ಸಾರಾಂಶ
ತಮ್ಮ ಆರೊಗ್ಯವನ್ನು ಲೆಕ್ಕಿಸದೆ ಸಮಾಜದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಗಿದೆ. ಪೌರಕಾರ್ಮಿಕರ ಸಾಂಸ್ಕೃತಿಕ ಕಾರ್ಯಕ್ರಮ, ಪೌರಕಾರ್ಮಿಕರಿಂದಲೇ ಪ್ರದರ್ಶನ ಗೊಂಡ ನಗೆ ನಾಟಕ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಸಮಾಜದ ಸ್ವಾಸ್ಥ್ಯ ಕಾಪಾಡಲು ಪೌರಕಾರ್ಮಿಕರು ಅತ್ಯವಶ್ಯಕ. ವೈದ್ಯರಿಗಿಂತ ಮೊದಲು ಜನರ ಆರೋಗ್ಯ ಕಾಪಾಡುವವರು ಪೌರಕಾರ್ಮಿಕರು ಎಂದು ಎಂದು ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.ನಗರದ ನಗರಸಭಾ ಕಚೇರಿಯಲ್ಲಿ ಬುಧವಾರ ಪೌರಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದ ಅವರು, ವೈದ್ಯರು ರೋಗಬಂದ ಬಳಿಕ ಚಿಕಿತ್ಸೆ ನೀಡಿದರೆ ಪೌರಕಾರ್ಮಿಕರು ಸ್ವಚ್ಛತೆಯ ಮೂಲಕ ಅನಾರೋಗ್ಯ ಬರದಂತೆ ನೋಡಿಕೊಳ್ಳುತ್ತಾರೆ. ಪೌರಕಾರ್ಮಿಕರು ಇಲ್ಲದ ಪಟ್ಟಣವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ನಾವೆಲ್ಲರೂ ಪೌರಕಾರ್ಮಿಕರನ್ನು ಗೌರವಿಸ ಬೇಕು ಎಂದರು.
ಜಿಲ್ಲೆಯಲ್ಲಿ ರಾಮನಗರ ಅತಿದೊಡ್ಡ ನಗರವಾಗಿದೆ. ಇಲ್ಲಿ ಕೈಗಾರಿಕೆ ಇದೆ. ಹೀಗಾಗಿ ತ್ಯಾಜ್ಯ ಉತ್ಪಾದನೆ ಹೆಚ್ಚಾಗಿದೆ. ಆದರೆ, ಪೌರಕಾರ್ಮಿಕರು ಅಗತ್ಯಕ್ಕಿಂತ ಅರ್ಧ ದಷ್ಟು ಕಡಿಮೆ ಇದ್ದಾರೆ. ಆದರೂ ಸ್ವಚ್ಛತಾ ಕಾರ್ಯ ಹಿಂದೆ ಉಳಿಯದಂತೆ ನೋಡಿಕೊಂಡಿದ್ದಾರೆ. ಜೊತೆಗೆ ಪೌರ ಕಾರ್ಮಿಕರ ಕೊರತೆ ನೀಗಿಸುವ ಸಂಬಂಧ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.ತಮ್ಮ ಆರೊಗ್ಯವನ್ನು ಲೆಕ್ಕಿಸದೆ ಸಮಾಜದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಗಿದೆ. ಪೌರಕಾರ್ಮಿಕರ ಸಾಂಸ್ಕೃತಿಕ ಕಾರ್ಯಕ್ರಮ, ಪೌರಕಾರ್ಮಿಕರಿಂದಲೇ ಪ್ರದರ್ಶನ ಗೊಂಡ ನಗೆ ನಾಟಕ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು.
ನಗರದ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವ ಪೌರಕಾರ್ಮಿಕರ ಜೊತೆಗೆ ನಾವು ನಿಲ್ಲಬೇಕಾಗಿದೆ. ಇದಕ್ಕಾಗಿ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಬೆಳ್ಳಿದೀಪ, ಬಮೂಲ್ ವತಿಯಿಂದ ಸಿಹಿ ತಿಂಡಿಗಳ ಗಿಫ್ಟ್ ಬಾಕ್ಸ್ ವಿತರಣೆ ಮಾಡಲಾಗುತ್ತಿದೆ. 20 ಮಂದಿ ಪೌರಕಾರ್ಮಿಕರನ್ನು ಸನ್ಮಾನಿಸಲಾಗಿದೆ ಎಂದು ಶೇಷಾದ್ರಿ ತಿಳಿಸಿದರು.ಪೌರಾಯುಕ್ತ ಜಯಣ್ಣ ಮಾತಾನಾಡಿ, ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ಹೆಚ್ಚಿನ ಸಹಕಾರ ನೀಡಲಾಗುತ್ತಿದೆ. ಪೌರಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡಲಾಗುತ್ತಿದೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ ನೆರವು, ಪೌರಕಾರ್ಮಿಕರಿಗೆ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ ಎಂದರು.
ನಗರಸಭಾ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಪಾರ್ವತಮ್ಮ, ಸೋಮಶೇಖರ್(ಮಣಿ), ಸಮದ್, ಅಕ್ಲೀಂ, ನಾಗಮ್ಮ, ಗೋವಿಂದರಾಜು, ದಲಿತ ಮುಖಂಡ ಶಿವಕುಮಾರ್ ಸ್ವಾಮಿ,ಪೌರಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜು, ಜಿಲ್ಲಾಧ್ಯಕ್ಷ ವೆಂಕಟೇಶ್ ಹಾಜರಿದ್ದರು.;Resize=(128,128))
;Resize=(128,128))