ದೇವಲಾಪುರ ಹೋಬಳಿ ಸಮೀಪದ ಮುಸಂದ್ರ ಗ್ರಾಮದಲ್ಲಿ ಕೆರೆ, ಗೋಮಾಳ, ಸ್ಮಶಾನ ಜಾಗವನ್ನು ಕಬಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಆಗಮಿಸಿ ಅಳತೆ ಮಾಡಿ ಅತಿಕ್ರಮಣದ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು.

ಕನ್ನಡಪ್ರಭ ವಾರ್ತೆ ದೇವಲಾಪುರ

ಹೋಬಳಿ ಸಮೀಪದ ಮುಸಂದ್ರ ಗ್ರಾಮದಲ್ಲಿ ಕೆರೆ, ಗೋಮಾಳ, ಸ್ಮಶಾನ ಜಾಗವನ್ನು ಕಬಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸರ್ಕಾರಿ ಜಾಗಗಳ ಮೂಲ ನಕ್ಷೆ ಬದಲು ಮಾಡಿಕೊಂಡು ಕೆರೆಗೆ ಸೇರಿದ ಸ್ಮಶಾನ ಹಾಗೂ ಗೋಮಾಳ ಜಾಗವನ್ನು ಇದೇ ಗ್ರಾಮದ ಕೆಲವರು ಅತಿ ಕ್ರಮಣ ಮಾಡಿದ್ದು, ಅಧಿಕಾರಿಗಳು ಕೂಡಲೇ ಅತಿಕ್ರಮಣ ತೆರವುಗೊಳಿಸುವಂತೆ ಗ್ರಾಮಸ್ಥರು, ರೈತರು ಆಗ್ರಹಿಸಿದ್ದಾರೆ.ನಾಗಮಂಗಲ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಕೆರೆ ಸುಮಾರು 12 ಎಕರೆ ವಿಸ್ತೀರ್ಣ ಹೊಂದಿದೆ. ಈಗ ಇದ ವಿಸ್ತೀರ್ಣ ಕೇವಲ 6 ಎಕರೆಗೆ ಇಳಿದಿದೆ. ಸರ್ವೇ ನಂಬರ್ 24/6.26/4, ಅದೇ ಗ್ರಾಮದ ಗೋಮಾಳ ಸರ್ವೇ ನಂಬರ್ 40/7 ನಾಲ್ಕುವರೆ ಎಕರೆ ಹಾಗೂ ಸ್ಮಶಾನ ಒಂದುವರೆ ಎಕರೆ, ಸರ್ವೇ ನಂಬರ್ 35 ಪಿ ಜಾಗಗಳು ಗ್ರಾಮದ ಬಲಾಢ್ಯರಿಂದ ಅತಿಕ್ರಮಣವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಆಗಮಿಸಿ ಅಳತೆ ಮಾಡಿ ಅತಿಕ್ರಮಣದ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು. ಕೆರೆ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ.

ಈ ಸಂಬಂಧ ಎಲ್ಲಾ ದಾಖಲೆ ಸಮೇತ ದೂರು ನೀಡಿದ್ದರೂ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ. ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿರುವ ಬಲಾಢ್ಯರು, ಇದಕ್ಕೆ ಕೈ ಜೋಡಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ. ವಿಳಂಬ ಮಾಡಿದರೆ ತಾಲೂಕು ಮಟ್ಟದಲ್ಲಿ ದೊಡ್ಡ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಶಾಸಕ ಕೆ.ಎಂ.ಉದಯ್ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುವಂತದ್ದು: ಎಸ್.ಪಿ.ಸ್ವಾಮಿ

ಮದ್ದೂರು:ಮುಂದಿನ ಚುನಾವಣೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಸೋಲಿಸುತ್ತೇನೆ ಎಂದಿರುವ ಶಾಸಕ ಕೆ.ಎಂ.ಉದಯ್ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುವುದಾಗಿದೆ ಎಂದು ಬಿಜೆಪಿ ಮುಖಂಡ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಜ್ಜಲಗೆರೆ ಗಾಪಂ ಅನ್ನು ನಗರಸಭೆಗೆ ಸೇರ್ಪಡೆ ಮಾಡುವುದನ್ನು ಆ ಗ್ರಾಮದ ಜನರು, ಸದಸ್ಯರ ವಿರೋಧವಿದೆ. ಆದರೆ, ಪಂಚಾಯ್ತಿ ಆದಾಯದ ದೃಷ್ಟಿ ಇಟ್ಟುಕೊಂಡು ಶಾಸಕರು ವಿರೋಧದ ನಡುವೆ ತಮ್ಮ ಅಧಿಕಾರ ಚಲಾಯಿಸಿ ನಗರಸಭೆಗೆ ಸೇರ್ಪಡೆ ಮಾಡಿದ್ದಾರೆ ಎಂದು ದೂರಿದರು.ಗೆಜ್ಜಲಗೆರೆ ಗ್ರಾಪಂ ಮದ್ದೂರು ನಗರದಿಂದ ಆರೂವರೆ ಕಿ.ಮೀ ದೂರವಿದೆ. ನಗರಸಭೆಗೆ ಸೇರಿಸಲು ಗ್ರಾಮದವರ ಒಮ್ಮತದ ಅಭಿಪ್ರಾಯ ಪಡೆಯಬೇಕು. ಆದರೆ, ಶಾಸಕರಿಗೆ ಯಾರು ಅಧಿಕಾರ ಕೊಟ್ಟರು ಎಂದು ಪ್ರಶ್ನಿಸಿದರು.

ಆರ್.ಅಶೋಕ್ ವಿಪಕ್ಷ ನಾಯಕರು. ಇಡೀ ರಾಜ್ಯದಲ್ಲಿ ಎಲ್ಲೇ ಸರ್ಕಾರದ ವಿರುದ್ಧ, ಆಡಳಿತ ಪಕ್ಷದ ತಪ್ಪುಗಳ ವಿರುದ್ಧ ಎಚ್ಚರಿಸುವ ಕೆಲಸ ಮಾಡಲು ಹೋರಾಟ ಮಾಡುತ್ತಾರೆ. ಅದೇ ರೀತಿ ಗೆಜ್ಜಲಗೆರೆಯಲ್ಲಿ ರೈತರು, ಗ್ರಾಮಸ್ಥರ ಪರ ನಿಂತು ಹೋರಾಟ ಮಾಡಿದ್ದಾರೆ ಎಂದರು.ಇದರ ಅರಿವು ಇಲ್ಲದ ಕ್ಷೇತ್ರದ ಶಾಸಕ ಉದಯ್ ಅವರು ವಿಪಕ್ಷ ನಾಯಕರಾದ ಆರ್.ಅಶೋಕ್ ವಿರುದ್ಧ ಮುಂದಿನ ಚುನಾವಣೆಯಲ್ಲಿ ಅವರ ಕ್ಷೇತ್ರಕ್ಕೆ ಹೋಗಿ ಸೋಲಿಸುತ್ತೇನೆ ಎಂಬ ಹೇಳಿಕೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದ್ದು. ಇವರ ಹೇಳಿಕೆ ದ್ವೇಷದ ರಾಜಕಾರಣದಿಂದ ಕೂಡಿದೆ. ಕಾನೂನು ಮೀರಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೊರವನಹಳ್ಳಿ ಗ್ರಾಪಂ ಬೀಗ ತೆರವು ವಿಚಾರವಾಗಿ ನಾಲ್ವರ ವಿರುದ್ಧ ಪ್ರಕರಣ ದಾಖಲು ದ್ವೇಷದಿಂದ ಕೂಡಿದೆ. ಗ್ರಾಪಂ ಉಳಿವಿಗಾಗಿ ವಿಪಕ್ಷ ನಾಯಕರೊಂದಿಗೆ ಸ್ಥಳೀಯರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು. ರೈತ ನಾಯಕಿ ಸುನಂದ ಜಯರಾಂ ಸೇರಿದಂತೆ ರೈತರು ಭಾಗಿಯಾಗಿದ್ದರು. ಇಒ, ಪಿಡಿಒ, ಗ್ರಾಮ ಸೇವಕ ಯಾರು ಬಂದು ಗ್ರಾಪಂ ಬೀಗ ಹಾಕಿದ್ದರು. ಇದನ್ನು ತೆರವು ಮಾಡಿ ಪ್ರತಿಭಟಿಸಿದ್ದಾರೆ. ಕೆಲವರ ಕುಮ್ಮಕ್ಕಿನಿಂದ ದೂರು ದಾಖಲಾಗಿದೆ ಎಂದು ಆರೋಪಿಸಿದರು.