ಜೀವನದ ನೆಮ್ಮದಿಗೆ ಸಂಗೀತವೇ ಮದ್ದು: ಸುರೇಶ ಹೆಬ್ಳೀಕರ್‌

| Published : Apr 28 2025, 12:47 AM IST

ಜೀವನದ ನೆಮ್ಮದಿಗೆ ಸಂಗೀತವೇ ಮದ್ದು: ಸುರೇಶ ಹೆಬ್ಳೀಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ದುಗುಡ ದುಮ್ಮಾನಗಳಿಂದ ಜರ್ಝರಿತವಾಗುವ ನಮ್ಮ ಮನಸು ಹಾಗೂ ದೇಹವನ್ನು ಸಂತಸದಿಂದ ಇಡುವುದು ಸಂಗೀತ ಕೇಳುವುದರಿಂದ ಮಾತ್ರ ಎಂದು ಚಲನಚಿತ್ರ ನಟ, ಪರಿಸರ ಪ್ರೇಮಿ ಸುರೇಶ ಹೇಬ್ಳೀಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದಿನ ದುಗುಡ ದುಮ್ಮಾನಗಳಿಂದ ಜರ್ಝರಿತವಾಗುವ ನಮ್ಮ ಮನಸು ಹಾಗೂ ದೇಹವನ್ನು ಸಂತಸದಿಂದ ಇಡುವುದು ಸಂಗೀತ ಕೇಳುವುದರಿಂದ ಮಾತ್ರ ಎಂದು ಚಲನಚಿತ್ರ ನಟ, ಪರಿಸರ ಪ್ರೇಮಿ ಸುರೇಶ ಹುಬ್ಳೀಕರ್‌ ಹೇಳಿದರು.

ನಗರದ ಕಂಠಿ ವೃತ್ತದಲ್ಲಿರುವ ವಿಜಯ ಮಹಾಂತೇಶ್ವರ ಅನುಭವ ಮಂಟಪದಲ್ಲಿ ರವೀಂದ್ರ ಅಂಬಣ್ಣಪ್ಪ ದೇವಗಿರಕರ ಹಾಗೂ ಸ್ನೇಹರಂಗ ಇವರ ಸಹಯೋಗದಲ್ಲಿ ಮಾಧುರ್ಯ ಸಾರ್ವಭೌಮ ಡಾ.ಪಿ.ಬಿ. ಶ್ರೀನಿವಾಸರ ೧೨ನೇ ಪುಣ್ಯಸ್ಮರಣೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸ್ವರಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಜೀವನದಲ್ಲಿ ನಾವು ಏನನ್ನಾದರೂ ಗಳಿಸಬಹುದು. ಆದರೆ ಸಂತೋಷ ನೆಮ್ಮದಿ ಗಳಿಸುವುದು ಬಲು ಕಠಿಣ. ಅವುಗಳನ್ನು ನಾವು ಸಂಗೀತ ಆಲಿಸುವುದರಿಂದ ಪಡೆಯಬಹುದು. ಕಾರಣ ಪ್ರತಿಯೊಬ್ಬರು ಸಂಗೀತ ಹಾಡುವುದು ಅಥವಾ ಕೇಳುವುದಾಗಲಿ ಮಾಡುವ ರೂಢಿ ಮಾಡಿಕೊಳ್ಳಿ ಎಂದ ಅವರು, ಪುಣೆಯಂತಹ ನಗರದಲ್ಲಿರುವ ರವೀಂದ್ರ ದೇವಗಿರಕರ ಇಳಕಲ್ಲ ನಗರಕ್ಕೆ ಬಂದು ಇಲ್ಲಿ ಪಿ.ಬಿ. ಶ್ರೀನಿವಾಸರ ಪುಣ್ಯಸ್ಮರಣೆ ಕಾರ್ಯ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅನೇಕರು ತಮ್ಮ ತಂದೆ-ತಾಯಿಯ ಪುಣ್ಯಸ್ಮರಣೆಯನ್ನೇ ಮಾಡುವುದಿಲ್ಲ. ಸಂಬಂಧಿಕರೇ ಇಲ್ಲದ ಪಿ.ಬಿ.ಶ್ರೀನಿವಾಸರ ಅಭಿಮಾನಿಯಾಗಿರುವ ರವೀಂದ್ರರು ಅವರ ಹಾಡುಗಳ ಮೂಲಕ ಅವರಿಗೆ ನುಡಿ ನಮನ ಸಲ್ಲಿಸುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ ಎಂದರು.ನಗರದ ಅಮ್ಮಾ ಸೇವಾ ಸಂಸ್ಥೆಯ ಗೌರವ ಅಧ್ಯಕ್ಷ ಗುರುನಾಥಪ್ಪ ನಾಗಲೋಟಿ ಮಾತನಾಡಿ, ರವಿಂದ್ರ ದೇವಗಿರಕರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ. ಅವರೊಬ್ಬ ಗುಪ್ತ ದಾನಿಗಳು ಎಂದರೂ ತಪ್ಪಲ್ಲ, ಕಾರಣ ಇಷ್ಟೆ ಅಮ್ಮಾ ಸೇವಾ ಸಂಸ್ಥೆಯ ವೈದ್ಯರಿಗೆ ₹೨೫ ಲಕ್ಷ ೩ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ ಶಿರೂರಿನ ಡಾ.ಬಸವಲಿಂಗ ಶ್ರೀಗಳು ಹಾಗೂ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಶ್ರೀಗಳು ಆರ್ಶಿವಚನ ನೀಡಿದರು.

ಇದೇ ವೇಳೆ ಚಲನಚಿತ್ರ ನಟ ಸುರೇಶ ಹುಬ್ಲೀಕರ, ಗುರುನಾಥಪ್ಪ ನಾಗಲೋಟಿ ಹಾಗೂ ಇಳಕಲ್ಲ ನಗರದ ಬಡ ಕಲಾವಿದ ಮುರ್ತುಜಸಾಬ ಘಟ್ಟಿಗನೂರ ಅವರನ್ನು ಸತ್ಕರಿಸಲಾಯಿತು.

ಸಂಘಟಕ ರವೀಂದ್ರ ದೇವಗಿಕರ ಹಾಗೂ ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ಉಪಸ್ಥಿತರಿದ್ದರು. ಇಳಕಲ್ಲ ನಗರದ ಕಲಾವಿದ ಗೋಪಿಕೃಷ್ಣ ಕಠಾರೆ. ಪರಶುರಾಮ ಪವಾರ, ನರಸಿಂಗ ಕಾಟವಾ, ಸುರೇಶ ರಾಯಬಾಗಿ, ಜಗದೀಶ ಕಾಟವಾ ಹಾಗೂ ವಿದ್ಯಾಶ್ರೀ ಗಂಜಿ, ಕೋಮಲ ಖೋಡೆ, ವೈಷ್ಣವಿ ಗೂಳಿ, ಜಮುನಾ ಕಾಟವಾ ಹಾಡುಗಳನ್ನು ಹಾಡಿ ರಂಜಿಸಿದರು.

ಸಂತೋಷ ಚಿತ್ರಗಾರ, ಕುಮಾರ ಸಪ್ಪಂಡಿ ಸಂಗತ ಸಂಯೋಜನೆ ಮಾಡಿದರೆ, ಗೋವಿಂದ ಕರವಾ ನಿರೂಪಿಸಿದರು. ರವೀದ್ರ ದೇವಗಿರಕರ ಸ್ವಾಗತಿಸಿದರು. ಮಾಹಾದೇವ ಕಂಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚದ್ರಶೇಕರ ಶ್ಯಾಸ್ತ್ರಿ ವಂದಿಸಿದರು. ಪಿ.ಡಗಳಚಂದ್ರ ನಿರೂಪಿಸಿದರು.