ರೇವಣ್ಣ ಆಪ್ತನ ಹತ್ಯೆಗೆ ದುಷ್ಕರ್ಮಿಗಳ ಯತ್ನ

| Published : Oct 11 2023, 12:46 AM IST

ರೇವಣ್ಣ ಆಪ್ತನ ಹತ್ಯೆಗೆ ದುಷ್ಕರ್ಮಿಗಳ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಎಚ್‌ ಡಿ ರೇವಣ್ಣ ಆಪ್ತ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವಥ ನಾರಾಯಣ ಗೌಡ ಮೇಲೆ ಹೊಳೆನರಸೀಪುರದ ಸೂರನಹಳ್ಳಿ ಗ್ರಾಮದ ಬಳಿ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಅಶ್ವಥ ನಾರಾಯಣ ಪಾರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಕೂದಲೆಳೆ ಅಂತರದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರ ಬಚಾವ್ ಪ್ರಥಮ ದರ್ಜೆ ಗುತ್ತಿಗೆದಾರನ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಸೂರನಹಳ್ಳಿ ಗ್ರಾಮದ ಹಂಪ್ಸ್ ಬಳಿ ಇಂದು ರಾತ್ರಿ ನಡೆದಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರಾಗಿರುವ ಅಶ್ವಥ್ ನಾರಾಯಣಗೌಡ ಎಂಬುವವರು ದುಷ್ಕರ್ಮಿಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸಂಜೆ ಹಾಸನದಿಂದ ಎಚ್.ಡಿ.ರೇವಣ್ಣ ಅವರ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದರು. ಕೆಲಕಾಲ ರೇವಣ್ಣ ಅವರ ನಿವಾಸದಲ್ಲಿ ಚರ್ಚಿಸಿ ರಾತ್ರಿ 8.30 ರ ಸುಮಾರಿನಲ್ಲಿ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ KA-53-MF-5555 ನಂಬರಿನ ಫಾರ್ಚೂನರ್ ಕಾರಿನಲ್ಲಿ ಹೊರಟಿದ್ದರು. ಅಶ್ವಥ್ ಮನೆಗೆ ಹೊರಟಿರುವ ಬಗ್ಗೆ ಮಾಹಿತಿ ಪಡೆದು ಸೂರನಹಳ್ಳಿ ಹಂಪ್ಸ್ ಬಳಿ ಕಾರಿನ ಮೇಲೆ ದುಷ್ಕರ್ಮಿಗಳು ದಿಢೀರ್ ಅಟ್ಯಾಕ್ ಮಾಡಿದ್ದಾರೆ. ಮೊದಲು ಕಲ್ಲನ್ನು ಕಾರಿನ ಗ್ಲಾಸ್ ಮೇಲೆ ಎತ್ತಿಹಾಕಿ ನಂತರ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾಗಿದ್ದಾರೆ. ತಂಡದಲ್ಲಿ ಐದಾರು ಮಂದಿ ಅಪರಿಚಿತರು ಇದ್ದರು ಎನ್ನಲಾಗಿದೆ. ಕೂಡಲೇ ಕಾರನ್ನು ರಿವರ್ಸ್ ತೆಗೆದು 150 ಕಿಲೋಮೀಟರ್ ವೇಗದಲ್ಲಿ ಮುಂದೆ ಚಲಿಸಿ ಅಶ್ವಥ್ ಎಸ್ಕೇಪ್ ಆಗಿದ್ದಾರೆ. ಮೂಡಲಹಿಪ್ಪೆ ಗ್ರಾಮದವರೆಗೂ ಅಶ್ವಥ್ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ನಂತರ ಪರಾರಿಯಾಗಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಅಶ್ವಥ್ ದೂರು ನೀಡಲು ಹೊರಟಿದ್ದು, ರೇವಣ್ಣ ಅವರೂ ಅಲ್ಲಿಗೆ ದೌಡಾಯಿಸಿದ್ದಾರೆ. ಚನ್ನರಾಯಪಟ್ಟಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜಿತಾ ಭೇಟಿ ನೀಡಿದ್ದು, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವಥ್‌ಗೌಡ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.