ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿ

| Published : Mar 21 2024, 01:05 AM IST

ಸಾರಾಂಶ

ಮೂಲ್ಕಿ ಬಸ್‌ ನಿಲ್ದಾಣದ ಬಳಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನ ಎದುರು ಭಾಗ ಸಂಪೂರ್ಣ ಹಾನಿಯಾಗಿದ್ದು ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳು ಚಾಲಕನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿ ಬಸ್ ನಿಲ್ದಾಣದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ನಡೆದಿದೆ.

ಕುಂದಾಪುರ ಅನಗಳ್ಳಿ ನಿವಾಸಿ ದಿನೇಶ್ ಪೂಜಾರಿ (42) ತಮ್ಮ ಕ್ರೆಟಾ ಕಾರಿನಲ್ಲಿ ಬಜಪೆ ವಿಮಾನ ನಿಲ್ದಾಣಕ್ಕೆ ಕಾಶಿಯಿಂದ ಬರುತ್ತಿದ್ದ ಸಂಬಂಧಿಕರನ್ನು ಕರೆತರಲು ಹೊರಟಿದ್ದರು. ಈ ವೇಳೆ ಮೂಲ್ಕಿ ಬಸ್‌ ನಿಲ್ದಾಣದ ಬಳಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನ ಎದುರು ಭಾಗ ಸಂಪೂರ್ಣ ಹಾನಿಯಾಗಿದ್ದು ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳು ಚಾಲಕನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳೂರು ಉತ್ತರ ಸಂಚಾರಿ ಠಾಣೆ ಪೊಲೀಸರು, ಹೆದ್ದಾರಿ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಕ್ರೇನ್ ಮೂಲಕ ಕಾರನ್ನು ತೆರವುಗೊಳಿಸಲಾಯಿತು. ---ಅನಾರೋಗ್ಯದಿಂದ ೨ನೇ ತರಗತಿ ವಿದ್ಯಾರ್ಥಿನಿ ನಿಧನಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತೌಹೀದ್ ವಿದ್ಯಾಸಂಸ್ಥೆಯ 2ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ತಲಪಾಡಿಯ ಸಫೀರ್ ಅಹ್ಮದ್ ಎಂಬವರ ಮಗಳು ಆಯಿಷಾ ಶಹಿಮಾ (7) ಮೃತ ವಿದ್ಯಾರ್ಥಿನಿ. ಆಯಿಷಾ ಶಹಿಮಾ ಮೂರು ವಾರಗಳ ಹಿಂದೆ ಮನೆಯಲ್ಲಿ ಕುಸಿದುಬಿದ್ದಿದ್ದು ತಕ್ಷಣ ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಮೂರು ದಿನ ಕೋಮದಲ್ಲಿದ್ದ ಈಗೆ ನಂತರ ಹೆಚ್ಚಿನ ಚಿಕಿತ್ಸೆ ನೀಡಿದ್ದು, ಸ್ವಲ್ಪಮಟ್ಟಿಗೆ ಸ್ಪಂದಿಸುತ್ತಿದ್ದಳು. ಬುಧಾವರ ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದಿದ್ದಾಳೆ. ವಿದ್ಯಾರ್ಥಿನಿಯ ಅಕಾಲಿಕ ನಿಧನಕ್ಕೆ ತೌಹೀದ್ ವಿದ್ಯಾಸಂಸ್ಥೆ, ತಲಪಾಡಿ ಜಮಾಅತ್ ತೀವ್ರ ಸಂತಾಪ ಸೂಚಿಸಿದೆ.

---19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ ಮಂಗಳೂರು: ನಕಲಿ ಅಂಕಪಟ್ಟಿನೀಡಿ ವಂಚನೆಗೆ ಯತ್ನಿಸಿದ್ದ ಪ್ರಕರಣದ ಆರೋಪಿಯನ್ನು 19 ವರ್ಷಗಳ ಬಳಿಕ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕದ್ರಿ ಪೊಲೀಸರು ಬಂಧಿಸಿದ್ದಾರೆ. ಅಯ್ಯನಕಟ್ಟೆ ನಿವಾಸಿ ಎ.ಕೆ. ಮೊಹಮ್ಮದ್‌ (49) ಬಂಧಿತ.2005ರಲ್ಲಿ ಪೆಟ್ರೋಲ್‌ ಬಂಕ್‌ ಡೀಲರ್‌ಶಿಪ್‌ ಬಗ್ಗೆ ಕೊಡಿಯಾಲಬೈಲ್‌ನ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ ಡಿವಿಜನ್‌ ಮ್ಯಾನೇಜರ್‌ಗೆ ಈತ ನಕಲಿ ಅಂಕ ಪಟ್ಟಿ ನೀಡಿದ್ದ. ಕದ್ರಿ ಪೊಲೀಸ್‌ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಬೆಳ್ಳಾರೆಯಲ್ಲಿ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.