ಸಾರಾಂಶ
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶಾಂಭವಿ ಸಂಜೀವಿನಿ ಒಕ್ಕೂಟ, ತಾಲೂಕು ಹಾಗೂ ಲಯನ್ಸ್ ಕ್ಲಬ್ ಮೂಲ್ಕಿ ಸಹಯೋಗದಲ್ಲಿ ಮೂಲ್ಕಿಯ ಲಯನ್ಸ್ ಸೌಧದಲ್ಲಿ ಉಚಿತ ಕೃತಕ ಆಭರಣ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸ್ವ-ಉದ್ಯೋಗದ ಮೂಲಕ ಮಹಿಳೆಯರು ಸಮಾಜದಲ್ಲಿ ಮುಂದೆ ಬಂದು ಸಾಧಕರಾಗುತ್ತಿರುವುದು ಶ್ಲಾಘನೀಯ ಎಂದು ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಡ್ರಿಜ್ ಅಜಯ್ ಡಿಸೋಜ ಹೇಳಿದರು.ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶಾಂಭವಿ ಸಂಜೀವಿನಿ ಒಕ್ಕೂಟ, ತಾಲೂಕು ಹಾಗೂ ಲಯನ್ಸ್ ಕ್ಲಬ್ ಮೂಲ್ಕಿ ಸಹಯೋಗದಲ್ಲಿ ಮೂಲ್ಕಿಯ ಲಯನ್ಸ್ ಸೌಧದಲ್ಲಿ ಎರಡು ದಿನ ನಡೆಯಲಿರುವ ಉಚಿತ ಕೃತಕ ಆಭರಣ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಂಭವಿ ಸಂಜೀವಿನಿ ಒಕ್ಕೂಟ ಮೂಲ್ಕಿ ತಾಲೂಕಿನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆ ಪ್ರಬಂಧಕ ಸಚಿನ್ ಹೆಗ್ಡೆ, ಲಯನ್ಸ್ ಕ್ಲಬ್ ಮೂಲ್ಕಿ ಅಧ್ಯಕ್ಷ ರೊಲ್ಪಿ ಡಿಕೋಸ್ತಾ, ಲಯನ್ಸ್ ವಲಯಾಧ್ಯಕ್ಷೆ ಶೀತಲ್ ಸುಶೀಲ್ ಮತ್ತಿತರರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶುಭಲಕ್ಷ್ಮೀ ಮೂಡುಬಿದಿರೆ ತರಬೇತಿ ನೀಡಿದರು. ಗೀತಾ ಗಣೇಶ್ ವಂದಿಸಿದರು. ಪ್ರೀತಿಕಾ ಡಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))