ್ಮಾಯಿಲ್ ನಿರೂಪಿಸಿದರು.