ಸಾರಾಂಶ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಸಂಗೀತಕ್ಕೆ ಯಾವುದೇ ದೇಶ, ಭಾಷೆಯ ಗಡಿ ಇಲ್ಲವಾಗಿದ್ದು, ಪ್ರತಿಯೊಬ್ಬರ ಬದುಕಿಗೂ ಸಂಗೀತ ಸಂಸ್ಕಾರ ನೀಡಲಿದೆ ಎಂದು ಗಾಯಕಿ ಸೀತೂರಿನ ರಂಗಿಣಿ ರಾವ್ ಹೇಳಿದರು.ಪಟ್ಟಣದ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ 15ನೇ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಭಕ್ತಿಗೀತೆ, ಭಾವಗೀತೆ ಹಾಗೂ ದೇಶಭಕ್ತಿ ಗೀತೆಯ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಬದುಕಿಗೆ ಬಹುದೊಡ್ಡ ಕೊಡುಗೆ ಸಂಗೀತವಾಗಿದ್ದು, ಸಂಗೀತ ವಿಶ್ವ ಭಾಷೆಯಾಗಿದೆ. ಸಂಗೀತ ವಿಶ್ವದ ಬಹು ದೊಡ್ಡ ಮಾಧ್ಯಮ ಎಂದರೆ ಅತಿಶಯೋಕ್ತಿಯಲ್ಲ. ಸಂಗೀತ ಅಂತರಂಗ, ಹೃದಯದ ಭಾಷೆಯಾಗಿದೆ. ಪ್ರತಿಯೊಬ್ಬರ ಬದುಕಿಗೆ ಅತೀ ಅವಶ್ಯಕ ಸಂಗೀತ. ಸಂಸ್ಕಾರವಂತರಾಗಲು ಕನಿಷ್ಠಮಟ್ಟದ ಸಂಗೀತವನ್ನಾದರೂ ಪ್ರತಿಯೊಬ್ಬರೂ ಅರಿತಿರಬೇಕು ಎಂದರು.ಎನ್.ಆರ್.ಪುರ ಜೇಸಿಐ ಪೂರ್ವಾಧ್ಯಕ್ಷ ವಿದ್ಯಾನಂದ್ ಮಾತನಾಡಿ, ಸಂಗೀತ ಎಲ್ಲ ಕ್ಷೇತ್ರಗಳಲ್ಲೂ ಆವರಿಸಿದ್ದು, ಪ್ರಕೃತಿ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ, ಶಿಕ್ಷಣ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಸಂಗೀತದ ಕೊಡುಗೆ ಇದೆ. ವಿಶ್ವದಲ್ಲಿ ಭಾರತೀಯ ಸಂಗೀತಕ್ಕೆ ವಿಶೇಷ ಮಹತ್ವವಿದ್ದು, ಎಲ್ಲೆಡೆ ಇದರ ಮಹತ್ವದ ಅರಿವಿದೆ. ಈ ಸಂಗೀತವನ್ನು ಆರಾಧಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ನಿವೃತ್ತ ಶಿಕ್ಷಕ ರಾಜಕುಮಾರ್ ಮಾತನಾಡಿ, ಸಂಗೀತ ಪ್ರತಿಯೊಬ್ಬರ ಮನಸ್ಸಿಗೂ ಆಹ್ಲಾದ ನೀಡಲಿದ್ದು, ಒತ್ತಡ, ದುಃಖದ ಸಂದರ್ಭದಲ್ಲಿ ಸಂಗೀತ ಆಲಿಸುವುದರಿಂದ ದುಃಖ ಮರೆಯಾದರೆ. ಸಂತೋಷದ ಸಂದರ್ಭದಲ್ಲಿ ಆಲಿಸಿದರೆ ಸಂತಸ ಇಮ್ಮಡಿಗೊಳ್ಳಲಿದೆ. ಭಾರತದಲ್ಲಿ ಹಲವು ಸಂಗೀತ ಪ್ರಾಕಾರಗಳಿದ್ದು, ಎಲ್ಲವೂ ಒಂದೊಂದು ವೈಶಿಷ್ಟ್ಯತೆ ಹೊಂದಿದೆ. ಗ್ರಾಮೀಣ ಭಾಗಗಳಲ್ಲಿ ಜನಪದ ಸಂಗೀತ, ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಿ ಸಂಗೀತ, ಚಲನಚಿತ್ರಗಳಲ್ಲಿ ವಿಶೇಷ ಹಾಡುಗಳಿವೆ. ಭಾರತದಲ್ಲಿ ಕೋಟ್ಯಂತರ ಹಾಡುಗಳಿದ್ದು ಪ್ರತೀ ಹಾಡಿಗೂ ಒಂದೊಂದು ಅರ್ಥವಿದೆ ಎಂದರು.
ದುರ್ಗಾದೇವಿ ಸಮಿತಿ ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷ ಶಿವರಾಮ್ ಶೆಟ್ಟಿ, ಸಹ ಖಜಾಂಚಿ ಚೈತನ್ಯ ವೆಂಕಿ, ಗಾಯಕರಾದ ಸುಧಿ ಎನ್.ಆರ್.ಪುರ, ಕಡೂರು ಶ್ರೀನಿವಾಸ್, ಸಮಿತಿ ಪದಾಧಿಕಾರಿಗಳಾದ ಕೆ.ಪ್ರಶಾಂತ್‌ಕುಮಾರ್, ಮನುಕುಮಾರ್, ಎ.ಸಿ.ಕೃಷ್ಣಮೂರ್ತಿ ಗಿರೀಶ್ ಬಂದಿಯಡ್ಕ, ನಟರಾಜ್‌ಶೆಟ್ಟಿ, ಎಂ.ನಾರಾಯಣ, ಈಶ್ವರ್ ಇಟ್ಟಿಗೆ, ವಿದ್ಯಾ ಶೆಟ್ಟಿ, ಸುಚಿತಾ ಹೆಗ್ಡೆ, ರಾಜಪ್ಪಗೌಡ, ದಿನೇಶ್ ತುಪ್ಪೂರು, ಎಂ.ನಾರಾಯಣ ಮತ್ತಿತರರು ಹಾಜರಿದ್ದರು. -- (ಬಾಕ್ಸ್)--ಇಂದು ವಾರುಣೀ ರೂಪಿಣಿ ಪೂಜಾ ಪಾರಾಯಣಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ನವರಾತ್ರಿ ಮಹೋತ್ಸವದ ಅಂಗವಾಗಿ ಅ.7 ಸೋಮವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1ರವರೆಗೆ ಮಕರವಾಹಿನಿ, ವಾರುಣೀ ರೂಪಿಣಿ ಪೂಜಾ ಪಾರಾಯಣ ನಡೆಯಲಿದೆ.ಸಂಜೆ 6ರಿಂದ 7.45ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ ೮ರಿಂದ ಕೊಪ್ಪದ ಮಯೂರಿ ನಾಟ್ಯಕಲಾ ಕೇಂದ್ರದಿಂದ ಭರತ ನಾಟ್ಯ ವೈವಿದ್ಯ ಹಾಗೂ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
-೦೬ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಆಯೋಜಿಸಿದ್ದ ವಿವಿಧ ಗಾಯನ ಸ್ಪರ್ಧೆಯನ್ನು ಗಾಯಕಿ ಸೀತೂರಿನ ರಂಗಿಣಿ ರಾವ್ ಉದ್ಘಾಟಿಸಿದರು. ಚೈತನ್ಯ ವೆಂಕಿ, ಪ್ರಶಾಂತ್‌ಕುಮಾರ್, ವಿದ್ಯಾನಂದ್, ರಾಜಕುಮಾರ್, ಶ್ರೀನಿವಾಸ್ ಮತ್ತಿತರರು ಇದ್ದರು.