ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ 4ರಂದು ನಡೆಯಲಿದೆ.
ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ 4ರಂದು ನಡೆಯಲಿದೆ. ಈ ಪ್ರಯುಕ್ತ ಮಂಗಳವಾರ ಬೆಳಗ್ಗೆ 5ಕ್ಕೆ ದೇವಸ್ಥಾನದ ಬಾಗಿಲು ತೆರೆಯುವುದು, ಬೆಳಗ್ಗೆ 6 ಕ್ಕೆ ನದಿಸ್ನಾನ, ಪೇಟೆ ಸವಾರಿ, ಶ್ರೀ ಬಿಂದುಮಾಧವ ದೇವರಿಗೆ ಅಭಿಷೇಕ, ಸಾನಿಧ್ಯ ಹವನ,ಮಧ್ಯಾಹ್ನ 12.30ಕ್ಕೆ ಮಹಾನೈವೇದ್ಯ, ಮಂಗಳಾರತಿ, ಸಂಜೆ 7 ಕ್ಕೆ ಭೂರಿಸಮಾರಾಧನೆ, ರಾತ್ರಿ 8.30ಕ್ಕೆ ರಾತ್ರಿ ಪೂಜೆ, ದರ್ಶನಸೇವೆ, ದೀಪಾರಾಧನೆ, ಸಣ್ಣರಥೋತ್ಸವ, ನಿತ್ಯೋತ್ಸವ, ಭಂಡಿ ಗರುಡೋತ್ಸವ, ವಸಂತಪೂಜೆ ನಡೆಯಲಿದೆ.4ರಂದು ಬೆಳಗ್ಗೆ 7 ಕ್ಕೆ ನಜರು ಕಾಣಿಕೆ, 8.30ಕ್ಕೆ ಮಹಾಪ್ರಾರ್ಥನೆ, 9ಕ್ಕೆ ಶ್ರೀ ಉಗ್ರನರಸಿಂಹ ದೇವರಿಗೆ ಅಭಿಷೇಕ, ಪ್ರಾರಂಭ, ಪಂಚಾಮೃತ ಅಭಿಷೇಕ ಮತ್ತು ಸೀಯಾಳ ಅಭಿಷೇಕ, ಸಂಜೆ 3.30ಕ್ಕೆ ಕನಕಾಭಿಷೇಕ, ಗಂಗಾ ಭಾಗೀರಥಿ ಅಭಿಷೇಕ, ಸಂಜೆ 6.30ಕ್ಕೆ ಮಹಾಪೂಜೆ, ಮಹಾನೈವೇದ್ಯ, ಮಂಗಳಾರತಿ, ದೇವದರ್ಶನದಲ್ಲಿ ಪೇಟೆಯ ಹತ್ತು ಸಮಸ್ತರಿಗೆ ಪ್ರಸಾದ ಭೂರಿಸಮಾರಾಧನೆ, ರಾತ್ರಿ 1ಕ್ಕೆ ರಾತ್ರಿ ಪೂಜೆ, ದೀಪಾರಾಧನೆ, ರಥೋತ್ಸವ, ವಿಶ್ರಾಂತಿಪೂಜೆ, ರಜತ ರಥದಲ್ಲಿ ಸ್ವರ್ಣಗರುಡೋತ್ಸವ, ದೇವದರ್ಶನದಲ್ಲಿ ಅಭಯ ಪ್ರಸಾದ, ನಿತ್ಯೋತ್ಸವ, ಚಂದ್ರಮಂಡಲ ಉತ್ಸವ, ವಸಂತಪೂಜೆ ನೆರವೇರಲಿದೆ.ಬೆಳಗ್ಗೆ 8.30ಕ್ಕೆ ಮಹಾಪ್ರಾರ್ಥನೆ, 9 ಘಂಟೆ ಮೊದಲ್ಗೊಂಡು ಮದ್ಯಾಹ್ನ ಘಂಟೆ ಪರ್ಯಂತ ಮಾತ್ರ ಶ್ರೀಉಗ್ರನರಸಿಂಹದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಶಿಯಾಳ ಅಭಿಷೇಕವು ಜರಗಲಿರುವುದು. ಮದ್ಯಾಹ್ನ 3.30ಕ್ಕೆ ಕನಕಾಭಿಷೇಕ, ಗಂಗಾಭಾಗೀರಥಿ ಅಭಿಷೇಕ, ಸಾಯಂಕಾಲ 6.30ಕ್ಕೆ ಮಹಾನೈವೇದ್ಯ ಮಂಗಳಾರತಿ, 7 ರಿಂದ ಭೂರಿಸಮಾರಧನೆ, ರಾತ್ರಿ 01:00 ರಿಂದ ರಾತ್ರಿಪೂಜೆ, ದೀಪಾರಾಧನೆ, ರಥೋತ್ಸವ, ವಿಶ್ರಾಂತಿಪೂಜೆ, ಸ್ವರ್ಣಗರುಡ ಸಹಿತ ರಜತರಥ ಉತ್ಸವ, ದೇವದರ್ಶನದಲ್ಲಿ ಅಭಯಪ್ರಸಾದ, ನಿತ್ಯೋತ್ಸವ ಚಂದ್ರಮಂಡಲ ಉತ್ಸವ, ವಸಂತಪೂಜೆ ವಗೈರೆ ಕಾರ್ಯಕ್ರಮಗಳು ಜರಗಲಿರುವುದು.ಪ್ರತಿಷ್ಠಾ ಹುಣ್ಣಿಮೆಯ ದಿನ ಶ್ರೀದೇವರಿಗೆ ಅಭಿಷೇಕಕ್ಕೆ ಶಿಯಾಳಗಳನ್ನು 5ಕ್ಕಿಂತ ಜಾಸ್ತಿ ಒಪ್ಪಿಸುವ ಹರಕೆ ಉಳ್ಳವರು ಈ ಮಿತಿಗಿಂತ ಹೆಚ್ಚಿನ ಶಿಯಾಳಗಳ ಮೌಲ್ಯವನ್ನು ನಗದಾಗಿ ಭಂಡಾರಕ್ಕೆ ಒಪ್ಪಿಸಿ ರಶೀದಿ ಪಡೆಯಬಹುದು. ಶಿಯಾಳಗಳನ್ನು ಒಪ್ಪಿಸುವವರು ಸದ್ರಿದಿನ ಮದ್ಯಾಹ್ನ ಘಂಟೆ 1:30ರ ಒಳಗೆ ಒಪ್ಪಿಸತಕ್ಕದ್ದು ಎಂದು ಪ್ರಕಟಣೆ ತಿಳಿಸಿದೆ.ಸಾಯಂಕಾಲ ಮಹಾನೈವೇದ್ಯ ಮಂಗಳಾರತಿ ಸಮಯ ದೇವದರ್ಶನದಲ್ಲಿ ಮಾಮೂಲು ಪದ್ದತಿಯನ್ನು ಹೊರತುಪಡಿಸಿ ಇತರ ಯಾರಾದರೂ ಸೇವಾದಾರರು ಇದ್ದಲ್ಲಿ ರಾತ್ರಿ ರಥಉತ್ಸವದ ನಂತರ ಧ್ವಜಸ್ಥಂಭದ ಬಳಿಯಲ್ಲಿ ಅಭಯಪ್ರಸಾದವನ್ನು ಪಡೆಯಬಹುದು.10ರಂದು ವಿಜಯೀಂದ್ರ ತೀರ್ಥ ಸ್ವಾಮೀಜಿ ಪುಣ್ಯ ತಿಥಿಯಂದು ಬೆಳಗ್ಗೆ 10.30ಕ್ಕೆ ದರ್ಶನಸೇವೆ, ಸಂಜೆ 5.30ಕ್ಕೆ ಪೇಟೆ ಸವಾರಿ, ಹಗಲೋತ್ಸವ, ಸಂಜೆ 7ಕ್ಕೆ ಮಹಾನೈವೇದ್ಯ, ಮಂಗಳಾರತಿ, ಭೂರಿಸಮಾರಾಧನೆ, ರಾತ್ರಿ 9.30ಕ್ಕೆ ರಾತ್ರಿಪೂಜೆ, ದೀಪಾರಾಧನೆ, ಸಣ್ಣರಥೋತ್ಸವ, ನಿತ್ಯೋತ್ಸವ, ಭಂಡಿಗರುಡೋತ್ಸವ, ವಸಂತಪೂಜೆ ನಡೆಯುವುದು.14ರಂದು ಸಹಸ್ರ ಕುಂಭಾಭಿಷೇಕದ 29ನೇ ವರ್ಧಂತ್ಯುತ್ಸವದ ಅಂಗವಾಗಿ ಬೆಳಗ್ಗೆ 9ಕ್ಕೆ ಪ್ರಾರ್ಥನೆ, ಮೂಲ ಮಂತ್ರಹವನ,ಮಧ್ಯಾಹ್ನ 12.30ಕ್ಕೆ ಮಹಾನೈವೇದ್ಯ, ಮಂಗಳಾರತಿ, ದರ್ಶನ ಸೇವೆ, ಸಂಜೆ 5.30ಕ್ಕೆ ರಾತ್ರಿಪೂಜೆ, ದೀಪಾರಾಧನೆ, ಪೇಟೆ ಸವಾರಿ, ದಿಂಡಿ ಉತ್ಸವ, ಸಣ್ಣರಥೋತ್ಸವ, ನಿತ್ಯೋತ್ಸವ ಭಂಡಿ ಗರುಡೋತ್ಸವ, ವಸಂತಪೂಜೆ, ರಾತ್ರಿ 8.30ಕ್ಕೆ ಭೂರಿಸಮಾರಾಧನೆ ಜರಗಲಿದೆಯೆಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.