ಮೂರು ಮುಖದವ್ವದೇವಿ ಜಾತ್ರೆ ಸಂಭ್ರಮ

| Published : May 18 2024, 12:32 AM IST

ಸಾರಾಂಶ

ಮೂರು ವರುಷಗಳಿಗೊಮ್ಮೆ ನಡೆಯುವ ಗ್ರಾಮದ ಆರಾಧ್ಯ ದೇವಿ ಶ್ರೀ ಮೂರು ಮೂಖದವ್ವದೇವಿ (ಲಕ್ಷ್ಮೀದೇವಿ) ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಮೂರು ವರುಷಗಳಿಗೊಮ್ಮೆ ನಡೆಯುವ ಗ್ರಾಮದ ಆರಾಧ್ಯ ದೇವತೆ ಶ್ರೀ ಮೂರು ಮೂಖದವ್ವದೇವಿ (ಲಕ್ಷ್ಮೀದೇವಿ) ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಅಲಂಕೃತ ದೊಡ್ಡ ಪಾದ ಪಾದುಕೆಗಳನ್ನು ಶ್ರೀ ಹನುಮಾನ ದೇವರಿಗೆ ಅರ್ಪಿಸುವ ಮೂಲಕ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ರಾತ್ರಿ ಡೊಳ್ಳು ಕುಣಿತ, ಬ್ಯಾಂಡ್‌, ಬಾಜಾ, ಹಲಿಗೆ ಮೇಳ ಹಾಗೂ ಬ್ಯಾಂಜೋ ತಂಡದೊಂದಿಗೆ ಕುದುರೆ ಸೋಗು, ಯಕ್ಷಗಾನ ಮಾದರಿ ಹಾಗೂ ವಿವಿಧ ವೇಷಧಾರಿಗಳಿಂದ ನೃತ್ಯ ಪ್ರದರ್ಶನ ವಿಶೇಷವಾಗಿತ್ತು. ರಾತ್ರಿ ಜಾತ್ರೆಯ ನಿಮಿತ್ತ ಶ್ರೀನಿಧಿ ಸ್ಪೋರ್ಟ್ಸ್‌ ಕ್ಲಬ್‌ನಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ 55 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾವಳಿ ನಡೆದವು. ಶ್ರೀದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಹಾಪ್ರಸಾದ ವಿತರಣೆ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾತ್ತು. ಮಹಾರಾಷ್ಟ್ರದ ಕೊಲ್ಲಾಪುರದ ಪ್ರಸಿದ್ಧ ಸೂರಜಕುಮಾರ್ ಪ್ರೋಡಕ್ಷನ್‌ ಅವರ ಸೈರಾಟ್ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಅಕಾಲಿಕ ಮಳೆಯಿಂದ ಸ್ವಲ್ಪಮಟ್ಟಿಗೆ ತೊಂದರೆಯಾದರೂ ಜಾತ್ರೆಯ ಸಂಭ್ರಮಕ್ಕೆನೂ ಕೊರತೆಯಾಗಲಿಲ್ಲ.