ಸಚಿವ ಜಮೀರ್‌ ಅಹಮದ್‌ ನಡೆ ಖಂಡಿಸಿದ ಮುತಾಲಿಕ್

| Published : Nov 13 2025, 12:05 AM IST

ಸಾರಾಂಶ

ಕಳೆದ ಒಂದು ತಿಂಗಳಿಂದ ಪೆರೇಸಂದ್ರ ಜೋಳದ ಕಿಟ್ಟಿ(ರಾಮಕೃಷ್ಣ) ಮತ್ತು ಇಪ್ಪತ್ತು ಜನ ರೈತರಿಗೆ ಜೋಳ ಖರೀದಿಸಿ ಹಣ ನೀಡಿದೆ ವಂಚಿಸಿರುವ ಪ್ರಕರಣಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಜೋಳ ಬೆಳೆಯುವ ರೈತರ ಬದುಕು ಕಳೆದ ಒಂದು ತಿಂಗಳಿಂದ ಹೈರಾಣಾಗಿ ಹೋಗಿದೆ. ಪೆರೇಸಂದ್ರದ ಜೋಳದ ಕಿಟ್ಟಿ (ರಾಮಕೃಷ್ಣ)ಗೆ ಹೈದರಾಬಾದ್‌ನ ಅಕ್ರಮ್, ಸೈಯದ್ ಮತ್ತು ಸದ್ದಾಂ ಎಂಬ ಮೂವರಿಂದ ಆಗಿರುವ ಮೋಸಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ. ರಾಜ್ಯದ ಜೋಳ ಬೆಳೆಗಾರ ರೈತರಿಗೆ ವಂಚನೆ ಮಾಡಿದವರನ್ನು ಬಂಧಿಸಬೇಕು. ಮಧ್ಯಪ್ರವೇಶಿಸಿದ ಸಚಿವ ಜಮೀರ್ ಅಹಮದ್ ಕೂಡ ತಮ್ಮ ಸಮುದಾಯದವರ ಪರವಾಗಿ ನಿಂತಿರುವುದು ಇನ್ನೂ ಅನ್ಯಾಯ ಎಂದು ಶ್ರೀರಾಮ್ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.ಕಳೆದ ಒಂದು ತಿಂಗಳಿಂದ ಪೆರೇಸಂದ್ರ ಜೋಳದ ಕಿಟ್ಟಿ(ರಾಮಕೃಷ್ಣ) ಮತ್ತು ಇಪ್ಪತ್ತು ಜನ ರೈತರಿಗೆ ಜೋಳ ಖರೀದಿಸಿ ಹಣ ನೀಡಿದೆ ವಂಚಿಸಿರುವ ಪ್ರಕರಣಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪೊಲೀಸರ ಕೈಗೆ ಸಿಕ್ಕಿದ್ದ ಮೋಸಗಾರರನ್ನ ಬಿಡಿಸಲು ಸಹಾಯ ಮಾಡಿದ ವಸತಿ ಸಚಿವ ಜಮೀರ್ ಅಹಮದ್‌ನಿಂದಲೇ ಇಷ್ಟೊಂದು ಅವಾಂತರ ಸೃಷ್ಟಿಯಾಗಿದೆ. ಇಲ್ಲಾ ಅಂದಿದ್ರೆ ಇಷ್ಟೊತ್ತಿಗೆ ನಮ್ಮ ಹಣ ಅವರ ಕೈಗೆ ತಲುಪುತಿತ್ತು.

ಕಿಟ್ಟಿ ಪರ ಶ್ರೀರಾಮ್ ಸೇನೆ‌ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬುಧವಾರ ಕಿಟ್ಟಿ ಮನೆಗೆ ಬಂದು ನಡೆದ ಘಟನೆ ವಿವಿರಗಳನ್ನು ಪಡೆದು ನಂತರ ಜಿಲ್ಲಾಧಿಕಾರಿಗಳ ಭೇಟಿಗೆ ಹೋಗಿದ್ದರೂ ಜಿಲ್ಲಾಧಿಕಾರಿಗಳು ಸಿಗದೆ ವಾಪಸ್ಸಾದರು.

ಸಿಕೆಬಿ-5 ತಾಲೂಕಿನ ಪರೆಸಂದ್ರದಲ್ಲಿ ಹೈದರಾಬಾದ್ ವ್ಯಾಪಾರಿಗಳಿಂದ ವಂಚನೆಗೊಳಗಾಗಿರುವ ಜೋಳದ ರಾಮಕೃಷ್ಣ ರ ಮನೆಗೆ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಸ್ವಾಂತನ ಹೇಳಿದರು.