ಶೌಚಾಲಯದ ನಿರ್ವಹಣೆಯನ್ನೇ ಕೈಬಿಟ್ಟ ಪುರಸಭೆ

| Published : Mar 05 2025, 12:31 AM IST

ಶೌಚಾಲಯದ ನಿರ್ವಹಣೆಯನ್ನೇ ಕೈಬಿಟ್ಟ ಪುರಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ನಿತ್ಯ ನೂರಾರು ಜನರು ಬಳಸುವ ಸಾರ್ವಜನಿಕರ ಶೌಚಗೃಹ ಕಾಲಿಡಲಾಗದಷ್ಟು ಗಬ್ಬೆದ್ದು ನಾರುತ್ತಿದೆ. ಒಂದು ವರ್ಷಗಳ ಕಾಲ ವಾರಕ್ಕೊಮ್ಮೆ ಸ್ವಚ್ಛತೆ ನಡೆಸುತ್ತಿದ್ದ ಪುರಸಭೆ ಆಡಳಿತ ಕಳೆದೊಂದು ವರ್ಷದಿಂದ ಸ್ವಚ್ಛತೆ ಮಾಡುವುದನ್ನು ಕೈಬಿಟ್ಟಿದೆ. ಪರಿಣಾಮ ಶೌಚಗೃಹದ ನೀರಿನ ಪೈಪ್ ಒಡೆದು ಅಡಿಗಳಷ್ಟು ನೀರು ಶೌಚಗೃಹದೊಳಗೆ ಸಂಗ್ರಹವಾಗಿರುವ ಕಾರಣ ಶೌಚಗೃಹಕ್ಕೆ ಕಾಲಿಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯದ ಆಧೋಗತಿಯ ಪರಿಣಾಮ ಉಪವಿಭಾಗಾಧಿಕಾರಿಗಳ ಕಚೇರಿ, ಪುರಸಭೆ, ತಾಲೂಕು ಪಂಚಾಯತ್, ತಾಲೂಕು ಕಚೇರಿ ಹಾಗೂ ಎಸ್.ಬಿ.ಐ ಬ್ಯಾಂಕ್‌ಗೆ ಬರುವ ಸಾರ್ವಜನಿಕರು ದೇಹಬಾಧೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ನಿತ್ಯ ನೂರಾರು ಜನರು ಬಳಸುವ ಸಾರ್ವಜನಿಕರ ಶೌಚಗೃಹ ಕಾಲಿಡಲಾಗದಷ್ಟು ಗಬ್ಬೆದ್ದು ನಾರುತ್ತಿದೆ.

ಕಳೆದ ಐದು ವರ್ಷಗಳ ಹಿಂದೆ ಹಲವು ಮನವಿಗಳ ನಂತರ ಪುರಸಭೆ ಕಚೇರಿ ಹಿಂಭಾಗ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಇರುವ ಸ್ಥಳದಲ್ಲಿ ಸುಮಾರು ೧೨ ಲಕ್ಷ ರು. ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಮಾಡಲಾಗಿತ್ತು. ಆದರೆ, ನಿರ್ವಹಣೆ ಮಾಡುವವರು ಯಾರು ಎಂಬ ಜಿಜ್ಞಾಸೆಯಿಂದ ನಿರ್ಮಾಣಗೊಂಡ ಮೂರು ವರ್ಷ ಉಪಯೋಗಕ್ಕೆ ಮುಕ್ತಗೊಂಡಿರಲಿಲ್ಲ. ಈ ಬಗ್ಗೆ ಹಲವು ಟೀಕೆಗಳು ವ್ಯಕ್ತವಾದ ನಂತರ ಕಳೆದ ಎರಡು ವರ್ಷಗಳ ಹಿಂದೆ ಪುರಸಭೆಯೇ ನಿರ್ವಹಣೆ ಹೊಣೆ ಹೊತ್ತು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಿದೆ. ಆದರೆ, ಒಂದು ವರ್ಷಗಳ ಕಾಲ ವಾರಕ್ಕೊಮ್ಮೆ ಸ್ವಚ್ಛತೆ ನಡೆಸುತ್ತಿದ್ದ ಪುರಸಭೆ ಆಡಳಿತ ಕಳೆದೊಂದು ವರ್ಷದಿಂದ ಸ್ವಚ್ಛತೆ ಮಾಡುವುದನ್ನು ಕೈಬಿಟ್ಟಿದೆ. ಪರಿಣಾಮ ಶೌಚಗೃಹದ ನೀರಿನ ಪೈಪ್ ಒಡೆದು ಅಡಿಗಳಷ್ಟು ನೀರು ಶೌಚಗೃಹದೊಳಗೆ ಸಂಗ್ರಹವಾಗಿರುವ ಕಾರಣ ಶೌಚಗೃಹಕ್ಕೆ ಕಾಲಿಡದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಹಾಗೂ ವ್ಯವಸ್ಥಾಪಕರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಶೌಚಾಲಯದ ಆಧೋಗತಿಯ ಪರಿಣಾಮ ಉಪವಿಭಾಗಾಧಿಕಾರಿಗಳ ಕಚೇರಿ, ಪುರಸಭೆ, ತಾಲೂಕು ಪಂಚಾಯತ್, ತಾಲೂಕು ಕಚೇರಿ ಹಾಗೂ ಎಸ್.ಬಿ.ಐ ಬ್ಯಾಂಕ್‌ಗೆ ಬರುವ ಸಾರ್ವಜನಿಕರು ದೇಹಬಾಧೆ ತೀರಿಸಿಕೊಳ್ಳಲು ಪರದಾಡುವಂತಾಗಿದ್ದು, ಈ ಎಲ್ಲ ಕಚೇರಿಗಳಿಗೆ ಹೋಗುವ ರಸ್ತೆಗಳು ಸಹ ಗಬ್ಬೆದ್ದು ನಾರುತ್ತಿವೆ.