ರಟ್ಟೀಹಳ್ಳಿ ತಾಲೂಕಿನ ಹೊಸಕಟ್ಟಿಗ್ರಾಮದ ಮುಸಲ್ಮಾನ್ ಬಾಂಧವರು ಮಾಜಿ ಸಚಿವ ಬಿ.ಸಿ. ಪಾಟೀಲರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಹಿರೇಕೆರೂರು:ರಟ್ಟೀಹಳ್ಳಿ ತಾಲೂಕಿನ ಹೊಸಕಟ್ಟಿಗ್ರಾಮದ ಮುಸಲ್ಮಾನ್ ಬಾಂಧವರು ಮಾಜಿ ಸಚಿವ ಬಿ.ಸಿ. ಪಾಟೀಲರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.ಪಟ್ಟಣದ ಬಿ.ಸಿ. ಪಾಟೀಲ ಅವರ ಗೃಹ ಕಚೇರಿಯಲ್ಲಿ ಶನಿವಾರ ಹೊಸಕಟ್ಟಿ ಗ್ರಾಮದ ಮೊಮ್ಮದ್‌ ರಫೀಕ್, ದಸ್ತಗಿರಿ ಬೆಳ್ಳುಡಿ, ಅದರತ್ತಲಿ ಶಿರಹಟ್ಟಿ, ಅಲ್ತಾಫ್ ಮಾಸೂರು, ಇರ್ಫಾನ್‌ ತುಮ್ನಿನಕಟ್ಟಿ, ರಾಜಸಾಬ್ ಬ್ಯಾಡಗಿ, ಗೌಸ್ ಮಾಸುರ್, ಸುಭಾನಿ ಕಮಲಾಪುರ್, ಹುಸೇನ್ ಸಾಬ್‌ಗುಬ್ಬಿ, ಮಾಬೂಬಲೀಸಾ ಗುಬ್ಬಿ, ರಾಜಾಸಾಬ್ ಮಾಸುರ್, ತಬಾರಕ್ ಶಿರಹಟ್ಟಿ, ರಿಯಾಜ್ ಮೇದೂರ್ ಸೇರಿದಂತೆ 20ಕ್ಕೂ ಅಧಿಕ ಜನ ಬಿಜೆಪಿ ಸೇರ್ಪಡೆಗೊಂಡರು,ಈ ವೇಳೆ ಮಾಜಿ ಸಚಿವ ಬಿ.ಸಿ. ಪಾಟೀಲ ರವರು ಮಾತನಾಡಿ, ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ತಾಲೂಕಿನ ಮುಸ್ಲಿಂ ಯುವ ಕಾರ್ಯಕರ್ತರ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ರಾಜ್ಯದಲ್ಲಿ ಇಂದು ಅಧಿಕಾರದಲ್ಲಿರುವ ಕಾಂಗ್ರೇಸ್ ಸರ್ಕಾರ ನಾಯಕತ್ವದ ಸಂಘರ್ಷದಲ್ಲಿ ತೊಡಗಿದ್ದು, ಮುಖ್ಯಮತ್ರಿ ಸ್ಥಾನದ ಕುರಿತು ಆಂತರಿಕ ಚರ್ಚೆಗಳು ನಡೆಯುತ್ತಿವೆ. ಇದರ ಜೊತೆ ಸರಕಾರ ಆರ್ಥಿಕ ಬಿಕ್ಕಟ್ಟುನ್ನು ಎದುರಿಸುತಿದ್ದು , ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ಕುಂಟಿತಗೊಂಡಿವೆ ಇದರ ಜತೆ ರಾಜ್ಯದ ಜನರಿಗೆ ಬೆಲೆ ಏರಿಕೆ ಆರ್ಥಿಕ ಹೊರೆಯಾಗಿದ್ದು ಜನಸಾಮಾನ್ಯರು ಜೀವನ ನಡೆಸುವದು ಕಷ್ಟಸಾಧ್ಯವಾಗಿದೆ. ಇನ್ನು ಆಡಳಿತದ ವೈಫಲ್ಯಕಂಡಿರುವ ಸರಕಾರರಸ್ತೆ ಗುಂಡಿಗಳನ್ನು ಮುಚ್ಚುವಂತಹ ಸಾಮಾನ್ಯ ಕೆಲಸಗಳಿಗೂ ಪರದಾಡುವಚಿತಾಗಿದೆ. ಈ ಕಾರಣಗಳಿಂದ ಬೇಸತ್ತ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ತಾಪಂ ಮಾಜಿ ಸದಸ್ಯ ಗೌಸಮೋದಿನ್‌ಸಾಬ್‌ ತೋಟದ, ಅಲ್ಪಸಂಖ್ಯಾತರ ಮೋರ್ಚಾ ತಾಲೂಕಾಧ್ಯಕ್ಷ ಮಲಿಕ್‌ರೆಹಾನ್, ಲಕ್ಷ್ಮಣ ದನವಿನಮನಿ, ಹನುಮಂತಪ್ಪ, ಶಿವಾಜಿ ಸೇರಿದಂತೆ ಇತರರಿದ್ದರು.