ಆಸ್ತಿಗಾಗಿ ಒಡಹುಟ್ಟಿದ ತಮ್ಮನ ಪತ್ನಿಯ ಕೊಲೆ

| Published : Jul 18 2024, 01:34 AM IST

ಸಾರಾಂಶ

murder own brother wife: police arrest culprint, another person obscond

-ಹಾಲಿಗೊಂಡನಹಳ್ಳಿ ಹಾಡುಹಗಲೆ ಕೊಲೆಗೈದ ಚಂದ್ರಪ್ಪ ಮತ್ತು ಪುತ್ರ ಗಂಗಾಧರ । ಬೆಚ್ಚಿದ ಗ್ರಾಮಸ್ಥರು

-----

ಕನ್ನಡಪ್ರಭವಾರ್ತೆ ಚಳ್ಳಕೆರೆ

ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಿಗೊಂಡನಹಳ್ಳಿ ಗ್ರಾಮದಲ್ಲಿ ಹಾಡುಹಗಲೇ ಆಸ್ತಿಗಾಗಿ ತನ್ನ ತಮ್ಮನ ಪತ್ನಿಯನ್ನೇ ಭೀಕರವಾಗಿ ಕಗ್ಗೊಲೆ ಮಾಡಿದ ಪ್ರಕರಣ ಬುಧವಾರ ಬೆಳಗ್ಗೆ ೮ ಗಂಟೆಗೆ ನಡೆದಿದೆ.

ಗ್ರಾಮದಲ್ಲಿ ಹೊರವಲಯದ ರೇಣುಕಾಗಿರಿ (ಕರೇಕಲ್‌ ಬಂಡೆ) ಬಳಿ ಕುಟುಂಬಗಳು ವಾಸವಿದ್ದು, ಸೂರನಹಳ್ಳಿಯಲ್ಲಿದ್ದ ಜಮೀನನ್ನು ತಮ್ಮನ ಹೆಂಡತಿಗೆ ನೀಡಲು ಒಪ್ಪದ ಚಂದ್ರಪ್ಪ (೬೦) ಹಾಗೂ ಆತನ ಪುತ್ರ ಗಂಗಾಧರ (೩೦) ಇಬ್ಬರೂ ಸೇರಿ ಕೊಲೆಗೈದಿದ್ದು, ಚಂದ್ರಪ್ಪನ ಸಹೋದರ ಗೋವಿಂದಪ್ಪ ಪತ್ನಿ ಈರಕ್ಕ(೪೫) ಕೊಲೆಯಾದ ದುದೈರ್ವಿ.

ಚಂದ್ರಪ್ಪ, ತನ್ನ ತಮ್ಮ ಗೋವಿಂದಪ್ಪನ ಪತ್ನಿ ಈರಕ್ಕನಿಗೆ ಜಮೀನು ಬಿಟ್ಟುಕೊಡಲು ಸತಾಯಿಸುತ್ತಿದ್ದ ಬಗ್ಗೆ ಈರಕ್ಕ, ತನ್ನ ಬಾವ ಚಂದ್ರಪ್ಪನ ಮೇಲೆ ನ್ಯಾಯಾಲಯಕ್ಕೆ ಕೇಸು ದಾಖಲಿಸಿದ್ದಳು. ಚಂದ್ರಪ್ಪ ಮತ್ತು ಮಗ ಗಂಗಾಧರ ಪದೇ ಪದೇ ಈರಕ್ಕನ ಮೇಲೆ ಜಗಳವಾಡುತ್ತಿದ್ದು, ಇವರ ಭಯದಿಂದ ಈರಕ್ಕ ಸರಿಯಾಗಿ ಗ್ರಾಮದಲ್ಲಿ ಇರದೆ ಹೊರಗಡೆಯೇ ಹೆಚ್ಚು ಓಡಾಡುತ್ತಿದ್ದು, ಮಂಗಳವಾರ ಸಂಜೆ ತನ್ನ ಮನೆಗೆ ಬಂದಿದ್ದಾಳೆ.

ವಿಷಯ ತಿಳಿದ ಚಂದ್ರಪ್ಪ ಮತ್ತು ಗಂಗಾಧರ ಈರಕ್ಕನ ಮೇಲೆ ಖಾರದಪುಡಿ ಎರಚಿ ನಿನ್ನ ಬಾಬ್ತು ಜಮೀನನ್ನು ಮಾರಿ ಅದರಿಂದ ನ್ಯಾಯಾಲಯದಲ್ಲಿ ಕೇಸು ಗೆಲ್ಲುತ್ತೇನೆ. ನಿನಗೆ ಜಮೀನು ನೀಡಲ್ಲ ಎಂದು ಅಬ್ಬರಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಆಕೆಯ ತಲೆ ಮತ್ತು ಕುತ್ತಿಗೆಗೆ ಗಂಗಾಧರ ಬಲವಾಗಿ ಹೊಡೆದು ಕೊಲೆ ಮಾಡಿದ್ಧಾನೆ.

ಈ ಸಂದರ್ಭದಲ್ಲಿ ಚಂದ್ರಪ್ಪ, ಈರಕ್ಕ ಎಲ್ಲೂ ತಪ್ಪಿಸಿಕೊಳ್ಳದಂತೆ ಬಿಗಿಯಾಗಿ ಹಿಡಿದುಕೊಂಡಿದ್ದ. ಇದೇ ಸಂದರ್ಭದಲ್ಲಿ ಈರಕ್ಕನ ತಾಯಿ ಪುಟ್ಟಮ್ಮ, ಸಹೋದರಿ ಮಮತ ಬಿಡಿಸಿಕೊಳ್ಳಲು ಬಂದಾಗ ಅವರಿಗೂ ಸಹ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಕೊಲೆಯ ನಂತರ ಕೈಯಲ್ಲಿ ಮಚ್ಚು ಹಿಡಿದು ಓಡಲು ಯತ್ನಿಸಿದ ಚಂದ್ರಪ್ಪನನ್ನು ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದು, ಗಂಗಾಧರ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಮೃತ ಈರಕ್ಕನ ಶವವನ್ನು ಪರಶುರಾಮಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಗಾಯಾಳು, ಪುಟ್ಟಮ್ಮ ಮತ್ತು ಮಮತಾರನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಮತಾಳ ಎಡಗೈ ಮಚ್ಚಿನೇಟಿಗೆ ಬಲವಾದ ಗಾಯವಾಗಿದೆ. ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟಮ್ಮನ ತಲೆಗೂ ಸಹ ಪೆಟ್ಟುಬಿದಿದ್ದೆ.

ಜಿಲ್ಲಾ ರಕ್ಷಣಾಧಿಕಾರಿ ಭೇಟಿ: ಸುದ್ದಿ ತಿಳಿದ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು, ಪುಟ್ಟಮ್ಮಳ ಸಹೋದರ ಚಂದ್ರಪ್ಪನಾಗಿದ್ದು, ಚಂದ್ರಪ್ಪನ ತಮ್ಮ ಗೋವಿಂದಪ್ಪನಿಗೆ ಪುಟ್ಟಮ್ಮಳ ಹಿರಿಯ ಮಗಳು ಈರಕ್ಕನನ್ನು ಮದುವೆ ಮಾಡಿಕೊಟ್ಟಿದ್ದರು. ಈರಕ್ಕನ ಗಂಡ ಗೋವಿಂದಪ್ಪ ಮೃತಪಟ್ಟಿದ್ದ. ಈರಕ್ಕನ ಸಹೋದರಿ ಮಮತಾ, ಶಾಂತವೀರಮ್ಮ, ತಾಯಿ ಪುಟ್ಟಮ್ಮ ಒಂದೇಕಡೆ ವಾಸವಿದ್ದರು. ವಿಪರ್ಯಾಸವೆಂದರೆ ಈರಕ್ಕಳ ಸಹೋದರಿ ಮಮತಾ, ಶಾಂತವೀರಮ್ಮ ಇವರ ಗಂಡದೀರೂ ಸಹ ಮೃತಪಟ್ಟಿದ್ದು, ಈರಕ್ಕಳಿಗೆ ಮಾತ್ರ ಎಂಟು ಎಕರೆ ಜಮೀನು ನೀಡಬೇಕಿದ್ದು, ಇದಕ್ಕೆ ಚಂದ್ರಪ್ಪ ಮತ್ತು ಆತನ ಮಗ ಗಂಗಾಧರ ವಿರೋಧ ವ್ಯಕ್ತಪಡಿಸಿ, ಈರಕ್ಕಳನ್ನು ಕೊಲೆ ಮಾಡಿದರೆ ಜಮೀನು ನಮಗೆ ಸೇರುತ್ತದೆ ಎಂಬ ದುರುದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆಂದು ಮಾಹಿತಿ ನೀಡಿದ್ಧಾರೆ.

ಪ್ರಭಾರ ಇನ್ಸ್ಪೆಕ್ಟರ್ ರಾಜಫಕೃದ್ದೀನ್ ದೇಸಾಯಿ, ಪಿಎಸ್‌ಐ ಎಂ.ಕೆ.ಬಸವರಾಜು ಹಾಗೂ ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿದ್ದರು. ಕೊಲೆ ಆರೋಪಿ ಚಂದ್ರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.------

ಪೋಟೋ:೧೭ಸಿಎಲ್‌ಕೆ೧ಎ

ಚಳ್ಳಕೆರೆ ತಾಲೂಕಿನ ಹಾಲಿಗೊಂಡನಹಳ್ಳಿಯಲ್ಲಿ ನಡೆದ ಕೊಲೆ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.

-----

ಪೋಟೋ: ೧೭ಸಿಎಲ್‌ಕೆ೧ಬಿ

ಚಳ್ಳಕೆರೆ ತಾಲ್ಲೂಕಿನ ಹಾಲಿಗೊಂಡನಹಳ್ಳಿಯಲ್ಲಿ ಕೊಲೆಯಾದ ಈರಕ್ಕ ಭಾವಚಿತ್ರ.

-----

ಪೋಟೋ: ೧೭ಸಿಎಲ್‌ಕೆ೧ಸಿ

ಕೊಲೆ ಆರೋಪಿ ಚಂದ್ರಪ್ಪನನ್ನು ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿರುವುದು.

-----

ಪೋಟೋ: ೧೭ಸಿಎಲ್‌ಕೆ೧ಡಿ

ಕೊಲೆ ಅರೋಪಿ ಗಂಗಾಧರ ಭಾವಚಿತ್ರ.

-----

ಪೋಟೋ:೧೭ಸಿಎಲ್‌ಕೆ೧ಇ

ಚಳ್ಳಕೆರೆ ತಾಲೂಕಿನ ಹಾಲಿಗೊಂಡನಹಳ್ಳಿಯಲ್ಲಿ ನಡೆದ ಕೊಲೆ ಬಿಡಿಸಲು ಬಂದ ಈರಕ್ಕನ ಸಹೋದರಿ ಮಮತಾ, ತಾಯಿ ಪುಟ್ಟಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.