ಸಾರಾಂಶ
ಆಧುನಿಕತೆ ಭರಾಟೆಯಲ್ಲಿಯೂ ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಕೃಷ್ಣಮೂರ್ತಿ ಎನ್ನುವವರು ಕೇಕ್ ಕತ್ತರಿಸುವ ಮೂಲಕ ತನ್ನ ಕುರಿಯ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಿರಿಯೂರು:
ಆಧುನಿಕತೆ ಭರಾಟೆಯಲ್ಲಿಯೂ ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಕೃಷ್ಣಮೂರ್ತಿ ಎನ್ನುವವರು ಕೇಕ್ ಕತ್ತರಿಸುವ ಮೂಲಕ ತನ್ನ ಕುರಿಯ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಹಿಂದಿನ ಎರಡು ವರ್ಷ ಸಹ ಇದೇ ರೀತಿ ಹುಟ್ಟುಹಬ್ಬ ಆಚರಿಸಲಾಗಿತ್ತು.ಕುರಿ ವ್ಯಾಪಾರಿ ಕೃಷ್ಣಮೂರ್ತಿ ಮೂರು ವರ್ಷ ಹಿಂದೆ ವ್ಯಾಪಾರಕ್ಕೆಂದು ತಂದಿದ್ದ ಕುರಿ ಮರಿ ಹಾಕಿದ ಕೇವಲ ಆರು ತಿಂಗಳಲ್ಲೇ ಅಸುನೀಗಿತ್ತು. ಇದರಿಂದ ಬೇಸರಗೊಂಡ ಅವರು ಕುರಿ ಮರಿ ಪ್ರೀತಿಯಿಂದ ಸಾಕಿದ್ದಾರೆ. ಮೇ 2ರಂದು ಜನಿಸಿದ್ದರಿಂದ ಪ್ರತಿ ವರ್ಷ ಇದೇ ದಿನ ಹುಟ್ಟುಹಬ್ಬ ಆಚರಿಸುತ್ತಾರೆ.
ಈ ಕುರಿತು ಕೃಷ್ಣಮೂರ್ತಿ ಮಾತನಾಡಿ, ಮೂರು ವರ್ಷಗಳಿಂದ ಕುರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದೇನೆ. ಈ ವರ್ಷ ಕುರಿಯ ಕಾಲಿಗೆ ಬೆಳ್ಳಿ ಕಡಗ ಮಾಡಿಸಿದ್ದೇನೆ ಎಂದರು. ಈ ಸಂದರ್ಭದಲ್ಲಿ ರಾಜಪ್ಪ, ಪಾಂಡು, ರಮೇಶ್, ಮಂಜುನಾಥ್, ಶಿವಕುಮಾರ್ ಸುರೇಶ್, ಲಕ್ಷ್ಮೀಕಾಂತ್, ಶಿವಮೂರ್ತಿ, ಅರುಣ್ ಕುಮಾರ್, ಶ್ರೀಪಾದ್, ಮಂಜುಳಾ , ಈರಣ್ಣ ಮುಂತಾದವರು ಹಾಜರಿದ್ದರು.