ಸಾರಾಂಶ
ಸಂಗೀತದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗಲು ಸಾಧ್ಯ. ಸಂಗೀತ ತನ್ನದೇ ಅದ ವಿಶೇಷ ಹೊಂದಿದೆ.
ಭಟ್ಕಳ: ತಾಲೂಕಿನ ಮಾರುಕೇರಿಯ ರವಿ ಹೆಬ್ಬಾರ ಮನೆಯಂಗಳದಲ್ಲಿ ಸಮ್ಯಕ್ ಸಂಗೀತ ಗುರುಕುಲ ಕಿತ್ರೆ ಹಾಗೂ ಸಾಧನ ಕಲಾ ಸಂಗಮ ಕುಂದಾಪುರ, ಸ್ವರ ಸಂಗಮ ಗುಣವಂತೆ ಇವರ ಸಹಯೋಗದಲ್ಲಿ ಅಂತರಂಗ ಗಾನಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕಿತ್ರೆ ದೇವಿಮನೆ ದೇವಸ್ಥಾನದ ಪ್ರಧಾನ ಅರ್ಚಕ ಬಾಲಚಂದ್ರ ಭಟ್ಟ ಹಾಗೂ ಶ್ರೀಧರ ಭಟ್ಟ ಉದ್ಘಾಟಿಸಿ ಇಂತಹ ಸಂಗೀತ ಕಾರ್ಯಕ್ರಮದಿಂದ ಸಂಗೀತಾಭ್ಯಾಸ ಮಾಡುವವರಿಗೆ ಅನುಕೂಲವಾಗಲಿದೆ. ಸಂಗೀತ ಮನಸ್ಸಿಗೆ ಸಂತಸ ನೀಡುತ್ತದೆ. ಸಂಗೀತದಿಂದ ಎಂತಹ ಒತ್ತಡವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದರು.ಕುಂದಾಪುರದ ಮಕ್ಕಳ ತಜ್ಞ ಡಾ. ಎಚ್.ಆರ್. ಹೆಬ್ಬಾರ್ ಮಾತನಾಡಿ, ಸಂಗೀತದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗಲು ಸಾಧ್ಯ. ಸಂಗೀತ ತನ್ನದೇ ಅದ ವಿಶೇಷ ಹೊಂದಿದೆ. ಸಂಗೀತವನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರನ್ನು ಸರ್ಕಾರ ಸರಿಯಾಗಿ ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಗಜಾನನ ಅವಧಾನಿ ಮಾತನಾಡಿ, ಸಂಗೀತದಿಂದ ಆತ್ಮಸಂತೋಷ ಸಿಗುತ್ತದೆ. ಭಾರತೀಯ ಸಂಗೀತದಿಂದ ಮನಸ್ಸಿಗೆ ಆನಂದ, ಶಾಂತಿ, ಮುದ ನೀಡುತ್ತದೆ. ಭಗವಂತನಿಗೆ ಹತ್ತಿರವಾದದ್ದು ಮತ್ತು ಪ್ರಿಯವಾಗಿದ್ದು ಸಂಗೀತ. ಸಂಗೀತ ತನ್ನದೇ ಶಕ್ತಿ ಇದೆ ಎಂದರು.ಕುಂದಾಪುರದ ವಿಶ್ವಸ್ಥ ಸಾಧನ ಕಲಾ ಸಂಗಮದ ನಾರಾಯಣ ಐತಾಲ್, ಚಾರ್ಟೆಂಡ್ ಅಕೌಂಟೆಂಟ್ ವಸಂತ ಶ್ಯಾನಭಾಗ, ಸುಬ್ರಮಣ್ಯ ಹೆಗಡೆ, ಜ್ಯೋತಿಷಿ ಮಂಜುನಾಥ ಹೆಬ್ಬಾರ, ಹಿರಿಯ ಸಂಗೀತಗಾರ ಸುಬ್ರಹ್ಮಣ್ಯ ಹೆಗಡೆ ಮಾತನಾದರು. ಶೇಷಾದ್ರಿ ಅಯ್ಯಂಗಾರ್ ಸ್ವಾಗತಿಸಿದರು. ಸಮ್ಯಕ್ ಸಂಗೀತ ಗುರುಕುಲದ ಮುಖ್ಯಸ್ಥ ಗಜಾನನ ಹೆಬ್ಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೇಶವ ಅತಿಥಿ ಪರಿಚಯಿಸಿದರು. ಸಂಧ್ಯಾ ಹೆಬ್ಬಾರ, ವಾಣಿ, ಧನ್ಯ ಹೆಬ್ಬಾರ ನಿರೂಪಿದರು. ವಿನಾಯಕ ಭಟ್ಟ ವಂದಿಸಿದರು. ಸಂಗೀತ ಕಾರ್ಯಕ್ರಮದಲ್ಲಿ ಹಲವು ಗಾಯಕರು ಸಂಗೀತ ಹಾಡಿ ಗಮನ ಸೆಳೆದರು.