ಹಳೆಯಂಗಡಿಯ ಹರಿ ಓಂ ಕಟ್ಟಡದ ಆವರಣದಲ್ಲಿ ಜರಗಿದ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ 5ನೇ ವರ್ಷದ ಸಂಭ್ರಮಾಚರಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ: ಜನರಿಗೆ ಉಪಕಾರ ಮಾಡುವ ನಿಟ್ಟಿನಲ್ಲಿ ಹಳೆಯಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಆರಂಭಗೊಂಡಿದ್ದು ಕೇವಲ ಐದು ವರ್ಷದಲ್ಲಿ ಜನರ ವಿಶ್ವಾಸ ಗಳಿಸಿ ನಾಲ್ಕು 4 ಶಾಖೆಯನ್ನು ಆರಂಭಿಸಿದೆ. ಬ್ಯಾಂಕಿಂಗ್ ಕ್ಷೇತ್ರದ ಜೊತೆಗೆ ಸಮಾಜ ಮುಖಿ ಕಾರ್ಯವನ್ನು ಮಾಡುತ್ತಿರುವ ಸಂಸ್ಥೆಯು ಮುಂದಿನ 25 ನೇ ವರ್ಷಕ್ಕೆ ನೂರು ಶಾಖೆಯನ್ನು ಹೊಂದಲೆಂದು ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಹೇಳಿದ್ದಾರೆ.ಹಳೆಯಂಗಡಿಯ ಹರಿ ಓಂ ಕಟ್ಟಡದ ಆವರಣದಲ್ಲಿ ಜರಗಿದ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ 5ನೇ ವರ್ಷದ ಸಂಭ್ರಮಾಚರಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಚ್ಚಿನ ಸಂಖ್ಯೆ ಹೊಂದಲಿ: ಅಧ್ಯಕ್ಷತೆ ವಹಿಸಿದ್ದ ಮೂಲ್ಕಿಸೀಮೆ ಅರಸರು ಹಾಗೂ ಬಪ್ಪನಾಡು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಎಂ ದುಗ್ಗಣ್ಣ ಸಾವಂತರು ಮಾತನಾಡಿ ಬಡವರಿಗಾಗಿ ರಾಷ್ಟ್ರೀಕರಣ ಮೂಲಕ ಬ್ಯಾಂಕ್ ಬಾಗಿಲನ್ನು ತೆರೆಸಿದ ಮಾಜಿ ಪ್ರಧಾನಿ ಇಂದಿರಾರವರ ಪ್ರಿಯದರ್ಶಿನಿ ಹೆಸರಿನಲ್ಲಿ ಕೋವಿಡ್ ಸಂದರ್ಭ ಸರಳವಾಗಿ ಆರಂಭಗೊಂಡ ಬ್ಯಾಂಕ್ 5 ನೇ ವರ್ಷದಲ್ಲಿ 4 ಶಾಖೆಯನ್ನು ಹೊಂದಿ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಇನ್ನು ಹೆಚ್ಚಿನ ಶಾಖೆಗಳನ್ನು ಹೊಂದಲೆಂದು ಹಾರೈಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಂಭ್ರಮದ ನುಡಿ ನೀಡಿದರು. ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್ ಉದ್ಘಾಟನೆಯನ್ನು ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ನೆರವೇರಿಸಿದರು. ಸ್ಥಾಪನಾ ವರ್ಷದ ಮೌಲ್ಯಯುತ ಸದಸ್ಯರಿಗೆ ಹಾಗೂ ಸ್ಥಾಪನ ವರ್ಷದ ಸಿಬ್ಬಂದಿಗೆ ಗೌರವವನ್ನು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅದ್ಯಕ್ಷೆ ಮಮತ ಗಟ್ಟಿ ಸಲ್ಲಿಸಿದರು. ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಬಿ. ಸೂರ್ಯಕುಮಾರ್, ಮೂಲ್ಕಿಯ ಕಾರ್ನಾಡಿನ ಇಮ್ಯಾಕ್ಯುಲೇಟ್ ಕನ್ಸಷ್ಯನ್ ಚರ್ಚಿನ ಪಾಲನಾ ಸಮಿತಿಯ ಸಂಯೋಜಕ ಪೌಲ್ ರೋಲ್ಪಿ ಡಿಕೋಸ್ಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖ್ಯಾತ ಚಲನಚಿತ್ರ ನಟಿ ಅದ್ವಿತಿ ಶೆಟ್ಟಿ, ಖ್ಯಾತ ತುಳು ಚಿತ್ರ ನಟಿ ಗಾನ ಭಟ್ ಮತ್ತು ಯೂಟ್ಯೂಬರ್ ಆ್ಯಂಡ್ ಕಂಟೆಂಟ್ ಕ್ರಿಯೇಟರ್ ಶಿಲ್ಪ ಶೆಟ್ಟಿ ಅವರನ್ನು ಗೌರವಿಸಲಾಯಿತು. ಹಳೆಯಂಗಡಿ ಪ್ರಿಯದರ್ಶಿನಿ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಉಪಾಧ್ಯಕ್ಷ ವಿಜಯ ಕುಮಾರ್ ಸನಿಲ್ , ನಿರ್ದೇಶಕರಾದ ಉಮಾನಾಥ ಜೆ ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ. ಶೆರಿಲ್ ಅಯೋನ, ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನ್ ದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಭಾನು, ಕರಿಯ ಕಾಡಿಗ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಚ್ ವಸಂತ ಬೆರ್ನಾಡ್ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು, ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಓಂಕಾರ್ ಕಲಾ ಸಂಗಮ ಪಡುಬಿದ್ರಿ ಮತ್ತು ದಿ ಡ್ಯಾನ್ಸ್ ಸ್ಟುಡಿಯೋ ಪಕ್ಷಿಕೆರೆಯವರಿಂದ ನೃತ್ಯ ಪ್ರದರ್ಶನ, ಸಂಜೆ ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಪ್ರತಿಷ್ಠಿತ ನೃತ್ಯ ತಂಡ ಸಿಜ್ಲಿಂಗ್ ಗಯ್ಸ್ ಅವರಿಂದ ನೃತ್ಯ ಪ್ರದರ್ಶನ ಜರಗಿತು.