ಸಾರಾಂಶ
ನಾಡಿನ ಅನೇಕ ಹರ, ಗುರು, ಚರಮೂರ್ತಿಗಳು ಹಾಗೂ ಗಣ್ಯರು ಮತ್ತು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿಂಗಾರಗೊಂಡ ಮಹಾರಥೋತ್ಸವ ಜರುಗಿತು
ಮುಂಡರಗಿ: ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ 155ನೇ ಯಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನದಾನೀಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಮಹಾರಥೋತ್ಸವಕ್ಕೆ ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಚಾಲನೆ ನೀಡಿದರು.
ನಾಡಿನ ಅನೇಕ ಹರ, ಗುರು, ಚರಮೂರ್ತಿಗಳು ಹಾಗೂ ಗಣ್ಯರು ಮತ್ತು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿಂಗಾರಗೊಂಡ ಮಹಾರಥೋತ್ಸವ ಜರುಗಿತು.ಮಹಾರಥ ಪಟ್ಟಣದ ಗಾಂಧಿ ವೖತ್ತದಿಂದ ಪ್ರಾರಂಭವಾಗಿ ಸರ್ ಸಿದ್ದಪ್ಪ ಕಂಬಳಿ ವೃತ್ತದ ವರೆಗೆ ಸಾಗಿ ಮತ್ತೆ ಶ್ರೀಮಠವನ್ನು ತಲುಪಿತು. ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಜಿ ಹಾಗೂ ಅನೇಕ ಶ್ರೀಗಳು ಉಪಸ್ಥಿತರಿದ್ದರು.
ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ರಾಮಸ್ವಾಮಿ ಹೆಗ್ಗಡಾಳ, ಅಂದಪ್ಪ ಗೋಡಿ, ಎಸ್.ವಿ. ಲಿಂಬಿಕಾಯಿ, ನಾಗೇಶ ಹುಬ್ಬಳ್ಳಿ, ಲಿಂಗರಾಜಗೌಡ ಪಾಟೀಲ, ನಾಗರಾಜ ಕೊರ್ಲಹಳ್ಳಿ, ನಾಗರಾಜ ಹೊಂಬಳಗಟ್ಟಿ, ಮಹ್ಮದ ರಫೀಕ್ ಮುಲ್ಲಾ, ಶಿವಪ್ಪ ಚಿಕ್ಕಣ್ಣವರ, ಪವನ್ ಮೇಟಿ, ಯಾತ್ರಾ ಕಮಿಟಿ ಅಧ್ಯಕ್ಷ ವಿ.ಜೆ. ಹಿರೇಮಠ, ಮಂಜುನಾಥ ಶಿವಶೆಟ್ಟರ, ಅನುಪಕುಮಾರ ಹಂಚಿನಾಳ, ಕೈಲಾಸ ಹಿರೇಮಠ, ವೀರೇಶ ಸಜ್ಜನ, ಆಕಾಶ ಹಂಚಿನಾಳ, ರವೀಂದ್ರಗೌಡ ಪಾಟೀಲ, ಮಂಜುನಾಥ ಕಾಲವಾಡ, ರಾಘವೇಂದ್ರ ಪಟಗೆ, ಪ್ರಶಾಂತಗೌಡ ಗುಡದಪ್ಪನವರ, ದೇವು ಹಡಪದ, ನಾಗರಾಜ ಗುಡಿಮನಿ, ವಿಶ್ವನಾಥ ಗಡ್ಡದ, ಗುಡದಪ್ಪ ಲಿಂಬಿಕಾಯಿ, ಆನಂದ ನಾಡಗೌಡ್ರ, ಮುತ್ತು ಅಳವಂಡಿ, ವೆಂಕಟೇಶ ದೇಸಾಯಿ, ಸೋಮುಹಕ್ಕಂಡಿ ಉಪಸ್ಥಿತರಿದ್ದರು.