ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಂಬಾಡಮ್ಮ ದೇವಾಲಯದ ಮಂಡಲ ಪೂಜೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಕನ್ನಡಪ್ರಭ ವಾತೆ ಕುಶಾಲನಗರ
ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಂಬಾಡಮ್ಮ ದೇವಾಲಯದ ಮಂಡಲ ಪೂಜೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಅರ್ಚಕ ಕೃಷ್ಣಮೂರ್ತಿ ಭಟ್ ಹಾಗೂ ಗಿರೀಶ್ ಭಟ್ ನೇತೃತ್ವದ ತಂಡ ಧಾರ್ಮಿಕ ವಿಧಿ ನೆರವೇರಿಸಿದರು.ಕನ್ನಂಬಾಡಮ್ಮ ದೇವರ ವಿಗ್ರಹಕ್ಕೆ ಅಭಿಷೇಕ ನಡೆಯಿತು.ಈ ಸಂದರ್ಭ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ ಸಮಿತಿ ಪದಾಧಿಕಾರಿಗಳನ್ನು, ಗ್ರಾಮಸ್ಥರು, ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.ಗ್ರಾಮದ ಹಿರಿಯರಾದ ಎಂ.ಕೆ. ರಾಜು, ದೇವಾಲಯ ಸಮಿತಿ ಅಧ್ಯಕ್ಷ ಎಂ.ಎಚ್. ಅಣ್ಣೇ ಗೌಡ, ಉಪಾಧ್ಯಕ್ಷ ಎಂ.ಆರ್. ನಂಜುಂಡ, ಕಾರ್‍ಯದರ್ಶಿ ಆರ್. ಪ್ರವೀಣ್, ಖಜಾಂಚಿ ಎಂ.ವಿ. ದಾಸೇ ಗೌಡ ಇದ್ದರು.