ಸಾರಾಂಶ
ಚನ್ನಪಟ್ಟಣ: ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ತಮ್ಮ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. 
ಚನ್ನಪಟ್ಟಣ: ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ತಮ್ಮ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ನಗರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಪಿ.ಪ್ರಶಾಂತ್ ನಗರಸಭೆಯಲ್ಲಿನ ಕಾರ್ಯವೈಖರಿಯಿಂದ ಬೇಸತ್ತು, ತಮ್ಮ ಅಧ್ಯಕ್ಷ ಸ್ಥಾನದ ಜತೆಗೆ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದು, ಬುಧವಾರ ಜಿಲ್ಲಾಧಿಕಾರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.ಪತ್ರಿಕೆಯೊಂದಿಗೆ ಈ ವಿಚಾರ ಹಂಚಿಕೊಂಡಿರುವ ಪ್ರಶಾಂತ್, ನಗರಸಭೆಯ ಅಧ್ಯಕ್ಷನಾಗಿದ್ದರೂ ಸಹ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಅಸಹಾಯಕನಾಗಿದ್ದೇನೆ. ಜನರ ಹಕ್ಕು ಮತ್ತು ನ್ಯಾಯವನ್ನು ರಕ್ಷಿಸುವಲ್ಲಿ ವಿಫಲನಾಗಿದ್ದೇನೆ. ನಗರಸಭೆ ಅಧ್ಯಕ್ಷನಾದ ನನ್ನ ಮಾತಿಗೆ ಇಲ್ಲಿ ಬೆಲೆ ಸಿಗುತ್ತಿಲ್ಲ ಎಂದ ಮೇಲೆ ಇನ್ಯಾಕೆ ಈ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮತ್ತು 26ನೇ ವಾರ್ಡ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಚನ್ನಪಟ್ಟಣ ನಗರಸಭೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಈ ಕುರಿತು ಹಲವಾರು ಬಾರಿ ಜಿಲ್ಲಾಧಿಕಾರಿಗೆ ಕಚೇರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಜನೋಪಯೋಗಿ ಕೆಲಸ ಮಾಡಲು ಆಗದ ಮೇಲೆ ಅಧಿಕಾರ ಇದ್ದರೆ ಏನು ಇಲ್ಲದಿದ್ದರೆ ಏನು ಎಂದು ನೋವಿನಲ್ಲೇ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ.ಬಣ ರಾಜಕಾರಣವೂ ಕಾರಣ?:
ಇನ್ನು ಪ್ರಶಾಂತ್ ರಾಜೀನಾಮೆ ನಿರ್ಧಾರಕ್ಕೆ ಪಕ್ಷದಲ್ಲಿನ ಒಳಜಗಳ, ಬಣ ರಾಜಕೀಯವೂ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. 2021ರಲ್ಲಿ ನಡೆದಿದ್ದ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ 26ನೇ ವಾರ್ಡ್‌ನಿಂದ ಗೆದ್ದುಬಂದಿದ್ದ ಪಿ.ಪ್ರಶಾಂತ್, ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚನ್ನಪಟ್ಟಣ ನಗರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನು ಇವರ ರಾಜೀನಾಮೆ ನಿರ್ಧಾರಕ್ಕೆ ಪಕ್ಷದಲ್ಲಿ ಸಹಕಾರ ಸಿಗದಿರುವುದು ಸಹ ಕಾರಣ ಎಂಬ ಮಾತುಗಳು ಹರಿದಾಡುತ್ತಿವೆ.ಕೋಟ್...ನಗರಸಭೆ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಹಿತೈಷಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಂಡಿದ್ದೇನೆ. ಬುಧವಾರ ರಾಜೀನಾಮೆ ಸಲ್ಲಿಸಲಿದ್ದೇನೆ.
-ಪಿ.ಪ್ರಶಾಂತ್, ನಗರಸಭೆ ಅಧ್ಯಕ್ಷ, ಚನ್ನಪಟ್ಟಣ(ಮಗ್‌ಶಾಟ್ ಫೋಟೊ ಮಾತ್ರ ಬಳಸಿ)ಪಿ.ಪ್ರಶಾಂತ್
;Resize=(128,128))
;Resize=(128,128))
;Resize=(128,128))