ಸಾರಾಂಶ
ಕನ್ನಡಪ್ರಭ ವಾರ್ತೆ ಭೇರ್ಯಜನರ ಜೊತೆ ಸೌಜನ್ಯದಿಂದ ವರ್ತಿಸುತ್ತಿಲ್ಲ, ಈ ರೀತಿಯ ಮತ್ತೊಮ್ಮೆ ದೂರು ಕೇಳಿ ಬಂದರೆ ಅಂತಹ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಆರ್. ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನ ಅಧಿಕಾರಿ ವರ್ಗದವರಿಗೆ ಶಾಸಕ ಡಿ. ರವಿಶಂಕರ್ ಎಚ್ಚರಿಸಿದರು.ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಗ್ರಾಪಂ ಅರಕೆರೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಉದ್ದೇಶದ ಜೊತೆಗೆ ಜನರ ಸಮಸ್ಯೆಗಳನ್ನು ಆಲಿಸಲು ಈ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ. ಪ್ರತಿ ಮಂಗಳವಾರ ಕಾರ್ಯಕ್ರಮ ನಿಗದಿಯಾಗಿರುತ್ತದೆ, ಅದು ಬಿಟ್ಟು ಬೇರೆ ದಿನ ಕಾರ್ಯಕ್ರಮ ನಿಗದಿ ಮಾಡಿ ಕೊಳ್ಳಿ, ಈ ಸಂಬಂಧಿಸಿದಂತೆ ಜಿಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರಲ್ಲದೆ, ಮಾವು ಹಳ್ಳಿಗಳಿಗೆ ಹೋಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಆ ಗ್ರಾಮಗಳಿಗೆ ಎಲ್ಲ ಅಧಿಕಾರಿಗಳು ಬರಬೇಕು, ಸ್ಥಳದಲ್ಲಿಯೇ ಅರ್ಜಿಯನ್ನು ಪಡೆದು ಹಿಂಬರಹ ಕೊಡಲು ಗುಮಾಸ್ತರು ಇರಬೇಕು. ಸಾಲಿಗ್ರಾಮ ತಾಪಂ ಇಓ ರವಿ, ಕೆಪಿಸಿಸಿ ಸದಸ್ಯರಾದ ದೊಡ್ಡಸ್ವಾಮೇಗೌಡ ಸಾಲಿಗ್ರಾಮ ತಹಸೀಲ್ದಾರ್ ನರಗುಂದ್, ಗ್ಯಾರಂಟಿ ಯೋಜನಾ ಅನುಷ್ಠಾನದ ಸಮಿತಿ ಅಧ್ಯಕ್ಷ ಉದಯ್ ಮಾತನಾಡಿದರು.ಕೆಪಿಸಿಸಿ ಸದಸ್ಯ ಸಿ.ಪಿ. ರಮೇಶ್ ಕುಮಾರ್, ಭೇರ್ಯ ಗ್ರಾಪಂ ಅಧ್ಯಕ್ಷ ಬಿ.ಕೆ. ಮಂಜಪ್ಪ, ಮುಂಜನಹಳ್ಳಿ ಗ್ರಾಪಂ ಸದಸ್ಯರಾದ ಮಹದೇವನಾಯಕ, ಯತಿರಾಜ್, ಮಾಜಿ ಅಧ್ಯಕ್ಷ ಚಂದ್ರೇಗೌಡ, ಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜ್, ಅಬಕಾರಿ ನಿರೀಕ್ಷಕ ಲೋಕೇಶ್, ಲೋಕೋಪಯೋಗಿ ಇಲಾಖೆ ಎಇಇ ಸುಮಿತ, ಸಿಡಿಪಿಓ ಅಣ್ಣಯ್ಯ, ಅಧಿಕಾರಿಗಳು ಇದ್ದರು.