ಮೂಲ್ಕಿ: ಮಕ್ಕಳಲ್ಲಿ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ, ಆತ್ಮವಿಶ್ವಾಸ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮಾಡಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಸಮಾಜದ ಪಾತ್ರ ಮಹತ್ವದ್ದಾಗಿದೆ ಎಂದು ಕಂಕನಾಡಿಯ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಮನೋವೈದ್ಯಕೀಯ ಆಪ್ತ ಸಮಾಲೋಚಕ ಶಿಮಂತೂರು ಕೆ.ಎಸ್. ಶ್ರೀಪತಿ ಭಟ್ ಹೇಳಿದರು.
ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಕ್ಕಳ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಾಗಿ ಜರಗಿದ ಉಚಿತ ಬೇಸಿಗೆ ಶಿಬಿರ ‘ಬಾಲವಿಕಾಸ ಶಿಬಿರ - 2026’ರ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಯೋಗ ಗುರು ಜಯ ಮುದ್ದು ಶೆಟ್ಟಿ ಕೆಂಚನಕೆರೆ, ನಾರಾಯಣ ಕುಬೆವೂರು, ಶ್ಲೋಕ ಕಂಠಪಾಠ ಮಾಡಿಸಿದ ಶ್ರೀ ಶಾರದಾ ಶಾಲೆಯ ಪ್ರಾಂಶುಪಾಲ ಜಿತೇಂದ್ರ ವಿ. ರಾವ್ ಹೆಜಮಾಡಿ, ಅಭಿನಯ ತರಬೇತಿ ನೀಡಿದ ರಂಗನಟ ತಾರನಾಥ್ ಊರ್ವ, ಆವೆ ಮಣ್ಣಿನ ಕಲಾಕೃತಿ ಹಾಗೂ ಕರಕುಶಲ ತರಬೇತುಗಾರ ವೆಂಕಿ ಫಲಿಮಾರು ಮತ್ತು ಭಜನಾ ತರಬೇತಿ ನೀಡಿದ ಖ್ಯಾತ ಗಾಯಕ ಸುರೇಶ್ ಆಚಾರ್ಯ ಹಳೆಯಂಗಡಿ ಯವರನ್ನು ಗೌರವಿಸಲಾಯಿತು.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಪುನರೂರು, ಮೂಲ್ಕಿಯ ಹೆಚ್. ಡಿ. ಎಫ್ ಸಿ. ಬ್ಯಾಂಕ್‌ನ ಶಾಖಾ ಪ್ರಬಂಧಕ ಅಖಿಲ್ ಕುಮಾರ್ ಆಳ್ವ, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್.ಕೆ. ಉಷಾರಾಣಿ, ಕೋಶಾಧಿಕಾರಿ ಚಂದ್ರಿಕಾ ಸುಧೀರ್, ಜನವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷ ಸುರೇಶ್ ರಾವ್ ಪಿ.ಎಸ್ , ಪದಾಧಿಕಾರಿಗಳಾದ ಗೀತಾ ಶೆಟ್ಟಿ, ಶೋಭಾ ರಾವ್ ಉಪಸ್ಥಿತರಿದ್ದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು. ಹಿತಾ ಉಮೇಶ್ ನಿರೂಪಿಸಿದರು.