ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುದೇಶದ ಪ್ರಗತಿಗೆ ಮುಸ್ಲಿಂ ಸಮುದಾಯವು ಆರ್ಥಿಕ ಕ್ಷೇತ್ರದಲ್ಲಿ ಚಿಂತನೆ ನಡೆಸಿ, ವ್ಯಾಪಾರ ಮತ್ತು ಉದ್ಯಮದಲ್ಲಿ ಮುಂಚೂಣಿಯಲ್ಲಿರಬೇಕೆಂದು ರಿಫಾಹ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ರಾಜ್ಯಾಧ್ಯಕ್ಷ ಸೈಯದ್ ಮುಮ್ತಾಜ್ ಮನ್ಸೂರಿ ಹೇಳಿದರು.ನಗರದ ಎ.ಆರ್. ಪ್ಯಾಲೆಸ್‌ನಲ್ಲಿ ನಡೆದ ರಿಫಾಹ್ ಚೇಂಬರ್ ವ್ಯಾಪಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಉದ್ಯಮ ಕ್ಷೇತ್ರದಲ್ಲಿ ಸಮುದಾಯದ ಪಾತ್ರ ಹೆಚ್ಚಿಸಬೇಕು ಎಂದು ಕರೆ ನೀಡಿದರು.ಮುಸ್ಲಿಂ ಯುವಕರು ಉದ್ಯೋಗಕ್ಕಾಗಿ ಕಾದು ಕುಳಿತುಕೊಳ್ಳದೆ ಸ್ವಂತ ವ್ಯಾಪಾರ ಮತ್ತು ಉದ್ಯಮ ಆರಂಭಿಸುವು ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಯುವ ವ್ಯಾಪಾರಸ್ಥರಿಗೆ ಆತ್ಮವಿಶ್ವಾಸ ಮುಖ್ಯ, ಇದರಿಂದ ಆರ್ಥಿಕ ಪ್ರಗತಿ ಹೆಚ್ಚಳದ ಜೊತೆಗೆ ದೇಶದ ಅಭಿವೃದ್ಧಿಗೆ ಸಹಕಾರ ನೀಡಬಹುದು ಎಂದು ಹೇಳಿದರು.ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸಿದ್ಧಾರ್ಥ ಆಸ್ಪತ್ರೆಯ ಡಾ. ತಮೀಮ್ ಅಹಮದ್ ಮಾತನಾಡಿ, ವ್ಯವಹಾರಗಳಲ್ಲಿ ಒತ್ತಡ ಹೆಚ್ಚಾಗಿರುವುದರಿಂದ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಎಲ್ಲಾ ಕೆಲಸವೂ ಹೃದಯದಿಂದ ಆರಂಭವಾಗುತ್ತದೆ. ವ್ಯಾಪಾರಸ್ಥರು ಆರೋಗ್ಯದ ಕಡೆ ಗಮನಹರಿಸಿ ವ್ಯವಹಾರ ನಡೆಸಬೇಕು ಎಂದು ಸಲಹೆ ನೀಡಿದರು.ರಿಫಾಹ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ತುಮಕೂರು ಶಾಖೆ ಅಧ್ಯಕ್ಷ ಯಾಹ್ಯಾ ಖಾನ್ ಮಾತನಾಡಿ, ದೇಶಕ್ಕೆ ಸೈನಿಕರು ಹೇಗೆ ಕೊಡುಗೆ ನೀಡುತ್ತಾರೋ ಅದೇ ರೀತಿ ವ್ಯಾಪಾರಸ್ಥರು ಸಹ ಉತ್ತಮವಾಗಿ ವ್ಯಾಪಾರ, ವಹಿವಾಟು ನಡೆಸಿ, ತೆರಿಗೆ ಕಟ್ಟುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಇಡೀ ದೇಶವ್ಯಾಪ್ತಿ ರಿಫಾಹ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಸಂಸ್ಥೆ ಇದೆ. ತುಮಕೂರಿನಲ್ಲಿ ಇಂದಿನಿಂದ ಈ ಸಂಸ್ಥೆಯ ಕಾರ್ಯಚಟುವಟಿಕೆ ಆರಂಭಗೊಂಡಿದೆ. ಮುಸ್ಲೀಂ ಸಮುದಾಯದ ಆರ್ಥಿಕ ಸಬಲತೆಯನ್ನು ಬಲಪಡಿಸುವ ಉದ್ಧೇಶದಿಂದ ಈ ಸಂಸ್ಥೆ ಆರಂಭಿಸಲಾಗಿದೆ. ನಮ್ಮ ಕುಟುಂಬ, ಸಮಾಜ, ರಾಜ್ಯ ದೇಶಕ್ಕೆ ಕೊಡುಗೆ ನೀಡಬೇಕೆಂಬುದೇ ಸಂಸ್ಥೆಯ ಉದ್ಧೇಶ ಎಂದು ತಿಳಿಸಿದರು.ಸುಮಾರು 500 ರಿಂದ 600 ಜನ ವ್ಯಾಪಾರಸ್ಥರು ಇಂದಿನ ಸಭೆಯಲ್ಲಿ ಸೇರಿದ್ದಾರೆ. ದೇಶಕ್ಕೆ ನಮ್ಮ ವ್ಯವಹಾರದಲ್ಲಿ ಏನು ಕೊಡುಗೆ ನೀಡಬಹುದು ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಅರಿತು ವ್ಯಾಪಾರ ವಹಿವಾಟು ನಡೆಸಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ರಿಫಾಹ್ ಚೇಂಬರ್ ರಾಜ್ಯ ಕಾರ್ಯದರ್ಶಿ ತಾಜುದ್ದೀನ್ ಶರೀಫ್, ಉಪಾಧ್ಯಕ್ಷ ರಾಹಿಲ್ ಖಾನ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಕ್ಷೇತ್ರದ ಉದ್ಯಮಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
)
;Resize=(128,128))
;Resize=(128,128))
;Resize=(128,128))