ಸಾರಾಂಶ
ಜಾನಪದ ನಮ್ಮ ಬದುಕಿನ ಉಸಿರು, ಆಧುನಿಕತೆ ಹೆಚ್ಚಾದಂತೆ ವಿದೇಶಿ ವ್ಯಾಮೋಹದ ಹುಚ್ಚು ಹಿಡಿದಿದೆ, ನಮ್ಮತನವನ್ನು ನಾವು ಉಳಿಸಿ ಬೆಳೆಸಬೇಕಿದೆ. ಜಾನಪದ ಸೊಗಡು ಆರೋಗ್ಯಕರ ಸಮಾಜ ಕಟ್ಟಲು ಪೂರಕವಾಗಿದೆ. ಈ ನಿಟ್ಟಿನಲ್ಲಿ ಜಾನಪದ ಕಲೆಗಳು ಮುಂದಿನ ಪೀಳಿಗೆಗೆಗೂ ಉಳಿಯಬೇಕಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸಂಗೀತ- ಸಾಹಿತ್ಯದ ತಾಯಿಬೇರು ಜಾನಪದವಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.ನಗರದಲ್ಲಿರುವ ಹಿಂದಿಭವನದಲ್ಲಿ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್, ವಿಳೆ ಕಾರ್ಪೋರೇಷನ್, ಡ್ರೀಮ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಮತ್ತು ಜಾನಪದ ಗಾಯನ-ಸಾಧಕರಿಗೆ ರಾಜ್ಯ ಮಟ್ಟದ ಮಾಂಡವ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿರುವ ಮನುಷ್ಯನಿಗೆ ಜಾನಪದ ಸೊಗಡು ಬೇಕಿಲ್ಲವಾಗಿದೆ, ಸಂಗೀತ ಸಾಹಿತ್ಯದ ಮೂಲ ಜಾನಪದ ಇಂದು ಅಳಿವಿನಂಚಿನಲ್ಲಿದೆ, ಅದನ್ನು ಉಳಿಸಿ ಬೆಳೆಸಲು ಗಾಯಕನ ಕ್ಷೇತ್ರ, ಸಂಘ-ಸಂಸ್ಥೆಗಳ ಪಾತ್ರ ದೊಡ್ಡದಿದೆ ಎಂದರು.ಜಾನಪದ ನಮ್ಮ ಬದುಕಿನ ಉಸಿರು, ಆಧುನಿಕತೆ ಹೆಚ್ಚಾದಂತೆ ವಿದೇಶಿ ವ್ಯಾಮೋಹದ ಹುಚ್ಚು ಹಿಡಿದಿದೆ, ನಮ್ಮತನವನ್ನು ನಾವು ಉಳಿಸಿ ಬೆಳೆಸಬೇಕಿದೆ. ಜಾನಪದ ಸೊಗಡು ಆರೋಗ್ಯಕರ ಸಮಾಜ ಕಟ್ಟಲು ಪೂರಕವಾಗಿದೆ. ಈ ನಿಟ್ಟಿನಲ್ಲಿ ಜಾನಪದ ಕಲೆಗಳು ಮುಂದಿನ ಪೀಳಿಗೆಗೆಗೂ ಉಳಿಯಬೇಕಿದೆ ಎಂದರು.
ಪ್ರತಿವರ್ಷ ಸಂಗೀತ, ನೃತ್ಯ, ಕಲಾನಿಕೇತನ ಟ್ರಸ್ಟ್ನ್ ಅಧ್ಯಕ್ಷೆ ಶೋಭಾ ಅವರು ಯಾವುದೇ ಇಲಾಖೆ ನೆರವು ಇಲ್ಲದೆ, ಜಾನಪದ ಉಳಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ನೆಲದ ಋಣ ತೀರಿಸಲು ಕೊಡುಗೆ ನೀಡುತ್ತಿದ್ದಾರೆ, ಇದು ಹೀಗೆ ಮುಂದುವರಿಯಲಿ, ಎಲ್ಲರೂ ಸಹಕಾರ ನೀಡೋಣ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವವರಿಗೆ ಮಾಂಡವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಾಯಕರು ಜಾನಪದ-ಭಕ್ತಿಗೀತೆಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಶೋಭಾ ಪಿ.ಗೌಡ, ವಿ೪ ಕಾರ್ಪೋರೇಷನ್, ಡ್ರೀಮ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಮೀರ್, ಶಿವಯೋಗಿ ಶರಣ ಶ್ರೀ ಮಹೇಶ್ವರ ತಾತ, ಸಮಾಜಸೇವಕ ನೂರ್ ಅಹಮ್ಮದ್, ಗುತ್ತಲು ಸೊಸೈಟಿ ನಿರ್ದೇಶಕ ಜಿ.ಎನ್.ಮಂಜುನಾಥ್, ರೈಲ್ವೆ ಇಲಾಖೆ ಟಿ.ಶ್ರೀನಿವಾಸ್, ಸೋನಿಯಾಗಾಂಧಿ ಬ್ರಿಗೇಡ್ ಉಪಾಧ್ಯಕ್ಷೆ ಜಯಲಕ್ಷ್ಮೀ, ರೈತ ಮುಖಂಡ ಚಂದ್ರಶೇಖರ್, ಉದ್ಯಮಿ ವಿನಯ್‌ಕುಮಾರ್, ಗಾಯಕ ಡಾ.ಅಕ್ರಂ ಪಾಷಾ, ಬಿಜೆಪಿ ಮಂಜುನಾಥ್, ಶುಭಪಲ್ಲವಿ ಮತ್ತಿತರರಿದ್ದರು.