ಅಗಸ್ತ್ಯ ತೀರ್ಥ ಹೊಂಡಕ್ಕೆ ತಂತಿಬೇಲಿ ಅಳವಡಿಸುತ್ತಿರುವ ಪುರಸಭೆ

| Published : Dec 17 2023, 01:45 AM IST

ಅಗಸ್ತ್ಯ ತೀರ್ಥ ಹೊಂಡಕ್ಕೆ ತಂತಿಬೇಲಿ ಅಳವಡಿಸುತ್ತಿರುವ ಪುರಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಅಗಸ್ತ್ಯ ತೀರ್ಥದಲ್ಲಿರುವ ಅಕ್ಕ-ತಂಗಿಯರ ಹೊಂಡಗಳು ತೆರೆದ ಬಾವಿಗಳಂತಾಗಿದ್ದವು. ಗೊತ್ತಿಲ್ಲದವರು ಕೈಕಾಲು ಮುಖ ತೊಳೆದುಕೊಳ್ಳಲು ಹೋದರೆ ಕಾಲು ಜಾರಿ ಬಿದ್ದು ಪ್ರಾಣಕ್ಕೆ ಸಂಚಕಾರ ತಂದು ಕೊಳ್ಳುತ್ತಿರುವ ಹಲವಾರು ಘಟನೆಗಳು ನಡೆದಿವೆ. ಪುರಸಭೆಯ ಆಡಳಿತ ಮಂಡಳಿಯು ಗಟ್ಟಿ ನಿರ್ಧಾರ ಮಾಡಿ ಸುಮಾರು 4.35 ಲಕ್ಷ ವೆಚ್ಚದಲ್ಲಿ ತಂತಿ ಬೇಲಿ ಅಳವಡಿಸಿ ಜಾಲರಿ ಹಾಕುವ ಮೂಲಕ ಜನರ ಹಾಗೂ ಪ್ರಾಣಿಗಳ ಪ್ರಾಣ ರಕ್ಷಣೆ ಮಾಡುವ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸೋಮಣ್ಣ ಉಪನಾಳ ಅಭಿನಂದಿಸಿದ್ದಾರೆ.

ಜನರು, ಪ್ರಾಣಿಗಳ ರಕ್ಷಣೆಗೆ ರು. 4.35 ಲಕ್ಷ ವೆಚ್ಚದಲ್ಲಿ ತಂತಿಬೇಲಿ ಅಳವಡಿಕೆ

ಲಕ್ಷ್ಮೇಶ್ವರ: ಪಟ್ಟಣದ ಪೂರ್ವ ದಿಕ್ಕಿನಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಅಗಸ್ತ್ಯ ತೀರ್ಥ ಹೊಂಡದ ಸುತ್ತಲೂ ಕಂಬಗಳನ್ನು ಅಳವಡಿಸಿ ತಂತಿಯ ಜಾಲರಿ ಅಳವಡಿಸುತ್ತಿರುವ ಕಾರ್ಯ ಆರಂಭಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸೋಮಣ್ಣ ಉಪನಾಳ ಅಭಿನಂದಿಸಿದ್ದಾರೆ. ಈ ಕುರಿತು ಶನಿವಾರ ಮಾತನಾಡಿದ ಅವರು, ಅಗಸ್ತ್ಯ ತೀರ್ಥದಲ್ಲಿರುವ ಅಕ್ಕ-ತಂಗಿಯರ ಹೊಂಡಗಳು ತೆರೆದ ಬಾವಿಗಳಂತಾಗಿದ್ದವು. ಯಾರಾದರೂ ಗೊತ್ತಿಲ್ಲದವರು ಆ ಹೊಂಡಗಳನ್ನು ನೋಡಿ ಕೈಕಾಲು ಮುಖ ತೊಳೆದುಕೊಳ್ಳಲು ಹೋದರೆ ಕಾಲು ಜಾರಿ ಬಿದ್ದು ಪ್ರಾಣಕ್ಕೆ ಸಂಚಕಾರ ತಂದು ಕೊಳ್ಳುತ್ತಿರುವ ಹಲವಾರು ಘಟನೆಗಳು ಈ ಹಿಂದೆ ನಡೆದು ಹೋಗಿವೆ. ಈ ಹಿಂದೆ ಪುರಸಭೆಗೆ ನಮ್ಮ ಸಂಘಟನೆಯ ಪರವಾಗಿ ಹಲವಾರು ಬಾರಿ ಹೊಂಡದ ಸುತ್ತಲೂ ತಂತಿ ಬೇಲಿ ಅಳವಡಿಸುವಂತೆ ಮನವಿ ಸಲ್ಲಿಸಿದ್ದವು. ಆದರೆ ಈಗ ಪುರಸಭೆಯ ಆಡಳಿತ ಮಂಡಳಿಯು ಗಟ್ಟಿ ನಿರ್ಧಾರ ಮಾಡಿ ಸುಮಾರು 4.35 ಲಕ್ಷ ವೆಚ್ಚದಲ್ಲಿ ತಂತಿ ಬೇಲಿ ಅಳವಡಿಸಿ ಜಾಲರಿ ಹಾಕುವ ಮೂಲಕ ಜನರ ಹಾಗೂ ಪ್ರಾಣಿಗಳ ಪ್ರಾಣ ರಕ್ಷಣೆ ಮಾಡುವ ಕಾರ್ಯ ಸ್ತುತ್ಯಾರ್ಹವಾಗಿದೆ ಹಾಗೂ ಲಕ್ಷ್ಮೇಶ್ವರದಲ್ಲಿರುವ 5 ಪ್ರಾಚೀನ ಐತಿಹಾಸಿಕ ಹೊಂಡಗಳ ರಕ್ಷಣೆಗೆ ಪುರಸಭೆ ಆಡಳಿತ ಮಂಡಳಿ ಕ್ರಮ ಜರುಗಿಸಬೇಕು. ಇದರಿಂದ ನಮ್ಮ ಪ್ರಾಚೀನ ಪರಂಪರೆಗಳ ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಅದನ್ನು ಉಳಿಸಿ ತೋರಿಸುವ ಕಾರ್ಯವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ,