ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿಂದೂಗಳಾರೂ ಮುಸ್ಲಿಂ ಹಬ್ಬದಲ್ಲಿ ಗಲಾಟೆ ಮಾಡಿಲ್ಲ. ಕೈ ಸರ್ಕಾರ ಬಂದ ಮೇಲೆ ಮುಸ್ಲಿಮರಿಗೆ ಮದ ಬಂದಿದೆ. ಗಣೇಶ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ಮೂರ್ತಿ ಮೇಲೆ ದಾಳಿ ಮಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಮೆರವಣಿಗೆ ಸೇರಿ ಪೊಲೀಸರ ಮೇಲೆ ಕಲ್ಲು ಎಸೆಯುತ್ತಾರೆ. ಇನ್ನುಮುಂದೆ ಮೆರವಣಿಗೆ ಬರುವ ದಾರಿಯ ಮಸೀದಿಗಳನ್ನು ಸೀಜ್ ಮಾಡಬೇಕು ಎಂದು ಆಗ್ರಹಿಸಿದರು.
ವಿಧಾನಸೌಧದ ಗ್ಯಾಲರಿಯಲ್ಲಿ ಅವರೇ ಇರ್ತಾರೆ. ಇವರಿಗೆಲ್ಲ ಕಾಂಗ್ರೆಸ್ ಸರ್ಕಾರದ ಪ್ರಚೋದನೆ ಇದೆ. ಚಪ್ಪಲಿ, ಕಲ್ಲು ಒಗೆದವರ ಬಂಧವಾಗಬೇಕು. ಆದರೆ, ಹಿಂದೂಗಳ ಮೇಲೆ ಯಾಕೆ ಲಾಠಿಚಾರ್ಜ್ ಮಾಡುತ್ತಿರಿ? ಅವರ ಮೇಲೇನು ಮಾಡಿದಿರಿ. ಮಸೀದಿ ಮೌಲ್ವಿಗಳಿಗೇನು ಮಾಡಿದಿರಿ. ಉಸ್ತುವಾರಿ ಸಚಿವರು ಎರಡೂ ಕಡೆ 8 ಜನ ಬಂಧಿಸಿ ಎನ್ನುತ್ತಾರೆ. ಪೊಲೀಸ್ ಇಲಾಖೆ ಯಾವುದೇ ಸರ್ಕಾರದ ಅಡಿಯಲ್ಲಿ ಇರುವಂತಾಗಬಾರದು. ಯಾರು ತಪ್ಪು ಮಾಡಿದ್ರೂ ತಪ್ಪೆ ಎಂದರು.ಅಮಾಯಕ ಹಿಂದೂಗಳ ಮೇಲೆ ಹಲ್ಲೆಯಾಗುತ್ತಿದೆ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ. ಸರ್ಕಾರ, ಸಿಎಂ ಹೇಳಿದಂತೆ ಕೇಳಿದರೆ ಸುಮ್ಮನಿರಲ್ಲ. ಇನ್ಮುಂದೆ ರಾಜ್ಯದಲ್ಲಿ ಮಸೀದಿಗಳನ್ನು ಚೆಕ್ ಮಾಡಬೇಕು, ಕ್ರಿಮಿನಲ್ ಮುಂದೆ ಪೊಲೀಸ್ ಅಧಿಕಾರಿಗಳು ಎದ್ದು ನಿಲ್ಲುತ್ತಾರೆ. ಆದರೆ, ಹೀಗಾಗಬಾರದು, ನೀವು ಒನ್ ಸೈಡ್ ಕೆಲಸ ಮಾಡಬಾರದು, ಶಾಂತಿ ಭಂಗ ಆಗಿದ್ದು ಮುಸ್ಲಿಮರಿಂದ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.