ಸಂಗೀತ ಅಭ್ಯಾಸ ಜೀವನಪರ್ಯಂತ ಇರಲಿ

| Published : May 08 2024, 01:00 AM IST

ಸಾರಾಂಶ

ಗೀತಗಾಯನ ತರಬೇತಿ ಶಿಬಿರ ಒಂದೆರಡು ದಿನಗಳಿಗೆ ಸೀಮಿತಗೊಳಿಸದೇ ಜೀವನಪರ್ಯಂತ ಅಭ್ಯಾಸವನ್ನು ಸಾಹಿತ್ಯ, ಸಂಸ್ಕೃತಿ, ಗಾಯನಕ್ಕೆ ಅಳವಡಿಸಿಕೊಳ್ಳುವುದು ತುಂಬಾ ಅಗತ್ಯ ಕಾಯಕ. ಎಲ್ಲ ಸಂಗೀತ ರಾಗಗಳು ಭಕ್ತಿಗೀತೆ, ಜನಪದ ಗೀತೆಗಳೊಂದಿಗೆ ಸುಗಮ ಸಂಗೀತಕ್ಕೂ ಅನ್ವಯಿಸುತ್ತದೆ ಎಂದು ಗಾಯಕಿ, ನಿವೃತ್ತ ಪ್ರಾಧ್ಯಾಪಕಿ ನೀಲಾಂಬಿಕೆ ಅಭಿಪ್ರಾಯಪಟ್ಟಿದ್ದಾರೆ.

- ಗೀತಗಾಯನ ಶಿಬಿರ ಸಮಾರೋಪದಲ್ಲಿ ನೀಲಾಂಬಿಕೆ ಸಲಹೆ - - - ದಾವಣಗೆರೆ: ಗೀತಗಾಯನ ತರಬೇತಿ ಶಿಬಿರ ಒಂದೆರಡು ದಿನಗಳಿಗೆ ಸೀಮಿತಗೊಳಿಸದೇ ಜೀವನಪರ್ಯಂತ ಅಭ್ಯಾಸವನ್ನು ಸಾಹಿತ್ಯ, ಸಂಸ್ಕೃತಿ, ಗಾಯನಕ್ಕೆ ಅಳವಡಿಸಿಕೊಳ್ಳುವುದು ತುಂಬಾ ಅಗತ್ಯ ಕಾಯಕ. ಎಲ್ಲ ಸಂಗೀತ ರಾಗಗಳು ಭಕ್ತಿಗೀತೆ, ಜನಪದ ಗೀತೆಗಳೊಂದಿಗೆ ಸುಗಮ ಸಂಗೀತಕ್ಕೂ ಅನ್ವಯಿಸುತ್ತದೆ ಎಂದು ಗಾಯಕಿ, ನಿವೃತ್ತ ಪ್ರಾಧ್ಯಾಪಕಿ ನೀಲಾಂಬಿಕೆ ಅಭಿಪ್ರಾಯಪಟ್ಟರು.

ನಗರದ ಆರ್.ಎಚ್.ಗೀತಾ ಮಂದಿರದಲ್ಲಿ ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಗೀತ ಗಾಯನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಂಗೀತ ನಿರ್ದೇಶಕ, ಗಾಯಕರಾದ ಬೆಂಗಳೂರಿನ ಉಪಾಸನಾ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನ ಜೀವನದಲ್ಲಿ ಸಂಗೀತ ಸಂಪ್ರದಾಯ ಪರಂಪರೆಗಳು ಒಂದು ಅವಿಭಾಜ್ಯ ಅಂಗ. ಸಂಕುಚಿತ ಭಾವನೆಗಳನ್ನು ಬಿಟ್ಟು ವಿಶಾಲವಾದ ಮನೋಭಾವನೆಯೊಂದಿಗೆ ನಾವು ನೀವೆಲ್ಲಾ ತೊಡಗಿಸಿಕೊಂಡಾಗ ಇಂತಹ ಸಂಘಟನೆಗಳು ನಿರಂತರ ಅಭಿವೃದ್ಧಿಯಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವಿದ್ವಾನ್ ಮಾಲತೇಶ್ ಕುಲಕರ್ಣಿ, ಅನುಶ್ರೀ ಸಂಗೀತ ಶಾಲೆಯ ವಿದುಷಿ ವೀಣಾ ಸದಾನಂದ ಹೆಗಡೆ,

ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆಯ ವಿದುಷಿ ಶೋಭಾ ರಂಗನಾಥ್, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‌ ಶೆಣೈ, ಪರಮೇಶ್ವರಯ್ಯ ವೀರಭದ್ರ ಮಠದ್, ಶಿಕ್ಷಕ ಹಾಲಸ್ವಾಮಿ, ಜೆ.ಶಿಲ್ಪಾ, ಶಿಬಿರಾರ್ಥಿಗಳು ಇತರರು ಇದ್ದರು.

- - - -7ಕೆಡಿವಿಜಿ31ಃ:

ದಾವಣಗೆರೆಯಲ್ಲಿ ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಹಯೋಗದಲ್ಲಿ ಗೀತಗಾಯನ ತರಬೇತಿ ಶಿಬಿರ ನಡೆಯಿತು.