ಬಾಗಲಕೋಟೆ: ನಗರದಲ್ಲಿ ರಾಮಸೇನೆಯಿಂದ ಫೆ.23ರಂದು ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಬೇಕಿದ್ದ ಸಂಘಟನೆ ಮುಖ್ಯಸ್ಥೆ ಪ್ರಮೋದ ಮುತಾಲಿಕ, ಹಿಂದೂ ಕಾರ್ಯಕರ್ತ ಪುನಿತ್ ಕೆರೆಹಳ್ಳಿ ಜಿಲ್ಲೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಸಂಗಪ್ಪ ಆದೇಶಿಸಿದ್ದಾರೆ. ಗುರುವಾರ ರಾತ್ರಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಪ್ರಕರಣವನ್ನು ಜಿಲ್ಲಾಧಿಕಾರಿಗಳು ಉದ್ದೇಶಿಸಿ ಮುತಾಲಿಕ್ ಹಾಗೂ ಕೆರೆಹಳ್ಳಿ ದ್ವೇಷ ಭಾಷಣ ಮಾಡಿದಲ್ಲಿ ನಗರದ ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಮಟ್ಟಿಗೆ ಇಬ್ಬರು ಜಿಲ್ಲೆಗೆ ಆಗಮಿಸದಂತೆ ಆದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ.